ಡಗ್ಲಾಸ್ ರ ‘ಶಗ್ಗಿ ಬೈನ್‌’ ಕಾದಂಬರಿಗೆ ಬೂಕರ್ ಪ್ರಶಸ್ತಿ

Date: 21-11-2020

Location: ಬೆಂಗಳೂರು


ಸ್ಕಾಟಿಷ್‌ ಲೇಖಕ ಡಗ್ಲಾಸ್‌ ಸ್ಟುವರ್ಟ್‌ ಅವರ ಚೊಚ್ಚಲ ಕಾದಂಬರಿ ‘ಶಗ್ಗಿ ಬೈನ್‌’ಗೆ ‍2020ನೇ ಸಾಲಿನ ಬೂಕರ್ ಪ್ರಶಸ್ತಿ ಲಭಿಸಿದೆ.

‘ನಾನೊಬ್ಬ ಬರಹಗಾರನಾಗಬೇಕೆಂದು ಕನಸು ಕಂಡಿದ್ದೆ. ಅದು ಈ ಕಾದಂಬರಿಯ ಮೂಲಕ ನನಸಾಗಿದೆ. ಈ ಕಾದಂಬರಿ ನನ್ನ ಬದುಕನ್ನೇ ಬದಲಿಸಿತು‘ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ದುಬೈನ ಭಾರತೀಯ ಮೂಲದ ಲೇಖಕ ಅವ್ನಿ ದೋಷಿ ಅವರ ಚೊಚ್ಚಲ ಕಾದಂಬರಿ ‘ಬರ್ನಟ್‌ ಶುಗರ್‘ ಸೇರಿದಂತೆ ಒಟ್ಟು ಆರು ಲೇಖಕರ ಕೃತಿಗಳು ಸ್ಪರ್ಧೆಯಲ್ಲಿದ್ದವು. ಮದ್ಯಪಾನ ವ್ಯಸನದಿಂದ ಮೃತಪಟ್ಟ ತನ್ನ ತಾಯಿಗೆ ಸ್ಟುವರ್ಟ್ ಅವರು ಈ ಕಾದಂಬರಿಯನ್ನು ಅರ್ಪಿಸಿದ್ದು, ಗ್ಲ್ಯಾಸ್ಕೊದಲ್ಲಿ ನಡೆಯುವ ಪ್ರೇಮ ಮತ್ತು ಮದ್ಯಪಾನ ವಿಷಯ ಕುರಿತ ಕಥಾ ವಸ್ತುವನ್ನು ಒಳಗೊಂಡಿದೆ.

MORE NEWS

ಸಾಮಾಜಿಕ ಕಳಕಳಿಯ ಲೇಖಕ ವಿಠ್ಠಲ ಭಂಡ...

08-05-2021 ಬೆಂಗಳೂರು

ದೇಶದ ಪ್ರಜಾಪ್ರಭುತ್ವ ಮೌಲ್ಚಗಳನ್ನು ಪ್ರತಿಪಾದಿಸುವ ‘ಸಂವಿಧಾನದ ಓದು’ ಚಳವಳಿಯ ಮೂಲಕ ರಾಜ್ಯದಾದ್ಯಂತ ಚಿರಪ...

ಪ್ರಗತಿಪರ ಸಾಹಿತಿ ಡಾ. ಜಿ. ಭಾಸ್ಕರ...

06-05-2021 ‌ಉಡುಪಿ

ವೈಚಾರಿಕ ಹಾಗೂ ಪ್ರಗತಿಪರ ಸಾಹಿತಿ ಎಂದೇ ಗುರುತಿಸಿಕೊಂಡಿದ್ದ ಡಾ. ಜಿ. ಭಾಸ್ಕರ ಮಯ್ಯ ಅವರು ಗುರುವಾರ ಬೆಳಗ್ಗೆ ನಿಧನರಾಗಿ...

ಜನಪದರ ನಂಬಿಕೆಗಳು ಪ್ರಾಕೃತಿಕ  ಪರಿ...

05-05-2021 ಜೂಮ್ ಆಪ್

ಜನಪದರ ನಂಬಿಕೆಗಳು ಮೌಢ್ಯವಲ್ಲ. ಅವು ಪ್ರಕೃತಿ ಪ್ರೇಮದ ಆರೋಗ್ಯಕರ ಬೇರುಗಳು ಎಂದು ಜಾನಪದ ತಜ್ಞೆ ಡಾ. ಎ.ಎನ್. ಸಿದ್ಧೇಶ್ವ...