ಕರ್ನಾಟಕ ಇತಿಹಾಸ ಅಕಾಡೆಮಿಯ 33ನೇ ಸಮ್ಮೇಳನದ ಅಧ್ಯಕ್ಷರಾಗಿ ವೆಂಕಟಾಚಲ ಶಾಸ್ತ್ರಿ ಆಯ್ಕೆ

Date: 19-09-2019

Location: ಹೊಸನಗರ, ಶಿವಮೊಗ್ಗ


ಕರ್ನಾಟಕ ಇತಿಹಾಸ ಅಕಾಡೆಮಿಯ 33ನೇ ವಾರ್ಷಿಕ ಸಮ್ಮೇಳನಕ್ಕೆ ಡಾ. ವೆಂಕಟಾಚಲ ಶಾಸ್ತ್ರೀ ಟಿ.ವಿ. ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿಯು ತಿಳಿಸಿದೆ.

ಈ ಕಾರ್ಯಕ್ರಮದಲ್ಲಿ ಇತಿಹಾಸ ಸಂಶೋಧನೆಗೆ ಸಂಬಂಧಿಸಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು ಈ ಬಾರಿಯ ಇತಿಹಾಸ ಸಂಸ್ಕೃತಿ ಶ್ರೀ ಪುರಸ್ಕಾರಕ್ಕೆ ಮೈಸೂರಿನ ವಸುಂಧರಾ ಫಿಲಿಯೋಜಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಬಾ.ರಾ. ಗೋಪಾಲ್‌ ಶಾಸನ ಪ್ರಶಸ್ತಿಗೆ ಧಾರವಾಡದ ನಾಗಯ್ಯ ಜೆ.ಎಂ, ಸಂಶೋಧನ ಶ್ರೀ ಪುರಸ್ಕಾರಕ್ಕೆ ಶೀಲಾಕಾಂತ ಪತ್ತಾರ್‌, ನಾಯಕ ಶ್ರೀ ಪ್ರಶಸ್ತಿಗೆ ವಿರೂಪಾಕ್ಷಿ ಪೂಜಾರಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ.

ಅಕ್ಟೋಬರ್‌ 18, 19, ಹಾಗೂ 20ರಂದು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕಿನ ಹೊಂಬುಜ ಜೈನಮಠದಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಅರಸೀಕೆರೆಯ ಎಸ್. ಸಿದ್ಧಣ್ಣಯ್ಯ-ಗಂಗಮ್ಮ ಸ್ಮಾರಕ ಟ್ರಸ್ಟ್‌ ನೀಡುವ ನೊಳಂಬ ಇತಿಹಾಸ ಪ್ರಶಸ್ತಿಗೆ ಡಾ. ಪರಮಶಿವಮೂರ್ತಿ ಆಯ್ಕೆಯಾಗಿದ್ದರೆ, ಸಿ.ಆರ್‌. ಶ್ಯಾಮಲಾ ಅವರು ಸ್ಥಾಪಿಸಿರುವ ಶ್ರೀನಿವಾಸ ಹಾವನೂರ ಸ್ಮರಣಾರ್ಥ ಪ್ರಶಸ್ತಿ ಬೆಂಗಳೂರಿನ ವಸಂತಲಕ್ಷ್ಮಿ ಅವರ ಮುಡಿಗೇರಿದೆ. ಸುಮಂಗಲ ಪಾಟೀಲ್‌ ಪ್ರಶಸ್ತಿಗೆ ರಾಣೆಬೆನ್ನೂರಿನ ಸಿದ್ಧಲಿಂಗಮ್ಮ, ಸೂರ್ಯಕೀರ್ತಿ ಪ್ರಶಸ್ತಿಗೆ ಎಂ.ಬಿ. ಪಾಟೀಲ ಹಾಗೂ ಎಂ.ಎಚ್. ಕೃಷ್ಣ ಮೆರಿಟ್ ಅವಾರ್ಡ್‌‌ಗೆ ಆರ್‌. ಮೋಹನ್‌ ಅವರು ಆಯ್ಕೆಯಾಗಿದ್ದಾರೆ.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...