ಪುಸ್ತಕ ಓದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ: ಪ್ರೊ. ವೈ.ಎಸ್. ಸಿದ್ದೇಗೌಡ ಸಲಹೆ

Date: 07-03-2021

Location: ತುಮಕೂರು


ಪುಸ್ತಕಗಳನ್ನು ಓದಿದರೆ ಸಾಲದು. ಅಲ್ಲಿ ವ್ಯಕ್ತವಾದ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ, ಕರ್ನಲ್ ಪ್ರೊ. ವೈ. ಎಸ್‌. ಸಿದ್ದೇಗೌಡ ಸಲಹೆ ನೀಡಿದರು.

ನಗರದ ಕನ್ನಡ ಭವನದಲ್ಲಿ ಡಾ. ಮಾರುತಿ ಎನ್. ಎನ್. ಅವರ ಚೊಚ್ಚಲ ಕತಾ ಸಂಕಲ ‘ನಿಗೂಡ ನಿಶಾಚರಿಗಳು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ವ್ಯಕ್ತಿಯು ಸಮಾಜಕ್ಕೆ ಕೊಡುಗೆ ನೀಡಬೇಕು. ಇಲ್ಲಿ ಸಾಹಿತ್ಯವು ಮಹತ್ವ ಸ್ಥಾನ ಪಡೆಯತ್ತದೆ. ಉತ್ತಮ ಪುಸ್ತಕಗಳ ಓದು ಹಾಗೂ ಅಲ್ಲಿಯ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜಕ್ಕೆ ಕೊಡುಗೆ ನೀಡಿದಂತೆ ಎಂದರು.

ನಟ ಹಾಗೂ ಲೇಖಕ ಶ್ರೀನಾಥ ಕೃತಿಯ ಕುರಿತು ಮಾತನಾಡಿ, ಕೃತಿಯ ನಿರೂಪಣೆ ಸೊಗಸಾಗಿದ್ದು, ಧಾರಾವಾಹಿ ಮಾಡಬಹುದು ಎಂದು ಅಭಿಪ್ರಾಯಪಟ್ಟರು. ತುಮಕೂರು ವಿವಿ ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ ಮುಖ್ಯಸ್ಥ ಡಿ.ವಿ. ಪರಮಶಿವಮೂರ್ತಿ, ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಹನುಮಂತೇಗೌಡ, ಡಾ. ಗುರುಬಸಪ್ಪ ಡಿ .ಎಚ್, ಬಾ ಹ ರಮಾಕುಮಾರಿ ,ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಮಲ್ಲಿಕಾ ಬಸವರಾಜು, ಕವಿ ರವಿಕುಮಾರ್ ನಿಹಾ ಸಾಹಿತ್ಯಲೋಕ ಅಪ್ಲಿಕೇಶನ್ ನ ರಘುವೀರ್ ಸಮರ್ಥ್, ಕೃತಿಕಾರ ಮತ್ತಿತರ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು

 

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...