ಪ್ರಭಾವತಿ, ರಘುನಂದನ್‌, ಮಾಲತಿ ಹಾಗೂ ಮೆಹೆಂದಳೆಗೆ ಲೇಖಿಕಾ ಶ್ರೀ ಪ್ರಶಸ್ತಿ

Date: 26-11-2020

Location: ಬೆಂಗಳೂರು


ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆವು ಕೊಡಮಾಡುವ 2020ನೇ ಸಾಲಿನ ಲೇಖಿಕಾ ಶ್ರೀ ಪ್ರಶಸ್ತಿಗೆ ಲೇಖಕರಾದ ಡಾ.ಎಸ್.ವಿ. ಪ್ರಭಾವತಿ, ಡಾ. ಬೇಲೂರು ರಘುನಂದನ್, ಮಾಲತಿ ಮುದಕವಿ ಮತ್ತು ಸಂತೋಷ್‌ ಕುಮಾರ್ ಮೆಹಂದಳೆ ಅವರು ಭಾಜನರಾಗಿದ್ದಾರೆ.

ಎಸ್.ವಿ. ಪ್ರಭಾವತಿ ಅವರ ಸಮಗ್ರ ವಿಮರ್ಶೆ, ಬೇಲೂರು ರಘುನಂದನ್ ಅವರ ರೂಪ ರೂಪಗಳನು ದಾಟಿ, ಮಾಲತಿ ಮುದಕವಿ ಅವರ ಜೀವನ ಸಂಧ್ಯಾ ರಾಗ ಹಾಗೂ ಸಂತೋಷ್‌ ಕುಮಾರ್‌ ಮೆಹಂದಳೆ ಅವರ ಮಹಾಪತನ ಕೃತಿ ಆಯ್ಕೆಯಾಗಿವೆ.

ಡಿಸೆಂಬರ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಈ ಕೃತಿಗಳ ಲೇಖಕರಿಗೆ ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ವೇದಿಕೆಯ ಸಂಚಾಲಕಿ ಶೈಲಜಾ ಸುರೇಶ್‌ ಅವರು ತಿಳಿಸಿದ್ದಾರೆ.

ವಿಜಯಪುರದ ಪಿಯು ಕಾಲೇಜಿನಲ್ಲಿ ಕನ್ನಡ ಅರೆಕಾಲಿಕ ಉಪನ್ಯಾಸಕಿ ಆಗಿರುವ ಮಾಲತಿ ಮುದಕವಿ ಅವರು ಚಿತ್ತ ಚಿತ್ತಾರ ಗಂಧವತೀ ಪೃಥ್ವಿ (ಕಥಾ ಸಂಕಲನ) ಜೀವನ ಸಂಧ್ಯಾ ರಾಗ (ಹಾಸ್ಯ ಸಂಕಲನ) ಹಾಸ್ಯ ರಂಗೋಲಿ(ಅಚ್ಚಿನಲ್ಲಿ) ಎರಡು ಸಂಭಾವನಾ ಗ್ರಂಥಗಳು: ಶುಭದಾ: ನೆನಪಿನ ಭಾವತರಂಗ ಮಂದಾಕಿನಿ ಪ್ರಕಟಿತ ಕೃತಿಗಳು

ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿದ್ದು, ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ 8 ನಾಟಕ ಪುಸ್ತಕಗಳು ಪ್ರಕಟಗೊಂಡಿವೆ. 2017 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಗೆ ಸದಸ್ಯರಾಗಿದ್ದು, ಅವರಿಗೆ ಕುವೆಂಪು ಯುವಕವಿ ಪುರಸ್ಕಾರ, ಬೇಂದ್ರೆ ಗ್ರಂಥ ಬಹುಮಾನ, ಸಾಲು ಮರದ ತಿಮ್ಮಕ್ಕ ಹಸುರು ಪ್ರಶಸ್ತಿ, ಎಚ್.ಎಸ್.ವಿ. ಪುಟಾಣಿ ಸಾಹಿತ್ಯ ಪುರಸ್ಕಾರ, ತೇಜಸ್ವಿ ಕಟ್ಟೀಮನಿ ಯುವ ಪುರಸ್ಕಾರ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ.

ಸ್ತ್ರೀವಾದಿ ಚಿಂತಕಿ ಎಸ್.ವಿ. ಪ್ರಭಾವತಿಯವರು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದವರು. ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದು, ನಾಲ್ಕು ಕಿರು ಕಾದಂಬರಿಗಳನ್ನು ರಚಿಸಿದ್ದರೆ, ಕಾದಂಬರಿ, ಅಂಕಣ, ಕಥೆ, ವಿಜ್ಞಾನ, ಪರಿಸರ. ಪ್ರವಾಸ ಕಥನ, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಸಂಬಂಧಿ ಬರಹಗಳಲ್ಲಿ ಸಂತೋಷ್ ಮೆಹಂದಳೆ ಅವರ ಹೆಸರು ಪ್ರಮುಖವಾಗಿದೆ.

MORE NEWS

ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್‌ನ ಅಧ್ಯಕ್ಷರಾಗಿ ನರಹಳ್ಳಿ ಬಾಲಸುಬ್ರಹ್ಮಣ್ಯ ಆಯ್ಕೆ

27-04-2024 ಬೆಂಗಳೂರು

ಬೆಂಗಳೂರು: ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸ್ತುತಪಡಿಸುತ್ತಿರುವ ವ...

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...