ಹಳೆಗನ್ನಡ ಕಾವ್ಯ ತಿರಸ್ಕರಿಸುತ್ತಿರುವುದು ಸಾಹಿತ್ಯಲೋಕಕ್ಕೆ ದೊಡ್ಡ ಹೊಡೆತ:  ಬೈರಮಂಗಲ ರಾಮೇಗೌಡ 

Date: 26-03-2023

Location: ಬೆಂಗಳೂರು


ಕಮಲಾ ಹಂಪನಾ ಸಾಹಿತ್ಯ ವೇದಿಕೆ ಮತ್ತು ಕರ್ನಾಟಕ ಜೈನ ಅಸೋಸಿಯೇಷನ್‌ ಬೆಂಗಳೂರು ಅವರ ಆಶ್ರಯದಲ್ಲಿ ʻಅಕ್ಕರಗೊಟ್ಟಿಯ ಅಲಂಪಿನ ಇಂಪು ಚಂಪೂ ಕಬ್ಬಗಳ ಹಬ್ಬʼ ಸಮಾರೋಪ ಸಮಾರಂಭವು ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ನಡೆಯಿತು.

ಕಾದಂಬರಿಕಾರ, ವಿಮರ್ಶಕ ಬೈರಮಂಗಲ ರಾಮೇಗೌಡ ಮಾತಾನಾಡಿ, ʻಅಕ್ಕರಗೊಟ್ಟಿಯ ಅಲಂಪಿನ ಇಂಪು ಚಂಪೂ ಕಬ್ಬಗಳ ಹಬ್ಬ’ ಈ ಕಾರ್ಯಕ್ರಮದ ಹೆಸರೆ ಬಹಳ ವಿಭಿನ್ನವಾಗಿದೆ . ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಹಂಪನ ಮತ್ತು ಕಮಲಾ ಹಂಪನ ಅವರಿಗೆ ಸಾಹಿತ್ಯಲೋಕ ಋಣಿಯಾಗಿರಬೇಕು. ಹಳೆಗನ್ನಡ ಕಾವ್ಯ ಅಥವಾ ಚಂಪೂ ಕಾವ್ಯಗಳ ಬಗೆಗೆ ತಿಳಿದು ಕೊಳ್ಳುವವರಿಗೆ ಇದು ಒಳ್ಳೆಯ ಅವಕಾಶವಾಗಿತ್ತು. ಹಳೆಗನ್ನಡ ಕಾವ್ಯ ಬೆಳೆಸುವ ಕೆಲಸವನ್ನು ಹಂಪನ ದಂಪತಿಗಳು ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ಲೇಖಕಿ ಎಚ್‌.ಎಲ್. ಪುಷ್ಪ ಮಾತಾನಾಡಿ, ‘ಕಾವ್ಯವನ್ನು ಪ್ರೀತಿಸುವವರಿಗೆ ಇದು ಉತ್ತಮ ಕಾರ್ಯಕ್ರಮವಾಗಿದೆ. ಪಂಪನನ್ನು ಹಿಂದಿನ ಕಾಲದಲ್ಲಿ ನೋಡುತ್ತಿತ್ತು ರೀತಿ ಮತ್ತು ಇಂದಿನ ಕಾಲದಲ್ಲಿ ನೋಡುವ ರೀತಿ ಬಹಳ ವಿಭಿನ್ನವಾಗಿದೆ. ಪಂಪನ ಬಗ್ಗೆ ವಚನಗಳ ಬಗ್ಗೆ ತಿಳಿದುಕೊಳ್ಳಲು ಈ ಎರಡು ದಿನಗಳ ಉಪನ್ಯಾಸ ಕಾರ್ಯಕ್ರಮ ಬಹಳ ಸಹಾಯಕ’ ಎಂದರು.

ಹಳೆಗನ್ನಡ ಸಾಹಿತ್ಯವನ್ನು ಉಳಿಸುವ ಕೆಲಸ ಮಾಡುತ್ತಿರುವ ಹಂಪನ ದಂಪತಿಗಳಿಗೆ ಧನ್ಯವಾದಗಳು. ಹಳೆಗನ್ನಡ ಕಾವ್ಯ ಹಳೆಯ ಬೇರು ಅವುಗಳನ್ನ ಇಂದಿನ ಜನಾಂಗ ಪೋಷಿಸಿ ಬೆಳೆಸಬೇಕಾದ ಅಗತ್ಯವಿದೆ’ ಎಂದು ವೂಡೇ ಪಿ. ಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು .

ಕಾರ್ಯಕ್ರಮವನ್ನು ಫೇಸ್ ಬುಕ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ...
ಕಾರ್ಯಕ್ರಮವನ್ನು ಯುಟ್ಯೂಬ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ...

ಪೋಟೋ ಗ್ಯಾಲರಿ:

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...