ಸಂಗಾತ ಕಥಾಸ್ಪರ್ಧೆ ಗೆದ್ದವರಿಗೆ ಹತ್ತು ಸಾವಿರ ನಗದು ಬಹುಮಾನ

Date: 15-09-2019

Location: ಧಾರವಾಡ


ಸಂಗಾತ ಸಾಹಿತ್ಯ ತ್ರೈಮಾಸಿಕವು ಯುವ ಬರಹಗಾರರಿಗೆ ಕಥಾಸ್ಪರ್ಧೆಯನ್ನು ಏರ್ಪಡಿಸಿದೆ. 35 ವರ್ಷ ವಯೋಮಿತಿಯೊಳಗಿನವರು ಈ ಸ್ಪಧೆಯಲ್ಲಿ ಭಾಗವಹಿಸಬಹುದಾಗಿದ್ದು, ಕಥೆಗಳಿಗೆ ಪದಮಿತಿ ಇರುವುದಿಲ್ಲ.

ಈ ಸ್ಪರ್ಧೆಗೆ ಕೆಲವು ನಿಯಮಾವಳಿಗಳಿದ್ದು, ಸ್ಪರ್ಧೆಗೆ ಕಳುಹಿಸುವ ಕಥೆ ಈ ಮೊದಲು ಎಲ್ಲಿಯೂ ಪ್ರಕಟವಾಗಿರಕೂಡದು. ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಥೆಯ ಜೊತೆ ಜನ್ಮ ದಿನಾಂಕ ದೃಢೀಕರಣ ಪತ್ರ ಇರುವ ಸ್ವವಿವರ ಪತ್ರ ಕಡ್ಡಾಯ. ಇ-ಮೇಲ್ ಮೂಲಕವೇ ಕಥೆಯನ್ನು ಕಳುಹಿಸಬೇಕು. ಅಂಚೆಯ ಮೂಲಕ ಬಂದ ಕಥೆಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಬಹುಮಾನಿತ ಕಥೆಗೆ 10000 ರೂ ಹಾಗೂ ಒಪ್ಪಿತ ಕಥೆಗಳಿಗೆ ತಲಾ 5000 ರೂ ಬಹುಮಾನವಿರುತ್ತದೆ. ಕಥೆಗಳನ್ನು ಕಳುಹಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 15.

ಇ-ಮೇಲ್: sangaata2018@gmail.com

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9341757653

MORE NEWS

ಲೇಖಿಕಾ ಸಾಹಿತ್ಯ ವೇದಿಕೆಯ ‘ವಾಣಿ ಕೌಟುಂಬಿಕ ಕಥಾ ಸ್ಪರ್ಧೆ’ ಫಲಿತಾಂಶ ಪ್ರಕಟ

07-05-2024 ಬೆಂಗಳೂರು

ಬೆಂಗಳೂರು: ಲೇಖಿಕಾ ಸಾಹಿತ್ಯ ವೇದಿಕೆ- ಹಿರಿಯ ಲೇಖಕಿ ವಾಣಿಯವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ `ವಾಣಿ ಕೌಟುಂಬಿಕ ಕಥಾ ...

ನಯನ ರಾಜು ಅವರ ಕಾರ್ಯವೈಖರಿ ಪಕ್ವತೆಯಿಂದ ಕೂಡಿದೆ; ಬರಗೂರು ರಾಮಚಂದ್ರಪ್ಪ

05-05-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ರಂಗ ಪರಿಷತ್ತು ಕೇಂದ್ರ ಸಮಿತಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ರಾಜ...

ಗಂಭೀರವಾದ ಸಾಹಿತ್ಯ ವಿಮರ್ಶೆಗಳ ಸ್ಥಾನಮಾನ ಕನ್ನಡದ ಅಳಿವು ಉಳಿವಿನ ಪ್ರಶ್ನೆಯಾಗಿದೆ; ಬಸವರಾಜ ಕಲ್ಗುಡಿ

05-05-2024 ಬೆಂಗಳೂರು

ಬೆಂಗಳೂರು: ಅಂಕಿತ ಪುಸ್ತಕದ ವತಿಯಿಂದ ಪದ್ಮರಾಜ ದಂಡಾವತಿ ಅವರ ‘ಉಳಿದಾವ ನೆನಪು’ ಪತ್ರಕರ್ತನ ವೃತ್ತಿ ಜೀವನ...