ಕವಿ ಮನೆಯಲ್ಲಿ ರಾಜ್ಯಮಟ್ಟದ ಒಂದು ದಿನದ ಕವಿ ಸಮ್ಮಿಲನಕ್ಕೆ ಕವನಗಳ ಆಹ್ವಾನ

Date: 28-06-2022

Location: ಹೇಮಾಂಗಣ ,ಕುಪ್ಪಳಿ


ಶಿವಮೊಗ್ಗದ ವಿಕಾಸ್ ಟ್ರಸ್ಟ್ ಹಾಗೂ ತೀರ್ಥಹಳ್ಳಿಯ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ರಾಷ್ಟ್ರ ಕವಿ ಕುವೆಂಪು ಅವರ ಕುಪ್ಪಳಿಯ ಪರಿಸರದಲ್ಲಿ ‘ರಾಜ್ಯಮಟ್ಟದ ಒಂದು ದಿನದ ಕವಿ ಸಮ್ಮಿಲನ’ ವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು 2022 ಆಗಸ್ಟ್ 14 ಭಾನುವಾರ ಪೂರ್ವಾಹ್ನ 8:30 ಗಂಟೆಗೆ ಕುಪ್ಪಳಿಯ ಹೇಮಾಂಗಣದಲ್ಲಿ ನಡೆಯಲಿದೆ.

ಸ್ಪರ್ಧೆಯ ನಿಯಮಗಳು: ಪೂರ್ಣ ವಿಳಾಸವಿಲ್ಲದ ಕವನಗಳನ್ನು ಪರಿಗಣಿಸಲಾಗುವುದಿಲ್ಲ. ಬರೆದ ಕವನಗಳನ್ನು ಮೊಬೈಲ್ನಲ್ಲಿ ಟೈಪ್ ಮಾಡಿ ಕಳಿಸಬೇಕು. ಪಲ್ಲವಿಯಲ್ಲದೇ 3 ರಿಂದ 5 ಚರಣಗಳ ಕವನವನ್ನು ಕಳಿಸಬೇಕು. ಕೊಟ್ಟಿರುವ ಮೂರು ವಿಷಯಗಳಲ್ಲಿ ಒಂದು ವಿಷಯದ ಕವನವನ್ನು ಮಾತ್ರ ಕಳಿಸಬೇಕು. ಕನ್ನಡ ಸಾಹಿತ್ಯದ ಯಾವುದೇ ಪ್ರಕಾರದ ಕವನವನ್ನೂ ಕಳಿಸಬಹುದು.

ವಿಷಯ ಸಮ್ಮಿಳಿತತೆ, ಶೈಲಿ,ಸೃಜನಶೀಲತೆ, ಭಾಷಾ ಸೊಗಡು, ಪದದ ಪ್ರೌಢಿಮೆ, ಭಾವಪೂರ್ಣತೆ, ಗೇಯತೆ,ಸಾಹಿತ್ಯ ಪ್ರಕಾರ ಈ ಅಂಶಗಳ ಆಧಾರದಲ್ಲಿ ಆಯ್ಕೆ ನಡೆಯಲಿದೆ. ಈಗಾಗಲೇ ಬೇರೆಡೆ ಪ್ರಕಟವಾದ ಕವನಕ್ಕೆ ಅವಕಾಶವಿರುವುದಿಲ್ಲ. ಹೆಸರು,ಊರು, ತಾಲ್ಲೂಕು,ವಯಸ್ಸು ಸಂಪರ್ಕ ಮೊಬೈಲ್ ಸಂಖ್ಯೆ ನಮೂದಿಸಬೇಕು. ಸ್ವರಚಿತ ಕವನ ಕಳಿಸಲು ಕೊನೆಯ ದಿನಾಂಕ 15/7/2022 ಆಗಿದ್ದು, ಫಲಿತಾಂಶದ ವಿಚಾರದಲ್ಲಿ ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಕಾರ್ಯಕ್ರಮದಲ್ಲಿ ಆಯ್ಕೆಯಾದ ಕವನಗಳ ವಾಚನಕ್ಕೆ ಅವಕಾಶವಿರುತ್ತದೆ ಹಾಗೂ ಆಯ್ಕೆಯಾದ ಕವನಗಳು ವಿಕ್ರಮ ವಾರಪತ್ರಿಕೆಯಲ್ಲಿ ಪ್ರಕಟವಾಗಲಿವೆ.

ಈ ಕೆಳಕಂಡ ಮೂರು ಶೀರ್ಷಿಕೆಗಳಲ್ಲಿ ಒಂದನ್ನು ಆಯ್ದುಕೊಂಡು ಕವನ ರಚಿಸಿ ಕಳುಹಿಸಬೇಕು. ಆಯ್ಕೆಯಾದ ಅತ್ಯುತ್ತಮ ಕವನಗಳಿಗೆ ಬಹುಮಾನವನ್ನು ನೀಡಲಾಗುವುದು.
1. ಪ್ರಕೃತಿಯ ಶಿಶು ನಾನು
2. ಗ್ರಾಮದೆಡೆಗೆ ನಮ್ಮ ನಡಿಗೆ
3. ಸಮರಸ ಹಿಂದು ಸಮರ್ಥ ಭಾರತ

ಪ್ರಥಮ ಬಹುಮಾನ : 10000ರೂಗಳು (ಒಬ್ಬರಿಗೆ) ದ್ವಿತೀಯ ಬಹುಮಾನ : 5000ರೂಗಳು (ಒಬ್ಬರಿಗೆ)
ತೃತೀಯಬಹುಮಾನ. : 4000ರೂಗಳು (ಒಬ್ಬರಿಗೆ) ಸಮಾಧಾನಕರ ಬಹುಮಾನಗಳು : 1000 ರೂಗಳು(ಹತ್ತು ಜನರಿಗೆ)
ಹೆಚ್ಚಿನ ಮಾಹಿತಿಗಾಗಿ : kavisammilana@gmail.com ಅಥವಾ 8762288990
ಮಹೇಶ್ ಹೊಳ್ಳ 9449494247 , ಅಣ್ಣಪ್ಪ ಅರಬಗಟ್ಟಿ 8971006661

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...