ಸರ್ವ ರೋಗಗಳಿಗೂ ಮದ್ದು `ಸರ್ವಾಂಗಾಸನ'

Date: 29-09-2023

Location: ಬೆಂಗಳೂರು


''ಸರ್ವ ರೋಗಗಳಿಗೂ ಮದ್ದು "ಸರ್ವಾಂಗಾಸನ''. ಸರ್ವಾಂಗಾಸನವನ್ನು ಎಲ್ಲಾ ಆಸನಗಳ "ರಾಣಿ" ಎಂದು ಕರೆಯಲಾಗುತ್ತದೆ,'' ಎನ್ನುತ್ತಾರೆ ಯೋಗಪಟು ಚೈತ್ರಾ ಹಂಪಿನಕಟ್ಟಿ. ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ಈ ಬಾರಿ ಸರ್ವಾಂಗಾಸನ ಹಾಗೂ ಪರಿವೃತ ತ್ರಿಕೋನಾಸನನದ ಕುರಿತು ವಿವರಿಸಿದ್ದಾರೆ.

ಸರ್ವ ರೋಗಗಳಿಗೂ ಮದ್ದು "ಸರ್ವಾಂಗಾಸನ"

ಸರ್ವಾಂಗಾಸನವನ್ನು ಎಲ್ಲಾ ಆಸನಗಳ "ರಾಣಿ" ಎಂದು ಕರೆಯಲಾಗುತ್ತದೆ.

ಸರ್ವಾಂಗಾಸನ :
ಸರ್ವಾಂಗಾಸನವು ಸಂಸ್ಕೃತ ಪದವಾಗಿದ್ದು, 'ಸರ್ವ್' ಎಂದರೆ 'ಅಂಗ'. (ನಿಮ್ಮ ದೇಹದ ಎಲ್ಲ ಭಾಗಗಳು) 'ಆಸನ' ಎಂದರೆ ಭಂಗಿಯೆಂದು ಕರೆಯುತ್ತಾರೆ.

ಸರ್ವಾಂಗಾಸನ ಮಾಡುವ ವಿಧಾನ:
* ಯೋಗಾಭ್ಯಾಸಿಸಲು ಮೊದಲು ನೆಲದ ಮೇಲೆ ಅಂಗಾತವಾಗಿ, ನೇರವಾಗಿ ಮಲಗಬೇಕು.
*ಅನಂತರ ನಿಧಾನವಾಗಿ ಎರಡೂ ಕಾಲುಗಳನ್ನು ಏಕಕಾಲದಲ್ಲಿ 90° ಯಲ್ಲಿ (ಉತ್ಥಿತ ಪಾದಾಸನದಂತೆ) ಮೇಲಕ್ಕೆ ಎತ್ತಬೇಕು.
*ಅನಂತರ ಉತ್ಥಿತ ಪಾದಾಸ್ತನದಲ್ಲಿ ಲಂಬವಾಗಿದ್ದ ಕಾಲುಗಳನ್ನು ತಲೆಯ ಕಡೆಗೆ ಆದಷ್ಟೂ ಬಗ್ಗಿಸಬೇಕು.
* ಅನಂತರ ಹಲಾಸನ ಮಾಡಿ ಎರಡು ಕಾಲುಗಳನ್ನು ನೆಲಕ್ಕೆ ತಾಗಿಸಿ ನಂತರ ಒಂದೊಂದಾಗಿ ಕಾಲುಗಳನ್ನು ‌ಮೇಲಕ್ಕೆ ಎತ್ತಬೇಕು ಭುಜದ ಮೇಲೆ ದೇಹವನ್ನು ಬಾಲೆನ್ಸ್ ಮಾಡಬೇಕು ಮತ್ತು ಸಹಜವಾಗಿ ಉಸಿರಾಟದ ಕ್ರಿಯೆ ಮಾಡಬೇಕು, ೧೦ ಸೆಂಕೆಡ್ ಗಳ ಕಾಲ ಇರಬೇಕು ಅನಂತರ ಸಮಸ್ಥಿತಿಗೆ ಬರಬೇಕು.

ಸರ್ವಾಂಗಾಸನದ ಪ್ರಯೋಜನೆಗಳು:
1) ಸರ್ವಾಂಗಾಸನದ ಅಭ್ಯಾಸದಿಂದ ವೀರ್ಯದೋಷ, ರಕ್ತದೋಷಗಳು ನಿವಾರಣೆಯಾಗುವವು.
2) ಹಸಿವು ಹೆಚ್ಚುಸುತ್ತದೆ.
3) ಈ ಆಸನದಲ್ಲಿ ಬೆನ್ನುಮೂಳೆ ನೇರವಾಗುವುದರಿಂದ, ಜ್ಞಾನತಂತುಗಳು ವಿಶೇಷ ಲಾಭ ಪಡೆಯುವುವು.
4)ಥೈರಾಯ್ಡ್ ಸಮಸ್ಯೆಗೆ ಉತ್ತಮವಾದ ಆಸನಾಗಿದೆ.
5)ಭುಜಗಳು ಬಲಿಷ್ಠವಾಗುತ್ತವೆ.
6)ಗ್ಯಾಸ್ಟ್ರಿಕ್‌ ಸಮಸ್ಯೆ ಗೂ ಸಹ ಉತ್ತಮವಾದ ಆಸನವಾಗಿದೆ.

