ಗುಬ್ಬಿಗಳು ರೈತರ ಮಿತ್ರನೂ ಹೌದು..


"ಗುಬ್ಬಚ್ಚಿಗಳು ಇತ್ತೀಚಿನ ವರದಿಗಳ ಪ್ರಕಾರ ಅತ್ಯಂತ ಅಪಾಯದ ಅಂಚಿನಲ್ಲಿರುವ ಪಕ್ಷಿಗಳು ಎಂದು ಗುರುತಿಸಲಾಗಿದೆ. ಇದು ಮಾನವರ ಅತ್ಯಂತ ಹಳೆಯ ಒಡನಾಡಿಗಳಲ್ಲಿ ಒಂದಾಗಿದೆ. ಕಾಲಾನಂತರದಲ್ಲಿ, ಅವರು ನಮ್ಮೊಂದಿಗೆ ವಿಕಸನಗೊಂಡರು. ಗುಬ್ಬಚ್ಚಿಗಳು ಒಂದು ಕಾಲದಲ್ಲಿ ಪ್ರಪಂಚದಾದ್ಯಂತ ಸಾಮಾನ್ಯ ಪಕ್ಷಿಯಾಗಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪಕ್ಷಿಯು ನಗರ ಮತ್ತು ಗ್ರಾಮೀಣ ಆವಾಸಸ್ಥಾನಗಳಲ್ಲಿ ತನ್ನ ನೈಸರ್ಗಿಕ ವ್ಯಾಪ್ತಿಯ ಬಹುಪಾಲು ವಿನಾಶದ ಅಂಚಿನಲ್ಲಿದೆ," ಎನ್ನುತ್ತಾರೆ ಆದಿತ್ಯ ಮಯ್ಯ. ಅವರು ಗುಬ್ಬಚ್ಚಿಗಳ ಕುರಿತು ಬರೆದಿರುವ ಲೇಖನ.

ನಾವು ಚಿಕ್ಕವರಿರುವಾಗ ಗುಬ್ಬಿ ಹಕ್ಕಿಗಳು ಮನೆಯ ಒಬ್ಬ ಸದಸ್ಯನಂತೆಯೇ ಇರುತ್ತಿದ್ದವು. ಮನೆಯ ಹೆಂಚಿನ ಸಂಧಿಯಲ್ಲಿ ಗೂಡುಗಳನ್ನು ಕಟ್ಟಿಕೊಂಡು ಮನೆಯಲ್ಲೆಲ್ಲಾ ಓಡಾಡುತ್ತಿತ್ತು. ಅಲ್ಲದೆ ಮನೆಯ ಚಾವಡಿಯಲ್ಲಿ ಸಾಲಾಗಿ ನೇತಾಡಿಸಿ ಇಡುತ್ತಿದ್ದ ರಾಮ, ಕೃಷ್ಣ, ತಿರುಪತಿ ತಿಮ್ಮಪ್ಪ, ಶಾರದೆ ಹೀಗೆ ಯಾವ ದೇವರ ಫೊಟೋಗಳೇ ಇರಲಿ, ಅವುಗಳ ಹಿಂದೆ ಒಂದು ಗುಬ್ಬಿ ದಂಪತಿಗಳ ಸಂಸಾರ ಇರುತ್ತಿತ್ತು. ಅವುಗಳು ತಂದು ಹಾಕುತ್ತಿದ್ದ ಕಸ ಕಡ್ಡಿಗಳಿಂದ ಮನೆಯ ಹೆಂಗಸರಿಗೆ ಕಿರಿ ಕಿರಿ ಎನಿಸಿದರೂ ಯಾರೂ ಅವುಗಳನ್ನು ಓಡಿಸುತ್ತಿರಲಿಲ್ಲ. ಯಾಕೆಂದರೆ ಅವುಗಳು ‘ದೇವರ ಹಕ್ಕಿ' ಗಳು. ರೈತರು ಬೆಳೆಸುತ್ತಿದ್ದ ಭತ್ತ, ಹುಳು ಹುಪ್ಪಟೆ ಇತ್ಯಾದಿಗಳನ್ನು ತಿಂದು ಬದುಕುತ್ತಿದ್ದ ಗುಬ್ಬಿಗಳು ರೈತರ ಮಿತ್ರನೂ ಹೌದು.

