ಪುಸ್ತಕಗಳ ರಚನೆಯಲ್ಲಿ ಎಚ್ಚರಿಕೆ ಅವಶ್ಯ: ಡಾ. ಕೆ. ಕಮಲಾಕ್ಷ

Date: 30-09-2022

Location: ಪುತ್ತೂರು.


ಪುಸ್ತಕಗಳು ಓದುಗರ ಹಾಗೂ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಲೇಖಕರು ಪುಸ್ತಕವನ್ನು ಎಚ್ಚರಿಕೆಯಿಂದ ರಚಿಸಬೇಕಾದ ಅವಶ್ಯಕತೆಯಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ ಹೇಳಿದರು.

ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಸಿ. ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿರುವ ಲಲಿತಾಂಬಿಕಾ ವೇದಿಕೆಯಲ್ಲಿ 21ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಗೋಷ್ಠಿಯಲ್ಲಿ ನಾಲ್ಕು ನೂತನ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.

ಬರವಣಿಗೆ ಕ್ರೀಯೆ ಹಲವಾರು ಹಂತಗಳನ್ನು ಒಳಗೊಂಡಿದ್ದು, ಇವುಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡಾಗ ಉತ್ತಮ ಕೃತಿಯನ್ನು ರಚಿಸಲು ಸಾಧ್ಯ ಎಂದು ಹೇಳಿದರು.

ರಮೇಶ್ ಉಳಯ ಅವರು ‘ಮಕ್ಕಳ ಸಾಹಿತ್ಯ- ಹೊಸ ಕಾಲದ ಗದ್ಯ’ ವಿಷಯ ಮಂಡಿಸಿ, ಹಿಂದಿನ ಜಾನಪದ ಗದ್ಯ ಪದ್ಯ ಹಾಗೂ ಇತ್ತೀಚಿನ ದಿನಗಳಲ್ಲಿರುವ ಮಕ್ಕಳ ಅಭಿರುಚಿಗಳ ಮಾಹಿತಿ ನೀಡಿದರು.

ರಾಧೇಶ್ ತೋಳ್ಪಾಡಿ ಅವರು ‘ಮಕ್ಕಳ ಕಾವ್ಯದಲ್ಲಿ ಇತ್ತೀಚಿನ ಒಲವುಗಳು’ ವಿಚಾರ ಮಂಡನೆ ಮಾಡಿ ಕಾಲದಿಂದ ಕಾಲಕ್ಕೆ ಮಕ್ಕಳ ಸಾಹಿತ್ಯದಲ್ಲಿ ಆಗಿರುವ ಬದಲಾವಣೆಗಳನ್ನು ಉಲ್ಲೇಖಿಸಿದರು. ತಿರುಮಲೇಶ್ ಅವರು ಬರೆದಿರುವ 10 ಕವನ ಸಂಕಲಗಳಿ0ದ ಕೆಲ ಮಕ್ಕಳ ಸಾಹಿತ್ಯದ ಗೀತೆಗಳ ವಾಚನ ಮಾಡಿದರು.

ಡಾ. ಕೆ. ಕಮಲಾಕ್ಷ ಅವರು ಮಿತ್ತೂರು ವಿಶ್ವನಾಥ ಕುಲಾಲ್ ಬರೆದ ಕವನ ಸಂಕಲನ ನಾಲ್ಕಾಣೆ ನಾಣ್ಯ, ಮಲ್ಲೇಶಯ್ಯ ಹೆಚ್.ಎಂ. ಅವರ ಭರವಸೆಯೇ ಬಾಳಿನ ಬೆಳಕು, ಛಲ ಬಿಡದ ಹುಡುಗಿ, ಮನಸ್ಸಿದ್ದೆಡೆ ಮಾರ್ಗ ನಾಟಕಗಳು, ಶಾಂತ ಕುಂಟಿನಿ ಅವರು ಬರೆದ ಕವನ ಸಂಕಲನ ಬಿಡುಗಡೆ ಮಾಡಿದರು.

ಸಮಾವೇಶದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಶ್ರೀಧರ್ ಎಚ್.ಜಿ., ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಂ.ಪಿ ಶ್ರೀನಾಥ್ ಉಪಸ್ಥಿತರಿದ್ದರು.
ಗೋಷ್ಠಿಯನ್ನು ಡಾ. ಪೀಟರ್ ವಿಲ್ಸನ್ ನಿರೂಪಿಸಿದರು. ಪುತ್ತೂರು ಉಮೇಶ್ ನಾಯಕ್ ಸ್ವಾಗತಿಸಿ, ಕುಸುಮ್‌ರಾಜ್ ವಂದಿಸಿದರು. ಶ್ರುತಿ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

MORE NEWS

ಬೆಳಗಾವಿ ಗಡಿ ಹೋರಾಟದಲ್ಲಿ ಶಿವರಾಮು...

27-11-2022 ಬೆಂಗಳೂರು

'ಸುಪ್ರೀಂಕೋರ್ಟ್‌ನಲ್ಲಿ ಮತ್ತೊಮ್ಮೆ ಬೆಳಗಾವಿ ಗಡಿ ವಿವಾದ ವಿಚಾರಣೆಗೆ ಬಂದಿದ್ದು, ಬೆಳಗಾವಿ, ನಿಪ್ಪಾಣಿ ಸೇರಿ...

ಹಂಪಿ ಕನ್ನಡ ವಿ.ವಿ ಪ್ರಾಧ್ಯಾಪಕ ವಾ...

27-11-2022 ವಿಜಯನಗರ

ಭೀಕರ ಕಾರು ಅಪಘಾತದಲ್ಲಿ ವಿಜಯನಗರದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನ್, ಪ್ರಾಧ್ಯಾಪಕ ಪ್ರೊ.ಸಿ...

ತಳ ಸಮುದಾಯದ ಸಮಸ್ಯೆಗಳು, ಅವರ ಜೀವನ...

27-11-2022 ರಾಯಚೂರು

ಕವಿ ನರಸಿಂಹಲು ವಡವಾಟಿ ಅವರು ತಳ ಸಮುದಾಯದ ಸಮಸ್ಯೆಗಳು ಅವರ ಜೀವನ ಮತ್ತು ಪರಿಸರವನ್ನು ಇಟ್ಟುಕೊಂಡು ಮೌನ ಮುರಿದಾಗ ಕವನ ಸ...