‘ಕನ್ನಡ ಕಾಯಕ ವರ್ಷ’ ಕನ್ನಡ ಕೈಬರಹದ ರಾಷ್ಟ್ರಮಟ್ಟದ ಸ್ಪರ್ಧೆ: ವಿದ್ಯಾರ್ಥಿಳಿಗೆ ಆಹ್ವಾನ

Date: 24-10-2021

Location: ಬೆಂಗಳೂರು


‘ಕನ್ನಡ ಕಾಯಕ ವರ್ಷ’ ಶೀರ್ಷಿಕೆಯಡಿ ಕರ್ನಾಟಕ ರಾಜ್ಯ ಸರ್ಕಾರವು ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕನ್ನಡ ಕೈಬರಹದ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ.

ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ‘ಕನ್ನಡಕ್ಕಾಗಿ ನಾವು’ ಎಂಬ ಅಭಿಯಾನ ಆರಂಭಿಸಿರುವ ರಾಜ್ಯ ಸರ್ಕಾರ, ಕುವೆಂಪು ಭಾಷಾ ಭಾರತಿ ವತಿಯಿಂದ ಈ ಸ್ಪರ್ಧೆ ಆಯೋಜಿಸಿದೆ.

ಸ್ಪರ್ಧೆಯನ್ನು 7ನೇ ತರಗತಿವರೆಗಿನ ವಿಭಾಗ, ಎಂಟರಿಂದ ದ್ವಿತೀಯ ಪದವಿಪೂರ್ವ ತರಗತಿಯವರೆಗಿನ ವಿಭಾಗ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿಭಾಗ ಎಂದು ವರ್ಗೀಕರಿಸಿದ್ದು, ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿಭಾಗದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಇತ್ಯಾದಿ ವಿವಿಧ ವೃತ್ತಿಪರ ಪದವಿಗಳೂ ಸೇರಿದಂತೆ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು.

ಅತ್ಯುತ್ತಮ ಕನ್ನಡ ಕೈಬರಹದೊಂದಿಗೆ ವಿಚಾರಗಳನ್ನು ಮಂಡಿಸಿದ ಮೂವರು ವಿದ್ಯಾರ್ಥಿಗಳಿಗೆ, ಅಂದರೆ ಒಟ್ಟು ಒಂಬತ್ತು ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ಗಳಂತೆ ಬಹುಮಾನ ನೀಡಲಾಗುವುದು. ವಿದ್ಯಾರ್ಥಿಗಳು ‘ಕನ್ನಡವನ್ನು ಬೆಳೆಸಲು ನಾನೇನು ಮಾಡುತ್ತೇನೆ?’ ಎಂಬ ವಿಷಯದ ಬಗ್ಗೆ ಎ-4 ಹಾಳೆಯ ಒಂದು ಪುಟದಲ್ಲಿ ಕೈಬರಹದಲ್ಲಿ ಬರೆದು ಕನ್ನಡದಲ್ಲಿ ಸಹಿ ಮಾಡಬೇಕು. ಅದೇ ಹಾಳೆಯ ಹಿಂದಿನ ಪುಟದಲ್ಲಿ ಸ್ಪರ್ಧಿಗಳು ತಮ್ಮ ಹೆಸರು, ತರಗತಿ ಮತ್ತು ತಾವು ಕಲಿಯುತ್ತಿರುವ ವಿದ್ಯಾಸಂಸ್ಥೆಯ ವಿಳಾಸ ಮತ್ತು ತಮ್ಮ ಅಥವಾ ಹೆತ್ತವರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಅದರ ಬಳಿಕ ವಿದ್ಯಾಸಂಸ್ಥೆಯ ಮುಖ್ಯಸ್ಥರ/ವಿಭಾಗ ಮುಖ್ಯಸ್ಥರ ಸಹಿ, ಮೊಹರು ಮತ್ತು ದೂರವಾಣಿ ಸಂಖ್ಯೆ ಇರಬೇಕು.

ಸ್ಪರ್ಧಿಗಳು ತಮ್ಮ ಬರಹವನ್ನು ತ್ವರಿತ ಅಂಚೆ ಅಥವಾ ಕೊರಿಯರ್ ಮೂಲಕ ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ ಅಂಚೆ, ಬೆಂಗಳೂರು- 560056, ಈ ವಿಳಾಸಕ್ಕೆ ಕಳುಹಿಸಬೇಕು. ಲಕೋಟೆಯ ಹೊರಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ತರಗತಿ ಸಹಿತ ವಿದ್ಯಾಸಂಸ್ಥೆಯ ವಿಳಾಸ ನಮೂದಿಸಬೇಕು. ಪ್ರವೇಶಿಕೆಗಳು ಮೇಲೆ ನೀಡಲಾದ ವಿಳಾಸಕ್ಕೆ ತಲುಪಲು ಕೊನೆಯ ದಿನಾಂಕ 29-10-2021 ಆಗಿರುತ್ತದೆ. ಹೊರರಾಜ್ಯಗಳಿಂದ ಬರುವ ಪ್ರವೇಶಿಕೆಗಳಿಗೆ ಮಾತ್ರ ಕೊನೆಯ ದಿನಾಂಕ: 30-10-2021 ಎಂದು ತಿಳಿಸಿದೆ.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...