ಪಾರ್ಶ್ವಕೋನಾಸನ ಮತ್ತು ವೃಕ್ಷಾಸನ

Date: 04-10-2023

Location: ಬೆಂಗಳೂರು


ಪಾರ್ಶ್ವಕೋನಾಸನದಿಂದ ಹಲವು ಪ್ರಯೋಜಯನಗಳ ಜೊತೆಗೆ ಬೆನ್ನು ನೋವು ನಿವಾರಣೆಯಾಗುತ್ತದೆ. ಹಾಗೇ ವೃಕ್ಷಾಸನದಿಂದಾಗಿ ಏಕಾಗ್ರತೆ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಈ ಎರಡೂ ಆಸನಗಳ ಕುರಿತು ಯೋಗಪಟು ಚೈತ್ರಾ ಹಂಪಿನಕಟ್ಟಿ ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ವಿವರಿಸಿದ್ದಾರೆ.

ಪಾರ್ಶ್ವ : ಪಕ್ಕ
ಕೋನ : ಮೂಲೆ
ಆಸನ: ಭಂಗಿ

ಪಾರ್ಶ್ವಕೋನಾಸನ ಮಾಡುವ ವಿಧಾನ:

1) ಮೊದಲು ತಾಡಸನದಲ್ಲಿ ನಿಂತುಕೊಳ್ಳಿ, ನಂತರ ಉಸಿರನ್ನು ಒಳಗೆ ತೆಗೆದುಕೊಂಡು ಸಲ್ಪ ಜಿಗಿದು ಕಾಲುಗಳನ್ನು ಅಗಲಿಸಿಬೇಕು ನಿಲ್ಲಬೇಕು. ಎರಡೂ ಕಾಲುಗಳ ನಡುವೆ 4 ಅಡಿಗಳ ಅಂತರ ಇರಲಿ.
2) ನಂತರ ಬಲಗಾಲನ್ನು 90% ಅಲ್ಲಿ ತಿರುಗಿ ಬಲಗಾಲಿನ ಮಂಡಿಯನ್ನು ಮಡಚಬೇಕು.
3) ನಂತರ ಎಡಗಾಲು ನೇರವಾಗಿರಬೇಕು ಬಲಗಾಲಿನ ಪಕ್ಕದಲ್ಲಿ ಬಲಗೈಯನ್ನು ಇಡಬೇಕು, ನಂತರ ಎಡಕೈ ಕಿವಿಗೆ ತಾಗಿರಬೇಕು ಚಿತ್ರದಲ್ಲಿರುವಂತೆ, ನಂತರ ಎಡಗಾಲನ್ನು ಮಡಿಚಬಾರದು, ಮತ್ತು ಉಸಿರಾಟದ ಕ್ರಿಯೆಯು ಸಹಜವಾಗಿರಬೇಕು, ೧೦ ಸೆಂಕೆಡ್ ಗಳ ಕಾಲ ಇದ್ದು ನಂತರ ಸಮಸ್ಥಿತಿಗೆ ಬರಬೇಕು.
4) ನಂತರ ಇನ್ನೊಂದು ಬದಿ ಹೀಗೆಯೇ ಪ್ರಯತ್ನಿಸಿ.

ಪಾರ್ಶ್ವಕೋನಾಸನದ ಪ್ರಯೋಜನೆಗಳು:

1) ಈ ಆಸನದಿಂದ ಕಾಲುಗಳು ಸದೃಢವಾಗುತ್ತದೆ.
2) ಮಂಡಿ ಮತ್ತು ತೊಡೆಗಳ ತೊಂದರೆ ನಿವಾರಣೆಯಾಗುತ್ತದೆ.
3) ಪಕ್ಕೆಲುಬಿನ ಕೊಬ್ಬು ಕರಗುತ್ತದೆ.
4) ಮಲಬದ್ಧತೆ ನಿವಾರಣೆಯಾಗುತ್ತದೆ.
5) ಬೆನ್ನು ನೋವು ನಿವಾರಣೆಯಾಗುತ್ತದೆ.
6) ಲಿವರ್ ಮತ್ತು ಮೇದೋಜೀರಕ ಗ್ರಂಥಿ ಉತ್ತೇಜನಗೊಳ್ಳುವುದು.
7)ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.

