ಚಾರಿತ್ರ್ಯ ಸೃಷ್ಟಿಸುವಲ್ಲಿ ಪುಸ್ತಕದ ಪಾತ್ರ ದೊಡ್ಡದು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Date: 27-06-2022

Location: ಬೆಂಗಳೂರು


ನಮ್ಮ ದೇಶಕ್ಕೆ ಬಹಳ ದೊಡ್ಡ ಚರಿತ್ರೆಯಿದೆ. ಆದರೆ ನಮಗೆ ಬೇಕಾದದ್ದು ಚಾರಿತ್ಯ್ರ. ಚಾರಿತ್ಯ್ರವನ್ನು ಒಂದು ಕೃತಿಯು ಸೃಷ್ಟಿಸಬಲ್ಲದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ 'Modi @ 20: Dreams Meet Delivery' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೊಸತನವನ್ನು ಪಡೆಯುವಂತಹ ಕೆಲಸವನ್ನು ಪ್ರತಿಯೊಬ್ಬ ವ್ಯಕ್ತಿಯು ಮಾಡಬೇಕಿದೆ. ಅಂತಹ ಕೆಲಸಗಳು ನಮ್ಮನ್ನು ಬೆಳೆಸುತ್ತವೆ. ಅಂತಹ ಕೆಲಸ ಕೃತಿಗಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.

ಪ್ರಸ್ತುತ `ಮೋದಿ@20' ಕೃತಿಯಲ್ಲಿ ಸಾಧಕರ ವಿಚಾರಗಳನ್ನ, ಸಾಧಕರು ಬರೆದ ಲೇಖನಗಳನ್ನ ನಾವು ಕಾಣಬಹುದಾಗಿದೆ. ಪುಸ್ತಕವನ್ನು ಬರೆದವರು ಎಲ್ಲರೂ ಕೂಡ ಸಾಧಕರೇ. ಅದು ಇನ್ಪೋಸಿಸ್ ಒಡತಿ ಸುಧಾ ಮೂರ್ತಿ ಅವರಿಂದ ಹಿಡಿದು ಬ್ಯಾಡ್ಮಿಟನ್ ಆಟಗಾರ್ತಿ ಸಿಂಧೂವರೆಗೂ ಆಗಿರಬಹುದು ಎಂದರು.

ಚಾರಿತ್ಯ್ರವೆಂದರೆ ದೇಶದ ಜನರ ಜೀವನ ಮೌಲ್ಯಗಳು, ಜನರ ನಡವಳಿಕೆಗಳು ಹಾಗೂ ಅವರ ಸಂಬಂಧಗಳು. ಇವೆಲ್ಲದರ ಆಧಾರದ ಮೇಲೆ ನೈತಿಕ ಮೌಲ್ಯ ನಿರ್ಧಾರವಾಗುತ್ತದೆ ಎಂದರು.

ಇನ್ಪೋಸಿಸ್ ಸಂಸ್ಥಾಪಕಿ ಸುಧಾ ಮೂರ್ತಿ ಮಾತನಾಡಿ, ನಾನು ನನ್ನ ಇತಿಮಿತಿಗಳಿಗೆ ಅನುಗುಣವಾಗಿ ಲೇಖನವನ್ನು ಬರೆಯಬಹುದು. ಹತ್ತಿರದಿಂದ ಕಂಡು ಅನುಭವಿಸಿದ್ದನ್ನು ಗಟ್ಟಿಯಾಗಿ ಬರೆಯಲು ಸಾಧ್ಯ. ಆದರೆ ಮೋದೀಜಿ ಬಗ್ಗೆ ಬರೆಯುವಂತೆ ನನ್ನನ್ನು ಕೇಳಿದಾಗ ನಾನು ಅವರ ಕುರಿತು ಏನನ್ನು ಬಲ್ಲೆ ಎನ್ನುವ ಪ್ರಶ್ನೆ ನನ್ನಲ್ಲಿ ಮೂಡಿತು. ಕಾರಣ ಅವರನ್ನು ಹತ್ತಿರದಿಂದ ಕಂಡವಳಲ್ಲ. ಅವರೊಂದಿಗೆ ಕೆಲಸ ಮಾಡಿದವಳೂ ಅಲ್ಲ. ಆದರೂ ಇಲ್ಲಿ ನಾನು ಮೋದೀಜಿ ಅವರ ಕುರಿತ ನನ್ನ ಅನುಭವಗಳನ್ನು ಬರೆದಿದ್ದೇನೆ ಎಂದರು.

ಪ್ರತಿಯೊಬ್ಬ ಲೇಖಕನಿಗೆ ಬರವಣಿಗೆ ಅನ್ನುವುದು ಹೃದಯದಿಂದ ಮೂಡಿ ಬರಬೇಕು. ಆಗ ಕಾಗದದಲ್ಲಿ ಸುಂದರವಾಗಿ ಪಡಿಯಚ್ಚಾಗಬಹುದು ಎಂದರು.

ಕೃತಿಯನ್ನು ಲೋಕಾರ್ಪಣೆಗೊಳಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೃತಿಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್, ಚಲನಚಿತ್ರ ನಟಿ ತಾರಾ, ಇಂಧನ ಸಚಿವ ಸುನಿಲ್ ಕುಮಾರ್, ವಸತಿ ಸಚಿವ ಸೋಮಣ್ಣ, ಮಾಹಿತಿ ಮತ್ತು ಪ್ರಸಾರ ಸಚಿವ ಎಲ್. ಮುರುಗನ್, ಶಾಸಕ ಉದಯ ಗರುಡಾಚರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಂಕರ್ ಪ್ರಸಾದ್ ನಿರೂಪಿಸಿದರು.

ಕಾರ್ಯಕ್ರಮ ಫೋಟೋ ಗ್ಯಾಲರಿ :

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...