ಫೇಸ್‌ಬುಕ್‌ ಲೈವ್‌ನಲ್ಲಿ ಮೊಳಗಿದ ‘ಕಾಡುವ ಕಿ. ರಂ-2020'

Date: 08-08-2020

Location: ಫೇಸ್‌ಬುಕ್‌ ಲೈವ್


ಕನ್ನಡ ಸಾಹಿತ್ಯ ವಿಮರ್ಶಕ, ಚಿಂತಕ ಪ್ರೊ.ಕಿ.ರಂ.ನಾಗರಾಜ ಅವರ ಹುಟ್ಟು ಹಬ್ಬದ ಸವಿನೆನಪಿಗಾಗಿ ಕಳೆದ ಹತ್ತು ವರ್ಷದಿಂದ ‘ಅಹೋರಾತ್ರಿ ಕಿ. ರಂ.’ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. 

ಬೆಂಗಳೂರು ಆರ್ಟ್ ಫೌಂಡೇಷನ್, ಜನಸಂಸ್ಕೃತಿ ಪ್ರತಿಷ್ಠಾನ ಹಾಗೂ ಕಾವ್ಯಮಂಡಲ ಸಹಯೋಗದಲ್ಲಿ ‘ಕಾಡುವ ಕಿರಂ’ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕೋವಿಡ್ - 19 ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಲೈವ್‌ ಮೂಲಕ ಸುಮಾರು ಮುನ್ನೂರಕ್ಕೂ ಹೆಚ್ಚು ಕವಿಗಳು ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿದರು. 

ಬೆಳಗ್ಗೆ 10:30ಕ್ಕೆ ಕವಯತ್ರಿ ಎಂ. ಆರ್‌. ಕಮಲಾ ಅವರು ತಮ್ಮ ಕವಿತೆ ಓದುವ ಮೂಲಕ ಚಾಲನೆ ನೀಡಿದರು. ಆನಂತರ ಕವಿ-ಕವಯತ್ರಿಯರು ಬೆಳಗ್ಗೆಯಿಂದ ಅಹೋರಾತ್ರಿ ಮುಂಜಾನೆವರೆಗೂ ಕಿ. ರಂ. ಅವರ ನೆನಪಿಗಾಗಿ  ತಮ್ಮ ಕವಿತೆಯನ್ನು ಓದಿ ಆನಂದಪಟ್ಟರು. 

ಜಿ. ಪಿ. ಬಸವರಾಜು, ಕಾಳೇಗೌಡ ನಾಗವಾರ್‌, ರಂಗನಾಥ ಕಂಟನಕುಂಟೆ, ರೇಣುಕಾ ಎಚ್. ಎಸ್., ರಹಮತ್‌ ತರೀಕೆರೆ ಇನ್ನಿತರೆ ಸಾಹಿತ್ಯಾಸಕ್ತರಿದ್ದು, ಲೇಖಕ ಸಿ. ಎಸ್. ದ್ವಾರಕನಾಥ್‌ ಅವರು ಮಂಟೇಸ್ವಾಮಿ ಕಾವ್ಯವನ್ನು ಹಾಡುವ ಮೂಲಕ ಕಿ.ರಂ.ನಾಗರಾಜ ಅವರಿಗೆ ಗೌರವ ಸಲ್ಲಿಸಿ ಸಮಾರೋಪ ಸಮಾರಂಭ ನಡೆಸಿಕೊಟ್ಟರು. 

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...