ಎಸ್. ನಟರಾಜ ಬೂದಾಳು ಅವರ ಅನುವಾದಿತ `ಸರಹಪಾದ' ಕೃತಿಗೆ ಸಾಹಿತ್ಯಅಕಾಡೆಮಿ ಪ್ರಶಸ್ತಿ

Date: 18-09-2021

Location: ಬೆಂಗಳೂರು


ಕೇಂದ್ರ ಸಾಹಿತ್ಯ ಅಕಾಡೆಮಿಯು ವಿವಿಧ ಭಾಷೆಗಳ ಅನುವಾದಿತ ಪುಸ್ತಕಗಳಿಗೆ ಕೊಡಮಾಡುವ ಪ್ರಶಸ್ತಿಗಳ ಆಯ್ಕೆಯನ್ನುಶನಿವಾರ ಸಂಜೆ ಘೋಷಿಸಿದ್ದು, ಕರ್ನಾಟಕದ ಖ್ಯಾತ ಬರಹಗಾರ ಪ್ರೊ. ಎಸ್. ನಟರಾಜ ಬೂದಾಳು ಅವರ ‘ಸರಹಪಾದ’ ಕೃತಿಯು 2020ನೇ ಸಾಲಿನ ಪ್ರಶಸ್ತಿಗಾಗಿ ಆಯ್ಕೆಯಾಗಿದೆ.

‘ಸರಹಪಾದ’ ಕೃತಿಯು ಸರಹಪಾದನ ಬರಹಗಳು, ಆತನ ಚಿಂತನೆ, ದೋಹೆಗಳು ಹೀಗೆ ಆತನ ಸಾಹಿತ್ಯದ ಸಮಗ್ರತೆಯ ನೋಟವನ್ನು ಕಟ್ಟಿಕೊಡುತ್ತದೆ. ಈತನನ್ನು ಭಾರತದ ಬೌದ್ಧ ಸಿದ್ಧ ಪರಂಪರೆಯ ಆಚಾರ್ಯ, ಸಹನಯಾನದ ಗುರು, ಸಿದ್ಧರ ಸಿದ್ಧ, ಬೌದ್ಧ ವಜ್ರಯಾನದ ಮಹಾಗುರು ಎಂದೂ ಗುರುತಿಸಲಾಗುತ್ತದೆ. ಈತ ಬೌದ್ಧ ಗುರು ನಾಗಾರ್ಜುನನ ಗುರುವೂ ಆಗಿದ್ದ.

ಈತ ಅರ್ಥರಹಿತ ಸಾಂಪ್ರದಾಯಿಕ ನಡೆ-ಆಚರಣೆಗಳನ್ನು ವಿರೋಧಿಸಿದ್ದು ಮಾತ್ರವಲ್ಲ ಗೇಲಿ ಮಾಡಿದವನು. ನೈಸರ್ಗಿಕ ಬದುಕಿಗೆ ಮಹತ್ವ ನೀಡಿದಾತ. ಸರಹಪಾದನ ದೋಹೆಗಳು ಅಪಭ್ರಂಶ ಭಾಷೆಯಲ್ಲಿವೆ. ಸರಹಪಾದನ ದೋಹಾಲಂಕಾರ ಪುಷ್ಪ, ದೋಹಾಕೋಸನಾಮ ಚರ್ಯಾಗೀತೆ, ವಜ್ರಗೀತೆಗಳ ಕನ್ನಡ ರೂಪವೇ ಈ ಪುಸ್ತಕ.

ಎಸ್.ನಟರಾಜ ಬೂದಾಳು : ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಈಗ ನಿವೃತ್ತರು. ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ‘ಮೂಲಮಧ್ಯಮಕಾರಿಕಾ’ವನ್ನು ಕನ್ನಡಕ್ಕೆ ಅನುವಾದಿಸಿದವರು. ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದು, ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ..

 

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...