ಓದು ಮನೋ-ಬೌದ್ಧಿಕ ಬದಲಾವಣೆ ತರಬಲ್ಲುದು: ದಿನೇಶಕುಮಾರ್

Date: 02-08-2021

Location: ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನ, ಸುಬ್ರಹ್ಮಣ್ಯನಗರ, ಲಾಯಿಲ, ಬೆಳ್ತಂಗಡಿ.


ಓದು, ಮನೋ-ಬೌದ್ಧಿಕ ಬದಲಾವಣೆಯನ್ನು ತರಬಲ್ಲುದು. ಆದರೆ, ಇಂದಿನ ಯುವ ಪೀಳಿಗೆಯು ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಅಧ್ಯಕ್ಷ ದಿನೇಶ್ ಕುಮಾರ್ ಹೇಳಿದರು.

ಬೆಳ್ತಂಗಡಿಯ ಸುಬ್ರಹ್ಮಣ್ಯ ನಗರದ ಸುಬ್ರಹ್ಮಣ್ಯ ಸ್ತಾನಿಕ ಬ್ರಾಹ್ಮಣ ಸಭಾದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಲೇಖಕ ಸಂತೋಷ್ ರಾವ್ ಪೆರ್ಮುಡ ಅವರ ‘ಗೆಲುವೇ ಜೀವನ ಸಾಕ್ಞಾತ್ಕಾರ’ ವ್ಯಕ್ತಿತ್ವ ವಿಕಸನ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಮೂಹ ಮಾಧ್ಯಗಳಿಂದ ಪಡೆಯುವ ಜ್ಞಾನಕ್ಕಿಂತಲೂ ಓದುವಿಕೆಯು ಹೆಚ್ಚಿನ ಜ್ಞಾನ ಮಾತ್ರವಲ್ಲ; ವಿಶ್ಲೇಷಣಾತ್ಮಕ ತೀಷ್ಣ ದೃಷ್ಟಿಯನ್ನು ನೀಡುತ್ತದೆ. ಯುವಪೀಳಿಗೆಯು ಸಮೂಹ ಮಾಧ್ಯಮಕ್ಕಿಂತ ಪುಸ್ತಕಗಳ ಓದು ಕಡೆಗೆ ಹೆಚ್ಚಿನ ಒಲವು ತೋರಬೇಕು. ಆದರೆ, ವಿಷಾದದ ಸಂಗತಿ ಎಂದರೆ, ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಲೇಖಕ ಸಂತೋಷ್ ರಾವ್ ಪೆರ್ಮುಡ ಅವರ ‘ಗೆಲುವೇ ಜೀವನ ಸಾಕ್ಷಾತ್ಕಾರ’ ಕೃತಿಯು ಯಶಸ್ವಿ ವ್ಯಕ್ತಿಯೊಬ್ಬನ ಮನೋಭಾವ ಹೇಗೆರಬೇಕು ಎನ್ನುವ ವಿಚಾರವನ್ನು ಅತ್ಯಂತ ಸರಳ ಭಾಷೆ ತಿಳಿಸುತ್ತದೆ ಎಂದು ಅಭಿಪ್ರಾಯಪಟ್ಟರು..

ಲೇಖಕ ಸಂತೋಷ್ ರಾವ್ ಪೆರ್ಮುಡ ಮಾತನಾಡಿ, ‘ಮನಸ್ಸಿನ ಸಂತೋಷಕ್ಕಾಗಿ ಲೇಖನಗಳನ್ನು ಬರೆಯಲು ಪ್ರಾರಂಭಿಸಿದೆ. ಆದರೆ ಅವು ಪುಸ್ತಕವಾಗಿ ಪ್ರಕಟವಾಗಬಲ್ಲವು ಎಂದುಕೊಂಡಿರಲಿಲ್ಲ. ಬದುಕಿನುದ್ದಕ್ಕೂ ವೃತ್ತಿ ಮತ್ತು ವೈಯುಕ್ತಿಕವಾಗಿ ಎದುರಿಸಿದ ಹಲವು ಘಟನೆಗಳೇ ಇಂದು ಗೆಲುವೇ ಜೀವನ ಸಾಕ್ಷಾತ್ಕಾರ ಪುಸ್ತಕ ರೂಪವನ್ನು ತಾಳಿವೆ ಎಂದರು.

ಲಕ್ಷ್ಮೀನಾರಾಯಣ ರಾವ್, ಧನಂಜಯ ರಾವ್ ಬಿ.ಕೆ, ಶ್ರೀಮತಿ ಶಾಂತಾ ಸುರೇಶ್, ರಾಧಾಕೃಷ್ಣ ರಾವ್, ಸುಮಂಗಲಾ ಪ್ರಶಾಂತ್, ಜಯಚಂದ್ರ ರಾವ್ ಸೇರಿದಂತೆ ಸಾಹಿತ್ಯಾಸಕ್ತರಿದ್ದರು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...