‘ಇಂದು ನಾನೇನಿದ್ದರೂ ಸಮಾಜದ ಫಲವೇ’ ಜಾನಪದ ತಜ್ಞ ಶ್ರೀರಾಮ ಇಟ್ಟಣ್ಣವರ ನಮ್ರ ನುಡಿ

Date: 18-04-2021

Location: ಶ್ರೀಕಲ್ಮಠ, ಬೀಳಗಿ (ಬಾಗಲಕೋಟೆ ಜಿಲ್ಲೆ)


ನನ್ನನ್ನು ನೀವು ಜಾನಪದ ಕವಿ- ಸಾಹಿತಿ, ತಜ್ಞ...ಹೀಗೆ ಏನೆಲ್ಲ ಅನ್ನಬಹುದು. ಆದರೆ, ಏನೇ ಆದರೂ ಅದು ನನ್ನನ್ನು ಬೆಳೆಸಿದ ಕುಟುಂಬದ, ಸಮಾಜದ ಫಲವಾಗಿದೆ’

ಹೀಗೆ ತಮ್ಮನ್ನು ಅಭಿನಂದಿಸಲು ನೆರೆದಿದ್ದ ನೂರಾರು ಅಭಿಮಾನಿ ಸ್ನೇಹಿತರ ಮುಂದೆ ಅತ್ಯಂತ ನಮ್ರವಾಗಿ ನುಡಿದವರು-ಜಾನಪದ ತಜ್ಞ ಡಾ. ಶ್ರೀರಾಮ ಇಟ್ಟಣ್ಣವರ.

ಸಂದರ್ಭ: ವಿದ್ವತ್ತಿನ ಯಾವುದೇ ಪ್ರಚಾರದ ಹಪಾಹಪಿ ಇಲ್ದೇ ತಮ್ಮ ಪಾಡಿಗೆ ತಾವಿದ್ದು ಜಾನಪದ ಶ್ರೀಮಂತ ಸಂಸ್ಕೃತಿಯನ್ನು ತಮ್ಮಸಂಶೋಧನೆಯ ಮೂಲಕ ತೋರುತ್ತಲೇ ಸಾಹಿತ್ಯ ಲೋಕದ ಗಮನ ಸೆಳೆದ ಶ್ರೀರಾಮ ಇಟ್ಟಣ್ಣವರ ಅವರನ್ನು ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಶ್ರೀಕಲ್ಮಠದ ಸಭಾಂಗಣದಲ್ಲಿ ‘ಎರಡು ಅಭಿನಂದನಾ ಗ್ರಂಥಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಅಭಿನಂದಿಸಿದ ಅಪೂರ್ವ ಕ್ಷಣವಿದು.

ನಾನೇನಿದ್ದರೂ ಸಮಾಜದ ಫಲ: ಇಂದು ನಾನೇನಿದ್ದರೂ ಅದು ಸಮಾಜದ ಫಲವಾಗಿದೆ. ಬಾಲ್ಯದಲ್ಲಿ ತಂದೆ-ತಾಯಿ ಹಾಗೂ ಕುಟುಂಬದ ಸದಸ್ಯರು, ಶಾಲೆಯಲ್ಲಿ ಶಿಕ್ಷಕರು, ನನ್ನ ಗೆಳೆಯರು, ಮುಂದೆ ಸಮಾಜದಲ್ಲಿ ಹಿರಿಯರು ಹೀಗೆ ಎಲ್ಲರೂ ಸೇರಿ ಒಂದೊಂದು ಕೊಡುಗೆ ನೀಡುವ ಮೂಲಕ ವ್ಯಕ್ತಿತ್ವ ರೂಪಿಸಿದ್ದರ ಫಲವೇ ಈ ಶ್ರೀರಾಮ ಇಟ್ಟಣ್ಣವರ’ ಎಂದು ಅಭಿಮಾನಿಗಳ ಅಭಿನಂದನೆಗೆ ಸ್ಪಂದಿಸಿದರು.

‘ನನ್ನಲ್ಲಿ ಲೋಕಜ್ಞಾನ ಹೆಚ್ಚಿದೆ. ಅರಿವು ತುಂಬಿದೆ. ಜಾನಪದ ಸಾಹಿತ್ಯವನ್ನು ಸಂಪೂರ್ಣ ತಿಳಿದುಕೊಂಡಿದ್ದಾರೆ ಹೀಗೆ ಏನೆಲ್ಲ ಹೊಗಳುವ ಈ ಕ್ಷಣದಲ್ಲಿ ನಾನೀಗ ಹೇಳುವುದಿಷ್ಟೆ, ಅದೇನಿದ್ದರೂ, ಇಡೀ ಸಮಾಜದ ಭಾಗವಾದ ತಾವೆಲ್ಲರೂ ರೂಪಿಸಿದ ಕೊಡುಗೆ’ ಎಂದು ಅಭಿಪ್ರಾಯಪಟ್ಟರು.