ವೃಕ್ಷಾಸನ

ವೃಕ್ಷಾಸನ: ಮರದ ಭಂಗಿ

ಸ್ಥಾನ: ನಿಂತಿರುವುದು

ಆಸನ: ಭಂಗಿ

ಮಾಡುವ ವಿಧಾನ:

1) ಮೊದಲು ನೇರವಾಗಿ ನಿಂತುಕೊಳ್ಳಿ, ಮತ್ತು ನಿಮ್ಮ ಪಾದಗಳನ್ನು ಒಟ್ಟಿಗೆ ಇರಿಸಿ ನಿಮ್ಮ ಮೊಣಕಾಲುಗಳನ್ನು ಸಂಪೂರ್ಣವಾಗಿ ನೇರವಾಗಿ ಇರಿಸಿ.
2) ನಿಮ್ಮ ತೋಳುಗಳನ್ನು ನೇರವಾಗಿ ಇರಿಸಿ. ನಿಮ್ಮ ಎಡ ಮೊಣಕಾಲು ತಿರುಗಿಸದೆ, ನಿಮ್ಮ ಬಲ ಪಾದವನ್ನು ಮೇಲಕ್ಕೆತ್ತಿ ಮತ್ತು ನಿಮ್ಮ ಬಲಗೈಯಿಂದ ಕೆಳಗಿನ ಕಾಲು (ಪಾದದ) ಹಿಡಿದುಕೊಳ್ಳಿ.
3) ಈಗ ನಿಮ್ಮ ಬಲಗಾಲನ್ನು ಮಂಡಿಯಲ್ಲಿ ಮಡಚಿ. ನಿಮ್ಮ ಎರಡೂ ಕೈಗಳನ್ನು ಬಳಸುವ ಮೂಲಕ, ಎಡ ತೊಡೆಯ ಮೇಲೆ ಬಲ ತೊಡೆಯನ್ನು ಇರಿಸಿ ನಿಮ್ಮ ಕಾಲ್ಬೆರಳುಗಳು ಕೆಳಮುಖವಾಗಿ ಇರಬೇಕು, ನಿಮ್ಮ ಬಲ ಹಿಮ್ಮಡಿಯು ತೊಡೆಯೊಳಗೆ ಒತ್ತಬೇಕು.
4) ಈಗ ಎಡ ಕಾಲಿನ ಮೇಲೆ ನಿಮ್ಮ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು, ನಂತರ ಎರಡು‌ ಕೈ ನಮಸ್ಕಾರ ಮುದ್ರೆಯಲ್ಲಿ ಇರಬೇಕು, ಉಸಿರಾಟದ ಕ್ರಿಯೆಯು ಸಹಜವಾಗಿ ಇರಬೇಕು.
5) ನಂತರ ಇನ್ನೊಂದು ಬದಿ ಈ ಆಸನವನ್ನು ಆರಂಭಿಸಿ.

ವೃಕ್ಷಾಸನದ ಪ್ರಯೋಜನಗಳು:

1) ಬೆನ್ನುಮೂಳೆಯನ್ನು ಬಲಪಡಿಸುತ್ತದೆ.
2) ಇದು ಪಾದಗಳ ಸ್ನಾಯುರಜ್ಜು ಮತ್ತು ಅಸ್ಥಿರಜ್ಜುಗಳನ್ನು ಬಲಪಡಿಸುತ್ತದೆ.
3) ಇದು ಕಾಲಿನ ಸ್ನಾಯುಗಳನ್ನು ಟೋನ್ ಮಾಡುತ್ತದೆ.
4) ಮಂಡಿಯನ್ನು ಬಲಪಡಿಸುತ್ತದೆ.
5) ಒಳಗಿನ ಕಿವಿಗಳು, ಕಣ್ಣುಗಳು ಮತ್ತು ಭುಜಗಳನ್ನು ಬಲಪಡಿಸುತ್ತದೆ.
6) ಮನಸ್ಸಿಗೆ ಶಾಂತತೆಯನ್ನು ನೀಡುತ್ತದೆ ಮತ್ತು ದೇಹವನ್ನು ಗಟ್ಟಿಮುಟ್ಟಾಗಿ ಮತ್ತು ಹೊಂದಿಕೊಳ್ಳುವಂತೆ ಮಾಡುತ್ತದೆ.
7) ಏಕಾಗ್ರತೆ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.

chaitrah8989@gmail.com
ಚೈತ್ರ ಹಂಪಿನಕಟ್ಟಿ.

 

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...