ಗುಬ್ಬಚ್ಚಿಗಳು ಇತ್ತೀಚಿನ ವರದಿಗಳ ಪ್ರಕಾರ ಅತ್ಯಂತ ಅಪಾಯದ ಅಂಚಿನಲ್ಲಿರುವ ಪಕ್ಷಿಗಳು ಎಂದು ಗುರುತಿಸಲಾಗಿದೆ. ಇದು ಮಾನವರ ಅತ್ಯಂತ ಹಳೆಯ ಒಡನಾಡಿಗಳಲ್ಲಿ ಒಂದಾಗಿದೆ. ಕಾಲಾನಂತರದಲ್ಲಿ, ಅವರು ನಮ್ಮೊಂದಿಗೆ ವಿಕಸನಗೊಂಡರು. ಗುಬ್ಬಚ್ಚಿಗಳು ಒಂದು ಕಾಲದಲ್ಲಿ ಪ್ರಪಂಚದಾದ್ಯಂತ ಸಾಮಾನ್ಯ ಪಕ್ಷಿಯಾಗಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪಕ್ಷಿಯು ನಗರ ಮತ್ತು ಗ್ರಾಮೀಣ ಆವಾಸಸ್ಥಾನಗಳಲ್ಲಿ ತನ್ನ ನೈಸರ್ಗಿಕ ವ್ಯಾಪ್ತಿಯ ಬಹುಪಾಲು ವಿನಾಶದ ಅಂಚಿನಲ್ಲಿದೆ. ಅವರ ಅವನತಿ ನಮ್ಮ ಸುತ್ತಲಿನ ಪರಿಸರದ ನಿರಂತರ ಅವನತಿಯ ಸೂಚಕವಾಗಿದೆ. ನಾವೆಲ್ಲಾ ಚಿಕ್ಕವರಿದ್ದಾಗ ಬಿಳಿ ಮತ್ತು ಕಪ್ಪು ಬಣ್ಣಗಳು ಮಿಶ್ರಿತವಾಗಿರುವ ಹೆಚ್ಚಾಗಿ ಬೆಳ್ಳಗೇ ಇರುವ, ಗಂಟಲ ಸುತ್ತಲೂ ಕಂದು ಬಣ್ಣದ ಪಟ್ಟೆ ಇರುವ ನೂರಾರು ಗುಬ್ಬಚ್ಚಿಗಳು ಗುಂಪು ಗುಂಪಾಗಿ ನಮ್ಮೆಲ್ಲರ ಮಧ್ಯೆ ಕಾಣಸಿಗುತ್ತಿತ್ತು ಮನೆಯ ಮುಂದೆ ಚೆಲ್ಲಿರುತ್ತಿದ್ದ ಧಾನ್ಯಗಳನ್ನು, ಹುಳು-ಹುಪ್ಪಟೆ ಮತ್ತು ಗಿಡದ ಎಳೆ ಕುಡಿಗಳನ್ನು ಕೂಕ್ಕಿನಲ್ಲಿ ಚುಚ್ಚಿ ತಿನ್ನುತ್ತಾ ಚಿಂವ್ ಚಿಂವ್ ಎನ್ನುತ್ತಾ ಶಬ್ದ ಮಾಡುತ್ತಿದ್ದದ್ದು ನಮಗೆಲ್ಲಾ ಹಿತವಾಗಿರುತ್ತಿತ್ತು. ಸಾಧಾರಣವಾಗಿ ಮನೆಗಳ ಛಾವಣಿಯ ಜಂತುವಿನಲ್ಲೋ ಇಲ್ಲವೇ ಯಾರೂ ಮುಟ್ಟದಂತಹ ಜಾಗಗಳಲ್ಲಿ ಗೂಡನ್ನು ಕಟ್ಟಿಕೊಂಡು ಅವುಗಳ ಸುಖಃ ಸಂಸಾರ ಫಲವಾಗಿ ಇಡುತ್ತಿದ್ದ ಮೊಟ್ಟೆಗಳನ್ನು ನೋಡುವುದೇ ನಮಗೆ ಆನಂದವಾಗುತ್ತಿತ್ತು. ಆ ಮೊಟ್ಟೆಯೊಡೆದು ಮರಿಗಳಾಗಿ ಅವುಗಳಿಗೆ ಅಮ್ಮ ಆಹಾರವನ್ನು ತಿನ್ನಿಸುವುದನ್ನು ವರ್ಣಿಸುವುದಕ್ಕಿಂತಲು ನೋಡಿ ಅನುಭವಿಸಿದವರಿಗೇ ಗೊತ್ತು ಅದರ ಗಮ್ಮತ್ತು. ಹಾಗಾಗಿಯೇ ಅಂದು ಬಹಳಷ್ಟು ಮನೆಗಳಲ್ಲಿ ತಮ್ಮ ಮುದ್ದಿನ ಮಕ್ಕಳಿಗೆ ಪ್ರೀತಿಯಿಂದ ಗುಬ್ಬಿ ಗುಬ್ಬಿ ಎಂದೇ ಪ್ರೀತಿಯಿಂದ ಸಂಭೋದಿಸುತ್ತಿದ್ದದ್ದೂ ಇದೆ.

