ಕನ್ನಡಪರ ಹೋರಾಟಗಾರ - ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡರಿಗೆ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿ

Date: 13-01-2022

Location: ಬೆಂಗಳೂರು


ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನಾಂಕ 11-01-2022 ರಂದು ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 2022ನೆಯ ಸಾಲಿನ “ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿ”ಗೆ ಕನ್ನಡಪರ ಹೋರಾಟಗಾರರು ಹಾಗೂ ಕರವೇ ಸಂಘದ ಅಧ್ಯಕ್ಷರೂ ಆದ ಟಿ.ಎ. ನಾರಾಯಣಗೌಡ ಅವರನ್ನು ಆಯ್ಕೆ ಮಾಡಲಾಯಿತು. ಪ್ರಶಸ್ತಿಯ ಮೊತ್ತ ರೂ. 25,000 ನಗದು, ಸ್ಮರಣಿಕೆೆ ಒಳಗೊಂಡಿರುತ್ತದೆ.

ಆಯ್ಕೆ ಸಮಿತಿ ಸಭೆಯಲ್ಲಿ ಸದಸ್ಯರು ಡಾ. ಪದ್ಮಿನಿ ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳು ನೇ. ಭ ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷರು ಪಟೇಲ್‌ಪಾಂಡು ಅವರುಗಳು ಉಪಸ್ಥಿತರಿದ್ದರು.

ನಾರಾಯಣಗೌಡರ ಹೋರಾಟದ ಹಾದಿ: ನಾರಾಯಣಗೌಡರು ಅರಸಿಕೆರೆ ತಾಲ್ಲೂಕಿನಲ್ಲಿ ಜೂನ್10, 1967 ರಂದು ಜನಿಸಿದರು. ಕಿರಿ ವಯಸ್ಸಿನಲ್ಲೆ ಹೋರಾಟದ ಹಾದಿ ಹಿಡಿದ ಇವರು, ಕನ್ನಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ (ಕ.ರ.ವೇ)ಯ ಸ್ಥಾಪಿತರಲ್ಲೊಬ್ಬರು ಹಾಗು ಪ್ರಸ್ತುತ ಅಧ್ಯಕ್ಷರು. ಕ.ರ.ವೇ ರಾಜ್ಯಮಟ್ಟದಲ್ಲಿ ಸಂಘಟನೆಯಾಗುವಲ್ಲಿ ನಾರಾಯಣ ಗೌಡರು ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ ಎಲ್ಲೆಡೆ ತನ್ನ ಸದಸ್ಯರನ್ನು ಹೊಂದಿದೆ.

ರಾಜ್ಯ ವ್ಯಾಪ್ತಿಯಲ್ಲಿ ಹೋರಾಟ ನಡೆಸಿ, ಮುಖ್ಯವಾಗಿ ಬೆಳಗಾವಿಯಲ್ಲಿನ ಕನ್ನಡ ಭಾಷಿಕರ ಪರವಾಗಿಯೂ ಅನೇಕ ಹೋರಾಟಗಳನ್ನು ನಡೆಸಿದರು. ಮುಖ್ಯವಾಗಿ ಕನ್ನಡದ ಮಹಾಪೌರರ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸಿ ಎಂ.ಇ.ಎಸ್. ವಿರುದ್ದ ಹೋರಾಟವನ್ನು ರೂಪಿಸಿದರು.ಕಾವೇರಿ ನದಿ ನೀರು ಹಂಚಿಕೆಯ ವಿರುದ್ಧ ನಾಡಿನ ರೈತರ ಪರವಾದ ಹೋರಾಟಗಳನ್ನು ರೂಪಿಸಿ, ಅನೇಕ ಪೊಲೀಸ್ ಮೊಕದ್ದಮೆಗಳು ದಾಖಲಾಗಿವೆ, ಬಳ್ಳಾರಿ ಜೈಲುವಾಸ ಸೇರಿದಂತೆ ಸೆರೆವಾಸವನ್ನು ಕಂಡಿದ್ದಾರೆ.

ಅನೇಕ ಕವನ ಸಂಕಲನ - ಲೇಖನ ಸಂಕಲನ ಪತ್ರಿಕೆಗಳಲ್ಲಿ ಅಂಕಣಕಾರರು, ಕರವೇ ನಲ್ಲುಡಿ ಪತ್ರಿಕೆಯನ್ನು ಪ್ರಕಟಿಸಿ ಸಾಹಿತ್ಯ ಪರಂಪರೆಯನ್ನು ಕ್ರಿಯಾಶೀಲಗೊಳಿಸಿದ್ದಾರೆ.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...