ಮೋಟಗಿಮಠದ ಶ್ರೀಗಳಿಗೆ ಡಾ.ಸ.ಜ.ನಾಗಲೋಟಿಮಠ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ

Date: 13-10-2021

Location: ಬೆಳಗಾವಿ


ಮಹಾತ್ಮರ ಚರಿತಾಮೃತ ಕೃತಿ ರಚಿಸಿದ ಅಥಣಿಯ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಅವರಿಗೆ ಡಾ..ಸ.ಜ.ನಾಗಲೋಟಿಮಠ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಿರೇಮಠದ ದಸರಾ ಉತ್ಸವದ 3ನೇ ದಿನ ಶನಿವಾರ ರಾತ್ರಿ ಬೆಳಗಾವಿಯಲ್ಲಿ ನಡೆದ ಸಮಾರಂಭದಲ್ಲಿ ಗದಗಿನ ಸದಾಶಿವಾನಂದ ಸ್ವಾಮೀಜಿ ಹಾಗೂ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ಅಥಣಿಯ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜ್ಯ ಅರಣ್ಯ, ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಮಾತನಾಡಿ, ಹುಕ್ಕೇರಿ ಹಿರೇಮಠದ ದಸರಾ ಉತ್ಸವವು ಕಳೆದ ಮೂರು ವರ್ಷಗಳಿಂದ ಸರಳವಾಗಿ ನಡೆದುಕೊಂಡು ಬಂದಿದೆ. ಆದರೆ, ಈ ವರ್ಷ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅಥಣಿಯ ಸ್ವಾಮೀಜಿ ಅವರಿಗೆ ನಾಗಲೋಟ ಮಠ ಪ್ರಶಸ್ತಿ ನೀಡಿದ್ದು ಖುಷಿ ತಂದಿದೆ ಎಂದರು.

ಗದಗಿನ ಸದಾಶಿವಾನಂದ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ, ಮೈಸೂರು ದಸರಾ ನಾಡಿಗೆ ಹೆಸರಾದರೆ, ಹುಕ್ಕೇರಿ ದಸರಾ ಭಾವೈಕ್ಯತೆಗೆ ಹೆಸರಾಗಿದೆ ಎಂದರೆ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮದ ಅಧ್ಯಯನದ ಸಾರವೇ ಮಹಾತ್ಮರ ಚರಿತಾಮೃತ ಬೃಹತ್ ಕೃತಿ ಎಂದರು. ಅಥಣಿಯ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿದರು.

ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ, ಹರ್ಷಲಾ ಹನಿ ಹಾಸ್ಯ ಪ್ರದರ್ಶನ ಮಾಡಿದರು. ಅವುಜಿಕರ ಆಶ್ರಮದ ಉತ್ತರಾಧಿಕಾರಿ ಅಭಿನವ ಮಂಜುನಾಥ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ, ಇಂಪನಾ ನಾಗಲೋಟಿಮಠ, ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಹಾವೀರ ನಿಲಜಗಿ, ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ ಪಾಟೀಲ, ಲಕ್ಷ್ಮಣ ವಾಳದ ಮತ್ತಿತರರು ಉಪಸ್ಥಿತರಿದರು.

MORE NEWS

ಬರಹದ ಭಾವವು ಮನುಷ್ಯ ಪ್ರೀತಿ ಹೆಚ್ಚ...

16-10-2021 ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪ, ಕೊಪ್ಪಳ

ಬರಹದ ಯಾವುದೇ ಭಾವವು ಮನುಷ್ಯರಲ್ಲಿ ಪ್ರೀತಿಯನ್ನು ಹೆಚ್ಚಿಸುವಂತಿರಬೇಕು ಎಂದು ಲೇಖಕಿ ಡಾ. ಹೇಢಮಾ ಪಟ್ಟಣಶೆಟ್ಟಿ ಅವರು ಬರ...

ವಿಚಾರವಾದಿ, ಲೇಖಕ ಜಿ.ಕೆ. ಗೋವಿಂದರ...

15-10-2021 ಬೆಂಗಳೂರು

ಪ್ರಗತಿಪರ ವಿಚಾರಗಳೊಂದಿಗೆ ಖ್ಯಾತರಾಗಿದ್ದ ಹಾಗೂ ತಮ್ಮ ಕಂಚಿನ ಕಂಠದಿಂದ ಸೈದ್ಧಾಂತಿಕತೆಯನ್ನುಪ್ರಬಲವಾಗಿ ಪ್ರತಿಪಾದಿಸುತ್...

ಡಾ. ಸಿದ್ದಣ್ಣ ಉತ್ನಾಳ ಪ್ರಶಸ್ತಿಗೆ...

15-10-2021 ವಿಜಯಪುರ

ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡು, ಸಾಹಿತ್ಯಾಸಕ್ತರನ್ನು ಕ್ರಿಯಾಶೀಲರನ್ನಾಗಿಸುತ್ತಲೇ ಇರುವ ವಿಜಯಪುರದ ಕರ್ನಾಟಕ...