ಕನ್ನಡ ಪರ ಹೋರಾಟಗಾರ ಬಿ.ಎನ್. ಅಚ್ಚಪ್ಪಗೆ ವೀರಸೇನಾನಿ ಮ. ರಾಮಮೂರ್ತಿ ದತ್ತಿ ಪ್ರಶಸ್ತಿ ಪ್ರದಾನ

Date: 29-06-2020

Location: ಬೆಂಗಳೂರು


ಕನ್ನಡ ಪರ ಹೋರಾಟಗಾರ ಬಿ.ಎನ್. ಅಚ್ಚಪ್ಪ ಅವರಿಗೆ ಕನ್ನಡ ಚಳವಳಿ ವೀರಸೇನಾನಿ ಮ. ರಾಮಮೂರ್ತಿ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಡಾ.  ಮನು ಬಳಿಗಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಮಾತನಾಡಿದ ಅವರು "ಕನ್ನಡ ಸಾಹಿತ್ಯ ಪರಿಷತ್ತಿನ 106 ವರ್ಷಗಳಲ್ಲಿ ಅನೇಕ ದತ್ತಿ ಪ್ರಶಸ್ತಿಗಳನ್ನು ನೀಡಿದೆ. ಅವೆಲ್ಲವನ್ನು ಅತ್ಯಂತ ಅರ್ಹರಿಗೆ ನೀಡಲಾಗಿದೆ. ಕಳೆದ 60 ವರ್ಷಗಳಿಂದ ಕನ್ನಡಪರ ಹೋರಾಟಗಳನ್ನು ನಡೆಸುತ್ತಿರುವ, ಅ.ನ.ಕೃ., ಮ. ರಾಮಮೂರ್ತಿ, ವಾಟಾಳ್ ನಾಗರಾಜ್ ಮುಂತಾದವರೊಡನೆ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸುತ್ತಿರುವ ಬಿ.ಎನ್. ಅಚ್ಚಪ್ಪ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದು ಸಂತಸ ತಂದಿದೆ. ಇಂಥ ದಿಟ್ಟ ಹೋರಾಟಗಾರರಿಗೆ ಗೌರವಿಸುವುದರ ಮೂಲಕ ನಾವು ನಮ್ಮ ಗೌರವವನ್ನು ಹೆಚ್ಚಿಸಿಕೊಂಡಂತಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ.ಎನ್. ಅಚ್ಚಪ್ಪ, "ಕನ್ನಡ ಚಳವಳಿ ಪ್ರಾರಂಭವಾದದ್ದು 1961-62ರಲ್ಲಿ. ಚಳವಳಿ ಪ್ರಾರಂಭವಾಗುವ ಕೆಲವ ವರ್ಷಗಳ ಮುಂಚೆಯೇ ಕಬ್ಬನಪೇಟೆಯಲ್ಲಿ ಕನ್ನಡ ಸಂಘ ಸ್ಥಾಪಿಸಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಮ. ರಾಮಮೂರ್ತಿ ಅವರೊಂದಿಗೆ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ಅವರು ಇನ್ನೂ ಕೆಲವು ವರ್ಷಗಳ ಕಾಲ ಬದುಕಿದ್ದರೆ ಕನ್ನಡಕ್ಕೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತಿತ್ತು" ಎಂದು ನೆನಪಿಸಿಕೊಂಡರು.

ವ.ಚ. ಚನ್ನೇಗೌಡ, ರಾಜಶೇಖರ ಹತಗುಂದಿ, ಪದ್ಮರಾಜ ದಂಡಾವತಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

MORE NEWS

ಅಸಂಖ್ಯ ಸ್ತ್ರೀಯರ ನೈಜ ಚಿತ್ರಣ ‘ನೋ...

04-07-2020 ಬೆಂಗಳೂರು

‘ಲೇಖಿಕಾ ಸಾಹಿತ್ಯ ವೇದಿಕೆ’ ಆಯೋಜಿಸಿದ್ದ ಪುಸ್ತಕಾವಲೋಕನದಲ್ಲಿ ಈ ಬಾರಿ ಲೇಖಕಿ ಡಿ. ಯಶೋದಾ ಅವರು ಬೇ...

ತಿರುಪತಿ ಭಂಗಿ ಅವರ ‘ಕೆಂಪರೋಡ್’ ಕೃ...

03-07-2020 ಬೆಂಗಳೂರು

ಕಥೆಗಾರ ಅಬ್ಬಾಸ್ ಮೇಲಿನಮನಿ ಹಾಗೂ ಸಾಹಿತಿ ಪ್ರಕಾಶ್ ಖಾಡೆ ಅವರು ತಿರುಪತಿ ಭಂಗಿ ಅವರ ‘ಕೆಂಪರೋಡ್’ ಕ...

ವಿವಿಧ ಅಕಾಡೆಮಿಗಳಿಗೆ ನೂತನ ಸದಸ್ಯರ...

02-07-2020 ಬೆಂಗಳೂರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಅ...

Comments

ಸ್ಪರ್ಧೆಯ ಕತೆಗಳು
ಸ್ಪರ್ಧೆಯ ಕವಿತೆಗಳು
Magazine
With us

Top News
Exclusive
Top Events