ದಾವಣಗೆರೆಯ ಎಲ್ಲಾ ಭಾಷಾರಸಸ್ವಾದಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟ ಕೃತಿಯಿದು; ಎಂ. ವಿ. ರೇವಣಸಿದ್ದಯ್ಯ

Date: 28-03-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ "ರ ಠ ಈ ಕ" ಬುಧವಾರದಂದು ಬೆಂಗಳೂರಿನ ಮಲ್ಲೇಶ್ವರಂನ ಕ್ಲಬ್ಬಿನಲ್ಲಿ ಬಿಡುಗಡೆಯಾಯಿತು.

ಕೃತಿಯನ್ನು ಲೋಕರ್ಪಾಣೆಗೊಳಿಸಿ ಮಾತನಾಡಿದ ಖ್ಯಾತ ವಕೀಲ ಎಂ. ವಿ. ರೇವಣಸಿದ್ದಯ್ಯ, "ಪ್ರಾದೇಶಿಕ ಭಾಷೆಯ ಕೃತಿಗಳನ್ನು ಇಂಗ್ಲೀಷಿನಂತಹ ಜಾಗತಿಕ ಭಾಷೆಗಳಿಗೆ ಅನುವಾದಿಸುವಾಗ ಅಥವಾ ಆ ಭಾಷೆಯಲ್ಲಿ ಸೃಷ್ಠಿಸುವಾಗ ಯಾವ ರೀತಿಯಲ್ಲಿ ಇಲ್ಲಿನ ಪ್ರಾದೇಶಿಕ ನುಡಿಗಟ್ಟು, ಭಾಷಾಶೈಲಿ, ಒಡಪುಗಳನ್ನು ಜಾಗತಿಕಗೊಳಿಸಬೇಕು ಎಂಬುದಕ್ಕೆ ಈ ಕೃತಿ ಒಂದು ಮಾದರಿಯಾಗಿದೆ. ನಾನು ಈ ಕೃತಿಯನ್ನು ಮೂರು ವರ್ಷಗಳ ಹಿಂದೆಯೇ ಕನ್ನಡದಲ್ಲಿ ಓದಿದ್ದೆ. ಅದು ದಾವಣಗೆರೆಯ ಎಲ್ಲಾ ಭಾಷಾರಸಸ್ವಾದಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿತ್ತು. ಹಾಗಾಗಿ ಈ ಕೃತಿಯ ಇಂಗ್ಲಿಷ್ ಅನುವಾದ ಹೇಗಿರಬಹುದು ಎಂಬ ಸಹಜ ಕುತೂಹಲವಿತ್ತು. ರವಿಯವರು "ರ ಠ ಈ ಕ" ವನ್ನು ನನ್ನ ಊಹೆಗೆ ಮೀರಿ ಇನ್ನಷ್ಟು ಸ್ವಾರಸ್ಯಕರವಾಗಿ ಇಂಗ್ಲಿಷಿನಲ್ಲಿ ಸೆರೆ ಹಿಡಿದಿದ್ದಾರೆ," ಎಂದರು.

ಚೆನ್ನೈ ಫರ್ಟಿಲಿಟಿ ಸೆಂಟರ್ಸ್ ನ ಡಾ. ಗೌತಮ್ ಹಂಜಿ ಕೃತಿಯ ಕುರಿತು ಮಾತನಾಡಿ, "ಈ ಕೃತಿಯ ಹಲವಾರು ಘಟನೆಗಳಿಗೆ ನಾನು ಸಾಕ್ಷಿಯಾಗಿದ್ದೆ. ಆದರೆ ಎಂದೋ ಮರೆತುಹೋಗಿದ್ದ ಘಟನೆಗಳು ಈ ಕೃತಿಯನ್ನು ಓದಿದಾಗ ನೆನ್ನೆ ಮೊನ್ನೆಯಷ್ಟೇ ನಡೆದಂತೆ ಮತ್ತೆ ಕಣ್ಣ ಮುಂದೆ ಚಿತ್ರಗಟ್ಟಿದವು. ನಿಜಕ್ಕೂ ಕನ್ನಡ ಕೃತಿಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸುವ ರೀತಿ ಹೇಗಿರಬೇಕು ಎಂಬುದಕ್ಕೆ ಈ ಕೃತಿ ಒಂದು ಮಾದರಿಯಾಗಿದೆ," ಎನ್ನುತ್ತಾ ತಮ್ಮ ದಾವಣಗೆರೆಯ ನೆನಪುಗಳನ್ನು ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಲ್ಲೇಶಪ್ಪ, ಪ್ರಕಾಶಕ ಸಂವಹನ ಲೋಕಪ್ಪ ಮತ್ತು ಲೇಖಕ ರವಿ ಹಂಜ್ ಉಪಸ್ಥಿತರಿದ್ದರು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...