ಬುಕ್ ಬ್ರಹ್ಮದಿಂದ ವಿವಿಧ ಸ್ಪರ್ಧೆಗಳು : ಬರಹಗಳಿಗೆ ಆಹ್ವಾನ

Date: 03-08-2020

Location: ಬೆಂಗಳೂರು


ಕನ್ನಡ ಸಾರಸ್ವತ ಲೋಕದ ಸಾಹಿತ್ಯ ದಾಖಲೀಕರಣ ಹಾಗೂ ಸುದ್ದಿಯ ತಾಣ ಬುಕ್‌ ಬ್ರಹ್ಮ ವೆಬ್‌ಸೈಟ್‌ ಬರಹಗಾರರಿಗಾಗಿ ‘ಜನ ಮೆಚ್ಚಿದ ಕತೆ’, ‘ಜನ ಮೆಚ್ಚಿದ ಕವಿತೆ’, ‘ನನ್ನ ನೆಚ್ಚಿನ ಪುಸ್ತಕ’ ಹಾಗೂ ‘ಜನ ಮೆಚ್ಚಿದ ಪ್ರಬಂಧ-ಲೇಖನ’ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಗೆ ಕತೆ, ಕವಿತೆ, ಪುಸ್ತಕ ವಿಮರ್ಶೆ ಹಾಗೂ ಪ್ರಬಂಧ/ಲೇಖನ ಕಳುಹಿಸಲು ಆಗಸ್ಟ್‌ 5 ಕೊನೆಯ ದಿನ.

ಸ್ಪರ್ಧೆಯ ನಿಯಮಗಳು ಇಂತಿವೆ:

1. ಸ್ಪರ್ಧೆಗೆ ಕಳುಹಿಸುವ ಕತೆ/ಕವಿತೆ/ನನ್ನ ನೆಚ್ಚಿನ ಪುಸ್ತಕ/ ಪ್ರಬಂಧ-ಲೇಖನ ಸ್ವಂತ ರಚನೆಯಾಗಿರಬೇಕು. ಅನುವಾದಿತ ಬರಹ ಆಗಿರಬಾರದು.

2. ಪ್ರತಿ ವಿಭಾಗದಲ್ಲಿ ಮೊದಲ ಬಹುಮಾನ ಪಡೆದವರಿಗೆ ತಲಾ ಒಂದು ಸಾವಿರ ರೂಪಾಯಿಗಳ ಪುಸ್ತಕಗಳನ್ನು ಕಳುಹಿಸಲಾಗುತ್ತದೆ. ಎರಡನೆಯ ಮತ್ತು ಮೂರನೆಯ ಬಹುಮಾನಿತರಿಗೆ ಪ್ರಶಸ್ತಿ ಪತ್ರ ನೀಡಲಾಗುತ್ತದೆ.

3. ಒಬ್ಬರು ನಾಲ್ಕು ಪ್ರಕಾರಗಳಲ್ಲಿಯೂ ಭಾಗವಹಿಸುವ ಅವಕಾಶವಿದೆ. ಆದರೆ ಒಬ್ಬರು ಒಂದು ಕತೆ/ಕವಿತೆ/ನನ್ನ ನೆಚ್ಚಿನ ಪುಸ್ತಕ/ಪ್ರಬಂಧ-ಲೇಖನಕ್ಕೆ ಮಾತ್ರ ಅವಕಾಶವಿದೆ.

4. ಸ್ಪರ್ಧೆಗೆ ಅಪ್ರಕಟಿತ ಕತೆ/ಕವಿತೆ/ನನ್ನ ನೆಚ್ಚಿನ ಪುಸ್ತಕ/ಪ್ರಬಂಧ-ಲೇಖನ ಮಾತ್ರ ಕಳುಹಿಸತಕ್ಕದ್ದು.

* ಜನ ಮೆಚ್ಚಿದ ಕತೆ ಸ್ಪರ್ಧೆಗೆ ಕತೆ ಕಳುಹಿಸಲು ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ: ಜನ ಮೆಚ್ಚಿದ ಕತೆ

* ಜನ ಮೆಚ್ಚಿದ ಕವಿತೆ ಸ್ಪರ್ಧೆಗೆ ಕವಿತೆ ಕಳುಹಿಸಲು ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ: ಜನ ಮೆಚ್ಚಿದ ಕವಿತೆ

* ಜನ ಮೆಚ್ಚಿದ ಪ್ರಬಂಧ-ಲೇಖನ ಸ್ಪರ್ಧೆಗೆ ಪ್ರಬಂಧ ಲೇಖನ ಕಳುಹಿಸಲು ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ: ಜನ ಮೆಚ್ಚಿದ ಪ್ರಬಂಧ-ಲೇಖನ

* ನನ್ನ ನೆಚ್ಚಿನ ಪುಸ್ತಕ ಸ್ಪರ್ಧೆಗೆ ಪುಸ್ತಕ ವಿಮರ್ಶೆ ಕಳುಹಿಸಲು ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ: ನನ್ನ ನೆಚ್ಚಿನ ಪುಸ್ತಕ

 

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...