ಗುಬ್ಬಚ್ಚಿ ರೈತರ ಮತ್ತು ಜನಸಾಮಾನ್ಯರ ಜೀವನದ ಪ್ರಮುಖ ಭಾಗವಾಗಿತ್ತು. ಮನುಷ್ಯರಿಗೆ ತೊಂದರೆ ಕೊಡುತ್ತಿದ್ದ ಸೊಳ್ಳೆಗಳು ಕೀಟಗಳನ್ನು ತಿನ್ನುತ್ತಿದ್ದದ್ದಲ್ಲದೇ ಮನೆಯ ಮುಂದೆ ಕುಟ್ಟಿ, ಬೀಸಿ ಚೆಲ್ಲಿರುತ್ತಿದ್ದ ಧಾನ್ಯಗಳನ್ನು ತಿಂದು ಪರಿಸರವನ್ನು ಸ್ವಚ್ಚಗೊಳಿಸುತ್ತಿದ್ದವು. ಅದೇ ರೀತಿ ಹೊಲದಲ್ಲಿ ಗಿಡಗಳಿಗೆ ಆವರಿಸಿಕೊಂಡಿರುತ್ತಿದ್ದ ಕೀಟಗಳನ್ನು ತಿನ್ನುವ ಮೂಲಕ ರೈತರ ಸ್ನೇಹಿತರಾಗಿದ್ದರು. ಮನುಷ್ಯರ ಜೀವನ ಶೈಲಿ ಬದಲಾದ ಕಾರಣದಿಂದಾಗಿಯೇ ಈ ಗುಬ್ಬಚ್ಚಿಗಳು ಅವಸಾನಕ್ಕೆ ತಲುಪಿವೆ ಎಂದರೆ ಅಚ್ಚರಿಯಾದರೂ ಅದು ನಂಬಲೇ ಬೇಕಾದ ವಿಷಯವಾಗಿದೆ. ಆಧುನಿಕ ತಂತ್ರಜ್ಞಾನದಿಂದಾಗಿ ಹಳಯ ವಿಶಾಲವಾದ ಹೆಂಚಿನ ಕಟ್ಟಡಗಳ ಜಾಗದಲ್ಲಿ ಎತ್ತಎತ್ತರದ ಸಿಮೆಂಟ್ ಕಟ್ಟಡಗಳು ಎದ್ದ ಕಾರಣ, ಗುಬ್ಬಚ್ಚಿಗಳು ತಮ್ಮ ಆವಾಸಸ್ಥಾನವನ್ನು ಕಂಡುಕೊಳ್ಳದ ಆಕಾರಕ್ಕೆ ಬದಲಾಗಿವೆ. ಇಂದು ಯಾರ ಮನೆಯಲ್ಲಿಯೂ ಅಕ್ಕಿ, ಗೋಧಿ, ಇತರೇ ಆಹಾರ ಧಾನ್ಯಗಳನ್ನು ತಂದು ಕೇರುವುದಾಗಲೀ, ಬೀಸುವುದಾಗಲೀ ಮಾಡದೇ ಎಲ್ಲರೂ ಯಂತ್ರೀಕೃತ ಶುದ್ಧಿಕರಿಸಿದ ಪ್ಯಾಕೆಟ್‌ಗಳಲ್ಲಿ ಸಿಗುವ ವಸ್ತುಗಳನ್ನೇ ಖರೀಧಿಸುವ ಕಾರಣ ಮನೆಯಲ್ಲೂ ಮತ್ತು ಹಳೆಯ ಕಿರಾಣಿ ಅಂಗಡಿಗಳಲ್ಲಿ ಸಿಗುತ್ತಿದ್ದ ಆಹಾರ ಧಾನ್ಯಗಳು ಗುಬ್ಬಚ್ಚಿಗಳಿಗೆ ಸಿಗುತ್ತಿಲ್ಲದ ಕಾರಣ ಆಹಾರ ಅರಸುತ್ತ ನಗರಗಳಿಂದ ಕಾಣೆಯಾಗಿವೆ. ಇದಲ್ಲದೇ ಎಗ್ಗಿಲ್ಲದೇ ಎಲ್ಲೆಂದರಲ್ಲಿ ಮುಗಿಲೆತ್ತರದ ಮೊಬೈಲ್ ಟವರ್ಗಳನ್ನು ಅಳವಡಿಸಿರುವ ಕಾರಣ ಅವುಗಳು ಹೊರಸೂಸುವ ಎಲೆಕ್ಟೋ ಮ್ಯಾಗ್ನೆಟಿಕ್ ವಿಕಿರಣಗಳು ಸಹ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು ಮತ್ತೊಂದು ಪ್ರಮುಖ ಕಾರಣವಾಗಿದೆ. ಅಷ್ಟೇ ಅಲ್ಲದೇ ರೈತರೂ ಸಹಾ ಕೀಟಗಳನ್ನು ಕೊಲ್ಲುವುದಕ್ಕಾಗಿ ಶಕ್ತಿಯುತ ಕೀಟನಾಶಕಗಳನ್ನು ಬಳಸುವ ಕಾರಣ, ಆ ಕೀಟನಾಶಕ ಸಿಂಪಡಿಸಿದ ಕೀಟಗಳನ್ನೇ ಗುಬ್ಬಚ್ಚಿಗಳು ತಿನ್ನುವ ಮೂಲಕ ಅವುಗಳ ಅವಸಾನದ ಹಾದಿ ಹಿಡಿದಿವೆ. ಕಾಡುಗಳನ್ನು ನಾಶಪಡಿಸಿ ಆಧುನಿಕ ಕಟ್ಟಡಗಳು, ಮಾಲ್‌ಗಳು, ಕೈಗಾರಿಕೆಗಳು ಇತ್ಯಾದಿಗಳನ್ನು ನಿರ್ಮಿಸುವ ಮೂಲಕ ಅರಣ್ಯದ ನಾಶವೂ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.