 

 

 

 

 

 

 

 

 

 

ಪರಿವೃತ ತ್ರಿಕೋನಾಸನ:
ಅರ್ಥ:- ಪರಿವೃತ ತ್ರಿಕೋನಾಸನದಲ್ಲಿ ಶರೀರವು ಸಂಪೂರ್ಣವಾಗಿ ವಿರುದ್ಧ ದಿಕ್ಕಿನಲ್ಲಿ ತಿರುಗಿರುತ್ತದೆ. ಅದರ ಅರ್ಧ ಭಾಗವೇ ಅರ್ಧ ಪರಿವೃತ ತ್ರಿಕೋನಾಸನ.

ಪರಿವೃತ ತ್ರಿಕೋನಾಸನ ಮಾಡುವ ವಿಧಾನ:
1) ಮೊದಲು ನೇರವಾಗಿ ನಿಂತು, ನಿಮ್ಮ ಕಾಲುಗಳನ್ನು ಅಗಲವಾಗಿ ಇರಿಸಿ.
2) ಈಗ ನಿಮ್ಮ ಬಲ ಪಾದವನ್ನು 90 ಡಿಗ್ರಿಗಳಲ್ಲಿ ಇರಿಸಿ ಮತ್ತು ನಿಮ್ಮ ಎಡ ಪಾದವನ್ನು 15 ಡಿಗ್ರಿಗಳಲ್ಲಿ ಇರಿಸಿ. ನಿಮ್ಮ ತೋಳುಗಳನ್ನು ಎರಡೂ ಬದಿಗಳಲ್ಲಿ ಅಗಲವಾಗಿ ಇರಿಸಿ.
3) ನಿಮ್ಮ ತೂಕವನ್ನು ನಿಮ್ಮ ಎರಡೂ ಕಾಲುಗಳಿಗೆ ಸಮಾನವಾಗಿ ಇರಿಸಿ.
4) ಈಗ ಆಳವಾಗಿ ಉಸಿರಾಡಿ. ಉಸಿರಾಡುವಾಗ, ನಿಮ್ಮ ದೇಹವನ್ನು ಬಲಭಾಗಕ್ಕೆ ಮತ್ತು ಸೊಂಟದಿಂದ ಕೆಳಕ್ಕೆ ಬಗ್ಗಿಸಿ, ನಿಮ್ಮ ಬಲಗೈಯನ್ನು ಕೆಳಕ್ಕೆ ಮತ್ತು ಎಡಗೈಯನ್ನು ಮೇಲಕ್ಕೆ ತೆಗೆದುಕೊಳ್ಳಿ.
5) ನಿಮ್ಮ ಸೊಂಟವನ್ನು ನೇರವಾಗಿ ಇರಿಸಿ ಮತ್ತು ನಿಮ್ಮ ಕಣ್ಣುಗಳನ್ನು ತೆರೆದಿಡಿ.
6)ಈಗ ನಿಮ್ಮ ಬಲಗೈಯನ್ನು ನಿಮ್ಮ ಪಾದದ ಅಥವಾ ಕಾಲ್ಬೆರಳುಗಳ ಮೇಲೆ ಇರಿಸಿ, ನಿಮ್ಮ ಎಡಗೈಯನ್ನು ಚಾವಣಿಯ ಕಡೆಗೆ ಮೇಲಕ್ಕೆ ಇರಿಸಿ.
7) ನಿಮ್ಮ ದೇಹವನ್ನು ಹಿಗ್ಗಿಸಿ ಮತ್ತು ದೀರ್ಘವಾದ ಆಳವಾದ ಉಸಿರನ್ನು ತೆಗೆದುಕೊಳ್ಳಿ.
8) ಈ ಭಂಗಿಯಲ್ಲಿ 20-25 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ ಮತ್ತು ನೀವು ತ್ರಿಕೋನಾಸನವನ್ನು ಅಭ್ಯಾಸ ಮಾಡುವಾಗ ನಿಮ್ಮ ದೇಹಕ್ಕೆ ವಿಶ್ರಾಂತಿ ಕೊಡಿ.
9) ಆರಂಭಿಕ ಸ್ಥಾನಕ್ಕೆ ಹಿಂತಿರುಗಲು, ನೀವು ಉಸಿರು ತೆಗೆದುಕೊಂಡು ಮೇಲಕ್ಕೆ ಬನ್ನಿ ಮತ್ತು ನಿಮ್ಮ ತೋಳುಗಳನ್ನು ನಿಮ್ಮ ಬದಿಗಳಲ್ಲಿ ಕೆಳಕ್ಕೆ ತರಬೇಕು.
10) ನೀವು ಇದನ್ನು ಇನ್ನೊಂದು ಬದಿಯಲ್ಲಿ ಅಭ್ಯಾಸ ಮಾಡಿ.

ಪರಿವೃತ್ತ ತ್ರಿಕೋನಾಸನದ ಪ್ರಯೋಜನಗಳು:

1) ಹೊಟ್ಟೆಯ ಭಾಗದ ಅಂಗಗಳಿಗೆ ಉತ್ತಮವಾದ ಆಸನವಾಗಿದೆ.
2) ಬೆನ್ನು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
3) ಉಸಿರಾಟದ ಕ್ರಿಯೆಯು ಸರಾಗವಾಗುತ್ತದೆ.
4) ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
5) ಕಾಲುಗಳು ಬಲಿಷ್ಠವಾಗುತ್ತವೆ.

MORE NEWS

ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

12-05-2024 ಬೆಂಗಳೂರು

"ಕನ್ನಡಕ್ಕೆ ಒದಗಿದ ಪಾಗದ ಯಾವುದು ಎಂಬುದು ಅಸ್ಪಶ್ಟ. ಅಂದರೆ, ಉತ್ತರದಲ್ಲಿ ಹಲವು ಪ್ರಾಕ್ರುತಗಳು ಇದ್ದವು. ಇವುಗಳಲ...

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...