ಎರಡು ದಿನಗಳ ‘ರಾಜ್ಯಮಟ್ಟದ ಸಾಹಿತ್ಯ ಕಮ್ಮಟ -ಕಥಾಯಾನ’

Date: 26-02-2021

Location: ಬೆಂಗಳೂರು


ಕೈಗಾ ವಸತಿ ಸಂಕೀರ್ಣ ವತಿಯಿಂದ ಎರಡು ದಿನಗಳ ‘ರಾಜ್ಯಮಟ್ಟದ ಸಾಹಿತ್ಯ ಕಮ್ಮಟ -ಕಥಾಯಾನ’ವನ್ನು ಆಯೋಜಿಸಿದೆ. ಆಸಕ್ತ ಉದಯೋನ್ಮುಖ ಬರಹಗಾರರು ಹೆಸರು ನೋಂದಾಯಿಸಿಕೊಳ್ಳಬಹುದು. 2021ರ ಮಾರ್ಚ್ 14-15 ರಂದು ಸಾಹಿತ್ಯ ಕಮ್ಮಟ ನಡೆಯಲಿದೆ.

ಸೂಚನೆಗಳು :

  • ಆಯ್ಕೆ ಪ್ರಕ್ರಿಯೆ ಮಾನದಂಡವಾಗಿ ಆಸಕ್ತ ಶಿಬಿರಾರ್ಥಿಗಳು ತಮ್ಮ ಇತ್ತೀಚಿನ ಪ್ರಕಟಿತ ಅಥವಾ ಹಸ್ತಪ್ರತಿ ರೂಪದಲ್ಲಿರುವ ಕಥೆ, ಲೇಖನ, ವೈಜ್ಞಾನಿಕ ಬರಹ ಯಾವುದಾದರೂ ಒಂದನ್ನು750 ಶಬ್ದ ಮಿತಿಯಲ್ಲಿ kathayaana@gmail.com ಗೆ ಫೆ. 28 ರ ಒಳಗಾಗಿ ಸಲ್ಲಿಸಲು ಕೋರಿದೆ.
  • ಈ ಬರಹಗಳನ್ನು ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಾಗಿಯೂ ಗಣಿಸಲಾಗುತ್ತಿದ್ದು ಆಯ್ದ ಮೂರು ಉತ್ತಮ ಬರಹಗಳಿಗೆ ರಾಜ್ಯಮಟ್ಟದ ಪುರಸ್ಕಾರ ನೀಡಲಿದೆ. ಸಮಗ್ರ ಸಾಹಿತ್ಯಿಕ ಬರವಣಿಗೆಯ ತಾಂತ್ರಿಕತೆಯ ಕುರಿತು, ಕಥಾಯಾನ-ಸಾಹಿತ್ಯಕ ಕಮ್ಮಟ ಸಂಪನ್ಮೂಲ ವ್ಯಕ್ತಿಗಳಾಗಿ ಕನ್ನಡದ ಪ್ರಮುಖ ಸಾಹಿತಿ ಹಾಗೂ ಬರಹಗಾರರು ಪಾಲ್ಗೊಳ್ಳಲಿದ್ದು, ಬರಹದ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ.
  • ಆಯ್ಕೆಯ ಪ್ರಕ್ರಿಯೆಯು ಬರಹದ ಸಲ್ಲಿಕೆಯ ಮೇರೆಗೆ ಗರಿಷ್ಟ 40-45 ಜನರಿಗೆ ಮಾತ್ರ ಅವಕಾಶ.
  • ಕಮ್ಮಟದ ಸಂಪೂರ್ಣ ನಿರ್ಧಾರಗಳು ಸಂಸ್ಥೆಯ ಅಧೀನಕ್ಕೊಳಪಟ್ಟಿದ್ದು ಯಾವುದೇ ರೀತಿಯ ಮರು ಪರಿಶೀಲನೆ, ಬದಲಾವಣೆಗಳು ಅಥವಾ ಸೂಚನೆಗಳನ್ನು ಪುರಸ್ಕರಿಸಲಾಗುವುದಿಲ್ಲ.
  • ಕಮ್ಮಟದ ಚರ್ಚೆಯಲ್ಲಿ, ಸಾಹಿತ್ಯ ವಿಷಯದ ಬಗ್ಗೆ ಮಾತ್ರ ಚರ್ಚೆಗೆ ಅವಕಾಶ ಇರುತ್ತದೆ.
  • ದೂರದಿಂದ ಬರುವವರು ಮತ್ತು ಹಿಂದಿನ ದಿನವೇ ಬಂದು ತಲುಪುವವರು ಮೊದಲೇ ಈ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡು, ವ್ಯವಸ್ಥೆಗೆ ಸೂಕ್ತ ಯೋಜನೆ ರೂಪಿಸಲು ಸಹಾಯ ಮಾಡಬೇಕು.
  • ಶಿಬಿರಾರ್ಥಿಗಳು ತಮ್ಮ ಇಷ್ಟದ ಸಾಹಿತ್ಯ ಪ್ರಕಾರದಲ್ಲಿ ಕತೆ / ಲೇಖನ / ನುಡಿ ಚಿತ್ರ ಇತ್ಯಾದಿ ಶಬ್ದ ಮಿತಿ 750 ಕ್ಕೊಳಪಟ್ಟು ಆಯ್ಕೆ ಪ್ರಕ್ರಿಯೆಗಾಗಿ ಸಲ್ಲಿಸಬೇಕು. ಉತ್ತಮ ಮೊದಲ ಮೂರು ಬರಹಗಳಿಗೆ ರಾಜ್ಯ ಮಟ್ಟದ ಪುರಸ್ಕಾರವನ್ನು ನೀಡಲಾಗುವುದು.
  • ಕಥಾಯಾನ – ಶಿಬಿರದ ನಂತರ ಆಯ್ದ ಉತ್ತಮ ಕಥೆಗಳ ಕಥಾ ಸಂಕಲನವನ್ನು – ಸ್ನೇಹ ಬುಕ್ ಹೌಸ್ ಬುಕ್ ಹೌಸ್ ಬೆಂಗಳೂರು ಪ್ರ ಕಟಿಸಲಿದೆ.
  • ಶಿಬಿರದಲ್ಲಿ ಪ್ರತ್ಯೇಕವಾಗಿ ತಂಗುವ ವ್ಯವಸ್ಥೆ, ಶಾಖಾಹಾರಿ ಊಟೋಪಚಾರ ಒದಗಿಸಲಾಗುತ್ತದೆ.
  • ಆಸಕ್ತರು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬೇಕು -8277804341 / 9480842680 - 08382-253708, ಎಸ್.ಆರ್.ಎನ್. ಮೂರ್ತಿ 8277804341/ ಸಂತೋಷಕುಮಾರ ಮೆಹೆಂದಳೆ-9480842680

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...