ಒಂದು ಕಾಲದಲ್ಲಿ ಪಟ್ಟಣಗಳಲ್ಲಿ ಮಾತ್ರ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ ಸಾಮಾನ್ಯವಾಗಿತ್ತು. ಆದರೆ, ಇತ್ತೀಚೆಗೆ ಹಳ್ಳಿಗಳಲ್ಲಿಯೂ ಇದೇ ಆಧುನಿಕತೆ ಮನೆ ಮಾಡಿ, ಹಳ್ಳಿಯಲ್ಲಾಗಲೀ ದಿಲ್ಲಿಯಲ್ಲಾಗಲೀ, ಹೆಂಚಿನ ಮತ್ತು ಸಾಂಪ್ರದಾಯಿಕ ಮಡಿಗೆ ಮನೆಗಳು ಮಾಯವಾಗಿ ಅವುಗಳ ಪ್ರಾಂಗಣಗಳಲ್ಲಿ ಗುಬ್ಬಿಗಳು ಗೂಡುಕಟ್ಟಿ ಸಂಸಾರ ನಡೆಸುವುದಕ್ಕಾಗದೇ ಹೋಗದಿರುವುದೂ ಸಹಾ ಗುಬ್ಬಚ್ಚಿಯ ಸಂತತಿ ಕ್ಷೀಣಿಸಲು ಮತ್ತೊಂದು ಕಾರಣವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

- ಆದಿತ್ಯ ಮಯ್ಯ, ಉಜಿರೆ

MORE FEATURES

ಬದುಕನ್ನು ನೋಡುವ ಲೇಖಕಿಯ ಪಕ್ವತೆಯಿಂದಾಗಿ

29-04-2024 ಬೆಂಗಳೂರು

'ಮುಗ್ಧತೆ, ಸರಳತೆ ಮತ್ತು ಬದುಕನ್ನು ನೋಡುವಾಗ ಮೈಗೂಡಿಸಿಕೊಂಡ ಹೆಣ್ತತನ ಭಾವಗಳು ಕೂಡ ಪೂರ್ಣಿಮಾ ಅವರ ಬರಹಗಳನ್ನು ಗಟ...

ಇಂದಿನ ಮಾನವನಿಗಾಗಿ ಹಾಗೂ ಮುಂದಿನ ಪೀಳಿಗೆಯ ಹಿತಕ್ಕಾಗಿ ಇರುವ ಕಾಡನ್ನಾದರೂ ಉಳಿಸಿ

29-04-2024 ಬೆಂಗಳೂರು

‘ವನಸಂಪತ್ತು ಮಾನವನಿಗೆ ಪ್ರಕೃತಿದತ್ತ ವರ. ಮರಗಳೇ ಮಾನವನ ಮೊದಲ ಮನೆ. ಆದಿಮಾನವನು ವನ್ಯ ಮೃಗಗಳೊಂದಿಗೆ ಹಾಸುಹೊಕ್ಕ...

ಮೌರ್ಯ ವಂಶವನ್ನು ಸ್ಥಾಪಿಸುವ ಕತೆಯನ್ನು ಈ ಕಾದಂಬರಿಯಲ್ಲಿ ನಿರೂಪಿಸಲಾಗಿದೆ

29-04-2024 ಬೆಂಗಳೂರು

'ರಾಣಿಯಾಗಿ ಹುಟ್ಟಿದರೂ ಅದೃಷ್ಟಹೀನೆಯಾಗಿ ಬದುಕಿದ ಮುರಾ ಎಂಬಾಕೆಯ ಪುತ್ರ ಚಂದ್ರಗುಪ್ತ ತಂತ್ರ ನಿಪುಣ ಚಾಣಕ್ಯ ಅಥವಾ ...