ಶ್ರೀಗಳ ಸಮ್ಮುಖದಲ್ಲಿ ಎರಡು ಅಭಿನಂದನಾ ಗ್ರಂಥಗಳ ಸಮರ್ಪಣೆ: ಡಂಬಳ-ಗದಗ ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹಾಗೂ ನಿಡಸೋಸಿ-ಬಾಗಲಕೋಟೆ ದುರದುಂಡೀಶ್ವರ ಸಿದ್ಧ ಸಂಸ್ಥಾನಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಗಿರಿಸಾರ ಕಲ್ಯಾಣದ ಮಠದ ಶ್ರೀ ರುದ್ರಮುನಿ ಶಿವಾಚಾರ್ಯರು ನೇತೃತ್ವ ಹಾಗೂ ಬೀಳಗಿ-ಹಲಗಲಿ ಶ್ರೀ ಕಲ್ಮಠದ ಶ್ರೀ ಗುರುಪಾದ ಶಿವಾಚಾರ್ಯ ಸ್ವಾಮಿಗಳು ಸಮ್ಮುಖವಹಿಸಿದ್ದರು.. ಶ್ರೀರಾಮ ಇಟ್ಟಣ್ಣವರ ದಂಪತಿಯನ್ನು ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಶ್ರೀರಾಮ ಇಟ್ಟಣ್ಣವರ ಅಭಿನಂದನಾ ಸಮಿತಿಯು ಆಯೋಜಿಸಿದ್ದ ಈ ಸಮಾರಂಭವನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಉದ್ಘಾಟಿಸಿದರು. ಜಾನಪದ ಸಾಹಿತಿ-ಕವಿ ಶ್ರೀರಾಮ ಇಟ್ಟಣ್ಣವರ ಅಭಿನಂದನಾ ಗ್ರಂಥಗಳಾಗಿ ಸಾಹಿತಿ ಡಾ. ಎಂ.ಎಸ್. ಮದಭಾವಿ ಪ್ರಧಾನ ಸಂಪಾದಕತ್ವದ ಪಾರಿಜಾತ ಗ್ರಂಥ ಕುರಿತು ಸಾಹಿತಿ ಡಾ. ಗುರುಲಿಂಗ ಕಾಪಸೆ ಮಾತನಾಡಿದರು. ವೀರೇಂದ್ರ ಶೀಲವಂತರ, ಗುರುರಾಜ ಲೂತಿ ಸಂಪಾದಕತ್ವದ ‘ಸೌಗಂಧ’ ಗ್ರಂಥ ಕುರಿತು ಸಾಹಿತಿ ಡಾ. ಎಂ.ಎಸ್. ಮದಭಾವಿ ಮಾತನಾಡಿದರು. ಹಂಪಿಯ ಕನ್ನಡ ವಿ.ವಿ. ಕುಲಪತಿ ಡಾ. ಮಲ್ಲಿಕಾ ಘಂಟಿ ಅವರು ಅಭಿನಂದನಾ ನುಡಿಗಳನ್ನಾಡಿದರು.

ಎಂ.ಎಲ್ ಸಿ ಹನುಮಂತ ನಿರಾಣಿ, ಸಾಹಿತಿಗಳಾದ ಡಾ. ಗುರುಲಿಂಗ ಕಾಪಸೆ, ಡಾ. ಎಂ.ಎಸ್. ಮದಭಾವಿ ಸೇರಿದಂತೆ ಶ್ರೀರಾಮ ಇಟ್ಟಣ್ಣವರ ಅಭಿಮಾನಿ ಬಳಗ, ವಿದ್ಯಾರ್ಥಿಗಳು, ಊರಿನ ನಾಗರಿಕರು ಪಾಲ್ಗೊಂಡಿದ್ದರು. ಚಂದ್ರಶೇಖರ ದೇಸಾಯಿ ಸ್ವಾಗತಿಸಿದರು. ಗುರುರಾಜ ಲೂತಿ ನಿರೂಪಿಸಿದರು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...