ದಂಡೆ ದಂಪತಿಗೆ ಎಂ.ಎಂ. ಕಲಬುರ್ಗಿ ಪ್ರಶಸ್ತಿ

Date: 12-11-2019

Location: ಬೀದರ್‌


ಬೀದರ್‌: ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ನೀಡುವ ಡಾ. ಎಂ.ಎಂ ಕಲಬುರ್ಗಿ ಪ್ರಶಸ್ತಿಗೆ ಡಾ. ವೀರಣ್ಣ ದಂಡೆ ಮತ್ತು ಡಾ. ಜಯಶ್ರೀ ದಂಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಂಡಳಿಯ ಅಧ್ಯಕ್ಷರಾದ ಬಸವಲಿಂಗ ಪಟ್ಟದೇವರು ತಿಳಿಸಿದ್ದಾರೆ. 

ನವೆಂಬರ್‌ 23 ಮತ್ತು 24ರಂದು ಬಸವ ಕಲ್ಯಾಣದಲ್ಲಿ ನಡೆಯುವ 40ನೇ ಅನುಭವ ಮಂಟಪ ಉತ್ಸವ ಹಾಗೂ ಶರಣ ಕಮ್ಮಟದಲ್ಲ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದಿದ್ದಾರೆ. ಪ್ರಶಸ್ತಿಯು 50 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ. 

ಶರಣ ಸಾಹಿತ್ಯ ತಲಸ್ಪರ್ಶಿಯಾಗಿ ಅಧ್ಯಯನ ಮಾಡಿರುವ ಜಯಶ್ರೀ ದಂಡೆಯವರು ವಚನಕಾರರ ಬದುಕು-ಬೋಧನೆಗಳ ಬಗ್ಗೆ ಬರವಣಿಗೆ ಮಾಡಿದ್ದಾರೆ. ’ವಚನಗಳಲ್ಲಿ ಶೈವ ಹಾಗೂ ವೀರಶೈವ’ (ಸಂಶೋಧನೆ), ’ಸ್ವಭಾವದ ವಚನಗಳು’ (ಕಾವ್ಯ), ”ವಚನಕಾರ್ತಿ ರಾಯಮ್ಮ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಆಯ್ದಕ್ಕಿ ಲಕ್ಕಮ್ಮ, ಶಿಶುನಾಳ ಶರೀಫ ಸಾಹೇಬ, ಹಡಪದ ಲಿಂಗಮ್ಮ, ಚೆನ್ನಬಸವಣ್ಣ, ಗಣೇಶ ಮಸಣಯ್ಯ, ಮುಕ್ತಾಯಕ್ಕ, ಸಿದ್ದರಾಮ” (ಜೀವನ ಚರಿತ್ರೆ), “ಶರಣರ ಆರ್ಥಿಕ ಚಿಂತನೆ, ಶರಣ ಜೀವನ, ವಚನಗಳಲ್ಲಿ ಲಿಂಗವಂತ ಭಾಗ 1, ಭಾಗ 2, ಹೂವ ತಂದವರು” (ವಿಮರ್ಶೆ), ಫಲದೊಳಗಣ ರುಚಿ, ಬೆಡಗಿನ ವಚನಗಳ ಪಾರಿಭಾಷಾ ಕೋಶ, ಹಾಲತೊರೆ, ಶರಣ ತತ್ವ ಗಳು, ಬಸವನ ಬಾಗೇವಾಡಿ ಮಂಗಳವೇಡೆ” ಇವರ ಪ್ರಮುಖ ಕೃತಿಗಳು. 

ಜಾನಪದ ತಜ್ಞ, ಸಂಶೋಧಕ ವೀರಣ್ಣ ದಂಡೆಯ ಜನಪದ ಕಾವ್ಯ ಮೀಮಾಂಸೆ, ಕನ್ನಡ ಜಾನಪದ ಪ್ರಜ್ಞೆ, ಜನಪದ ಕಾವ್ಯ, ಜನಪದ ಸಾಹಿತ್ಯ ಸಿದ್ಧಾಂತ, ಹಾಲು ಮತ ಪುರಾಣ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜಾನಪದ ಸಂಶೋಧನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. 

MORE NEWS

ಅಂಬೇಡ್ಕರರಿಗೆ ಸಂವಿಧಾನ ರಚನೆಯ ಗುಮ...

11-12-2019 ಬೆಂಗಳೂರು

’ಡಾ.ಬಿ.ಆರ್‌. ಅಂಬೇಡ್ಕರ್ ಅವರನ್ನು ಸಂವಿಧಾನ ರಚನೆಯ ಗುಮಾಸ್ತರಂತೆ ನೋಡಲಾಗುತ್ತಿದೆ’ ಎ...

’ಮುಸ್ಲಿಂ ಸಾಹಿತ್ಯ ಪ್ರಶಸ್ತಿಗೆ’ ಕ...

11-12-2019 ಬೀಬಿ ಅಲಾಬಿ ರಸ್ತೆ, ಮಂಗಳೂರು

ಕನ್ನಡ ಸಾಹಿತ್ಯಕ್ಕೆ ಮುಸ್ಲಿಂ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಮ್ ಲೇಖಕ...

ಏಪ್ರಿಲ್‌ನಲ್ಲಿ ಲಂಡನ್ ಕನ್ನಡ ಸಾಹಿ...

11-12-2019 ಬೆಂಗಳೂರು

ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಲಂಡನ್ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏಪ್ರಿಲ್ ಕೊನೆಯ ಎರಡು ವಾರದಲ್ಲಿ...

Top News
Top Events