ದಲಿತ ಸಾಹಿತ್ಯ ಇತಿಹಾಸದ ಪುನರ್ ವಿಮರ್ಶೆ ಅಗತ್ಯ: ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯ

Date: 18-01-2021

Location: ತುಮಕೂರು


ಕನ್ನಡದಲ್ಲಿ ಬಂದ ದಲಿತ ಸಾಹಿತ್ಯದ ಇತಿಹಾಸವನ್ನು ಪುನರ್ ವಿಮರ್ಶಿಸಬೇಕಿದೆ ಎಂದು ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ತುಮಕೂರಿನ ಅಮಾನಿಕರೆ ಬಳಿಯ ಕನ್ನಡ ಭವನದಲ್ಲಿ ಕತೆಗಾರ ಗುರುಪ್ರಸಾದ್ ಕಂಟಲಗೆರೆ ಅವರ ‘ಕೆಂಡದ ಬೆಳದಿಂಗಳು’ ಕತಾ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಮಾಜಿ ಸಚಿವ ಹಾಗೂ ದಲಿತ ಚಿಂತಕ ಬಸಲಿಂಗಪ್ಪ ಅವರು ಕನ್ನಡ ಸಾಹಿತ್ಯವನ್ನು ‘ಬೂಸಾ’ ಎಂದು ಜರಿದಿದ್ದರು. ದಲಿತರ-ದೀನ ದುರ್ಬಲರ ನೋವಿಗೆ ಸ್ಪಂದಿದ ಯಾವುದೇ ಪ್ರಕಾರದ ಸಾಹಿತ್ಯವು ‘ಬೂಸಾ’ ಆಗಿದ್ದು, ಇದಕ್ಕೆ ಕನ್ನಡದ ಬಹುತೇk ಸಾಹಿತ್ಯವು ‘ಬೂಸಾ’ ಆಗಿದೆ ಎಂದು ನೋವಿನಿಂದ ಮತ್ತು ಆಕ್ರೋಶದಿಂದ ಹೇಳುವ ಮೂಲಕ ಸಾಹಿತ್ಯದ ಉದ್ದೇಶಗಳನ್ನು ಸ್ಪಷ್ಟಪಡಿಸಿದ್ದು ಮಾತ್ರವಲ್ಲ; ದಲಿತರು ತಮ್ಮ ನೋವನ್ನು ಗಟ್ಟಿಯಾಗಿ ಸಾಹಿತ್ಯದ ಮೂಲಕ ಬಿಂಬಿಸುವಂತೆಯೂ ಅವರು ಪ್ರೇರೇಪಿಸಿದ್ದರು. ಏಕೆಂದರೆ, ನೋವನ್ನುಂಡ ದಲಿತ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಬಲ್ಲುದು ಎಂಬುದು ಅವರ ಆಶಯವಾಗಿತ್ತು ಎಂದು ಹೇಳಿದರು.

ದಲಿತ ಸಾಹಿತ್ಯದ ಉತ್ತಮ ಕೃತಿಗಳು : ಕನ್ನಡದ ದಲಿತ ಸಾಹಿತ್ಯದಲ್ಲಿ ಉತ್ತಮ ಕೃತಿಗಳು ಇಂದಿಗೂ ಪ್ರಕಟವಾಗುತ್ತಿವೆ. ಆದರೆ, ಅವುಗಳ ಗುಣಮಟ್ಟದ ವಿಮರ್ಶೆ ಜೊತೆಗೆ ಕನ್ನಡ ಸಾಹಿತ್ಯ ವಲಯಕ್ಕೆ ಪರಿಚಯಿಸುವ ಕೆಲಸ ವಾಗುತ್ತಿಲ್ಲ. ಆದ್ದರಿಂದ, ದಲಿತ ಸಾಹಿತ್ಯವನ್ನು ಪುನರ್ ವಿಮರ್ಶಿಸುವ ಅಗತ್ಯವಿದೆ. ಆ ಮೂಲಕ ದಲಿತರ ಸ್ವಾಭಿಮಾನವನ್ನು ಕಾಯ್ದುಕೊಳ್ಳುವ ಜೊತೆಗೆ ಅಸ್ಪೃಶ್ಯರು ಎನಿಸಿಕೊಂಡಿದ್ದ ದ;ಲಿತರಲ್ಲೂ ಪ್ರತಿಭೆ ಇದೆ ಎಂದು ತೋರಬೇಕಿದೆ. ದಲಿತ ಸಾಹಿತ್ಯ ಇನ್ನೇನು ಮಾಡಬಹುದು ಎಂಬುದಕ್ಕೂ ಇಂತಹ ವಿಮರ್ಶಾತ್ಮಕ ಕೆಲಸಗಳು ಉತ್ತಮ ದಿಕ್ಸೂಚಿಗಳಾಗಲಿವೆ ಎಂದರು.

