ಹಿರಿಯ ಸಾಹಿತಿ ಮುಮ್ತಾಜ್ ಬೇಗಂ ಇನ್ನಿಲ್ಲ

Date: 06-04-2021

Location: ಬೆಂಗಳೂರು


ಹಿರಿಯ ಲೇಖಕಿ ಮುಮ್ತಾಜ್ ಬೇಗಂ(73) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಐದು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಕೋವಿಡ್ ನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ.

ಉರ್ದು ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿಗ್ಗ ಅವರು ಕನ್ನಡದಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಪೂರೈಸಿದ್ದರು. ಆನಂತರ ಸಮಾಜಶಾಸ್ತ್ರದಲ್ಲಿ ಬಿ.ಎ ಪದವಿ ಹಾಗೂ ಬಿ.ಎಡ್. ಪದವೀಧರಾಗಿದ್ದರು. ಪ್ರಜಾವಾಣಿ ಬಳಗದ ವಾರಪತ್ರಿಕೆ, ಸುಧಾಪತ್ರಿಕೆಯ ಸಹಸಂಪಾದಕಿಯಾಗಿದ್ದರು, ಕೆಲವು ಕಾಲ ಗ್ರಿಂಡ್ಲೆಸ್ ಬ್ಯಾಂಕ್ನಲ್ಲಿ ಹಾಗೂ ಯುನೆಸ್ಕೋದಲ್ಲಿ ಸೇವೆ ಸಲ್ಲಿಸಿದ್ದ ಅವರು ವಿಜಯಾಟೈಮ್ಸ್ ನಲ್ಲಿಯೂ ಉದ್ಯೋಗಿಯಾಗಿದ್ದರು.

ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ವಿಭಿನ್ನ ಬರಹವಣಿಗೆಯ ಮೂಲಕ ಗುರುತಿಸಿಕೊಂಡಿದ್ದ ಅವರು ‘ಅವ್ಯಕ್ತ’, ‘ಪರದೇಶಿ’, ‘ವರ್ತುಲ’, ಬಂದಳಿಕೆ, ಚಿಂಪಿ, ಸರ್ವ ಋತುಗಳೂ ನಿನಗಾಗಿ, ಅಂಕುರ ಸೇರಿದಂತೆ ಹಲವು ಕಥೆ, ಕವನ, ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಸಾಹಿತ್ಯ ಸಾಧನೆಗಾಗಿ ಅತ್ತಿಮಬ್ಬೆ, ಚೆನ್ನಶ್ರೀ, ಜಿಲ್ಲಾ ರಾಜ್ಯೋತ್ಸವ, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ, ಮೇವುಂಡಿ ಮಲ್ಲಾರಿ ಮಕ್ಕಳ‌ ಕಥಾ ಪುರಸ್ಕಾರ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ, ಹಿರಿಯ ನಾಗರಿಕರ ಸಾಹಿತ್ಯ ಪ್ರಶಸ್ತಿ, ಬಸವ ಸಾಹಿತ್ಯ ಕಲಾವೇದಿಕೆಯ ಬಸವಜ್ಯೋತಿ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ.

MORE NEWS

‘ಇಂದು ನಾನೇನಿದ್ದರೂ ಸಮಾಜದ ಫಲವೇ’ ...

18-04-2021 ಶ್ರೀಕಲ್ಮಠ, ಬೀಳಗಿ (ಬಾಗಲಕೋಟೆ ಜಿಲ್ಲೆ)

ನನ್ನನ್ನು ನೀವು ಜಾನಪದ ಕವಿ- ಸಾಹಿತಿ, ತಜ್ಞ...ಹೀಗೆ ಏನೆಲ್ಲ ಅನ್ನಬಹುದು. ಆದರೆ, ಏನೇ ಆದರೂ ಅದು ನನ್ನನ್ನು ಬೆಳೆಸಿದ ಕ...

ಮಹಿಳಾ ಸಾಹಿತ್ಯಕ ಅಸ್ತಿತ್ವದ ಅರ್ಥಪ...

18-04-2021 ಬೆಂಗಳೂರು

ಕಳೆದ ಮೂರು ವರ್ಷದ ಹಿಂದೆ (2015) ದಲಿತ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸುವ ಮೂಲಕ ಜನ್ನಡ ಸಾಹಿತ್ಯ ಪರಿಷತ್ತು ತನ್ನ ಪಾರ...

ಮಹಿಳಾ ಸಾಹಿತ್ಯದಲ್ಲಿ ‘ಒಂಟಿತನ’ ಮೀ...

18-04-2021 ಬೆಂಗಳೂರು

ಮಹಿಳೆಯು ಮೇಲ್ನೋಟಕ್ಕೆ ಸುಖಿಯಾಗಿ ಕಂಡರೂ ಅವಳು ‘ಒಂಟಿತನ’ ಭಾವದಿಂದ ದೂರವಾಗಿಲ್ಲ. ಇದು ಮಹಿಳೆಯರ ಸಾಮಾಜಿಕ...