ಆಹಾರ ರಾಜಕಾರಣ: ಜನರು ತಿನ್ನುವ ಆಹಾರವನ್ನೂ ಸಹ ರಾಜಕಾರಣಕ್ಕೆ ಬಳಸಿಕೊಳ್ಳುವ ಹೀನ ಪ್ರವೃತ್ತಿ ಕಾಣುತ್ತಿದ್ದೇವೆ. ದಲಿತ ಸಾಹಿತ್ಯ ರಚನೆ ಮೂಲಕ ಇಂತಹ ವಿದ್ಯಮಾನಗಳಿಗೆ ತಕ್ಕ ಉತ್ತರ ನೀಡುವ ಹೊಣೆಗಾರಿಕೆ ಸಾಹಿತ್ಯ ವಲಯದ್ದಾಗಿದೆ. ಕತೆಗಾರ ಗುರುಪ್ರಸಾದ್ ಕಂಟಲಗೆರೆ ಅವರ ‘ಕೆಂಡದ ಬೆಳದಿಂಗಳು’ ಕತಾ ಸಂಕಲನವು ಇಂತಹ ಸಾಮಾಹಿಕ ಹೊಣೆಗಾರಿಕೆ ಮೆರೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯವಾಹಿನಿಯಲ್ಲಿ ದಲಿತರು: ಕನ್ನಡ ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಅಸ್ಪೃಶ್ಯರಾಗೇ ನೋಡುವ ಕಾಲವೂ ಇತ್ತು, ಆದರೆ, ದಲಿತ ಲೇಖಕರು ತಮ್ಮ ದಲಿತ ಪ್ರಜ್ಞೆಯಿಂದ ಪ್ರಬಲವಾಗಿ ಬರೆಯಲು ಆರಂಭಿಸುವ ಮೂಲಕ ಅವರೂ ಈಗ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು. ಕತೆಗಾರ ಗುರುಪ್ರಸಾದ್ ಕಂಟಲಗೆರೆ ಅವರನ್ನು ಸನ್ಮಾನಿಸಲಾಯಿತು.

ವೇಧಿಕೆ ಮೇಲೆ ಕತೆಗಾರ ಎಸ್. ಗಂಗಾಧರಯ್ಯ, ಸಾಮಾಜಿಕ ಚಿಂತಕ ಎಸ್. ರುದ್ರಸ್ವಾಮಿ ಹಾಗೂ ಕೆ. ದೊರೈರಾಜ್, ಬಾ. ಹ. ರಮಾಕುಮಾರಿ, ಕುಂದೂರು ತಿಮ್ಮಯ್ಯ, ಆರ್. ಪರಶಿವಮೂರ್ತಿ, ಮಲ್ಲಿಕಾ ಬಸವರಾಜು, ಡ್ಯಾಗೇಹಳ್ಳಿ ವಿರೂಪಾಕ್ಷ ಮುಖ್ಯ ಅತಿಥಿಗಳಾಗಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು, ಜಾತ್ಯತೀತ ಯುವ ವೇದಿಕೆ, ಜಿಲ್ಲಾ ಲೇಖಕಿಯರ ಬಳಗ ಹಾಗೂ ಕಂಟಲಗೆರೆ ಬುಕ್ಸ್ ಸಂಸ್ಥೇಯ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

 

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...