‘ಶೇಕ್ಸ್ ಪಿಯರ್ ಸಾಹಿತ್ಯ’ ಬೋಧಕರ ಬಗ್ಗೆ ಹೇಳಲಾರೆ: ಎಚ್.ಎಸ್. ಶಿವಪ್ರಕಾಶ 

Date: 12-06-2021

Location: ಅಂತರ್ಜಾಲ


‘ಶೇಕ್ಸ್ ಪಿಯರ್ ಸಾಹಿತ್ಯ ಕುರಿತು ಮಾತನಾಡಬಲ್ಲೆ. ಆದರೆ, ಶೇಕ್ಸ್ ಪಿಯರ್ ಸಾಹಿತ್ಯ ಕುರಿತು ಇಂದಿನ ಬೋಧಕರ ಬಗ್ಗೆ ಹೇಳಲಾರೆ’

ಹೀಗೆ ಹೇಳಿದವರು ಹಿರಿಯ ಕವಿ ಹಾಗೂ ಶೇಕ್ಸ್ ಪಿಯರ್‍ ಕುರಿತು ವರ್ಷಗಟ್ಟಲೆ ಬೋಧನೆ ಮಾಡಿದ್ದ ಸಾಹಿತಿ ಡಾ. ಎಚ್.ಎಸ್. ಶಿವಪ್ರಕಾಶ್.

ಸಂದರ್ಭ: ವಿಲಿಯಮ್ ಶೇಕ್ಸ್ ಪಿಯರನ ಜನ್ಮದಿನದ ಅಂಗವಾಗಿ ಧಾರವಾಡದ ‘ಧಾರವಾಡ ಕಟ್ಟೆ’ ಸಂಸ್ಥೆಯು ಶನಿವಾರ ಸಂಜೆ ‘ ಶೇಕ್ಸ್ ಪಿಯರ್ ಅವರ ಮ್ಯಾಕ್ ಬೆತ್’’ ನಾಟಕ ಕುರಿತು ಆಯೋಜಿಸಿದ್ದ ಅಂತರ್ಜಾಲದಲ್ಲಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಕೇಳುಗರ ಪ್ರಶ್ನೆಗಳಿಗೆ ಅವರ ಸ್ಪಂದನ.

ಬೋಧಕರ ಬಗ್ಗೆ ಹೇಳಲಾರೆ: ಆಂಗ್ಲ ಕವಿ, ನಾಟಕಕಾರ ಶೇಕ್ಸ್ ಪಿಯರ್ ಅವರ ಸಾಹಿತ್ಯವು ಇಂದಿನ ಬೋಧಕರಿಗೆ ಕಬ್ಬಿಣದ ಕಡೆಲೆಯಾಗಿದೆ. ಪಠ್ಯಪುಸ್ತಕ ಸಮಿತಿಯೂ ಸಹ ‘ಶೇಕ್ಸ್ ಪಿಯರ್ ಸಾಹಿತ್ಯ ಔಟ್ ಡೇಟೆಡ್’ ಎಂದು ಷರಾ ಬರೆದು ಅದನ್ನು ಪಠ್ಯದಲ್ಲೂ ಸೇರಿಸುತ್ತಿಲ್ಲ. ಇದು, ಶೇಕ್ಸ್ ಪಿಯರ್ ಸಾಹಿತ್ಯವನ್ನು ಬೋಧಿಸಲಾಗದ ದೌರ್ಬಲ್ಯವೇ? ಎಂಬುದು ಪ್ರೇಕ್ಷಕರ ಪ್ರಶ್ನೆಯಾಗಿತ್ತು.

ಅದಕ್ಕೆ ಪ್ರತಿಕ್ರಿಯಿಸಿದ ಕವಿ ಎಚ್.ಎಸ್. ಶಿವಪ್ರಕಾಶ್, ಶೇಕ್ಸ್ ಪಿಯರ್ ಸಾಹಿತ್ಯ ಮಾನವೀಯ ಅಂಶಗಳನ್ನು ಒಳಗೊಂಡಿದೆ. ಇಂತಹ ಸಾಹಿತ್ಯ ಹೊರತುಪಡಿಸಿ ಮತ್ತೇನನ್ನು ಕಲಿಸಬೇಕು? ಉನ್ನತ ಶಿಕ್ಷಣದ ಪಠ್ಯದಲ್ಲಿ ಶೇಕ್ಸ್ ಪಿಯರ್ ಸಾಹಿತ್ಯವನ್ನು ಸೇರಿಸುವುದು ಸಮಿತಿಯ ಹಕ್ಕುಗಳ ಬಗ್ಗೆಯೂ, ಶೇಕ್ಸ್ ಪಿಯರ್ ಸಾಹಿತ್ಯ ಬೋಧಕರ ಬಗ್ಗಯೂ ಮಾತನಾಡಲಾರೆ ಎಂದು ಇಂದಿನ ಶಿಕ್ಷಣದ ಗುಣಮಟ್ಟದ ಕುಸಿತವನ್ನು ಸೂಕ್ಷ್ಮವಾಗಿ ಸೂಚ್ಯವಾಗಿ ಹೇಳಿದರು.

ಮಾನವೀಯ ಅಂಶಗಳ ಉತ್ತಮ ಸಾಹಿತ್ಯ: ‘ಶೇಕ್ಸ್ ಪಿಯರ್ ಸಾಹಿತ್ಯವು ಮಾನವೀಯ ಅಂಶಗಳನ್ನು ಪ್ರತಿಪಾದಿಸುತ್ತದೆ. ಮನುಷ್ಯನ ಅಂತರಾಳವನ್ನು ಬಗೆಯುತ್ತದೆ. ಅಂತರ್ಗತ ಹಾಗೂ ಬಾಹ್ಯ ವರ್ತಗಳನ್ನು ಸ್ಪಷ್ಟಪಡಿಸುತ್ತದೆ. ಮನೋವೈಜ್ಞಾನಿಕ ಅಧ್ಯಯನಕ್ಕೆ ಸಾಕಷ್ಟು ಸಾಮಗ್ರಿ ಒದಗಿಸುತ್ತದೆ. ಹಿರಿಯ ತಲೆಮಾರಿನ ಅಂದರೆ ನಮಗೆ ಪಾಠ ಕಲಿಸುತ್ತಿದ್ದ ಮಾಸ್ತರರು ಶೇಕ್ಸ್ ಪಿಯರ್ ಸಾಹಿತ್ಯವನ್ನು ಸಂಭ್ರಮಿಸಿ ಹೇಳುತ್ತಿದ್ದರು. ಇದು ಉತ್ತಮ ಶಿಕ್ಷಣದ ಹಾಗೂ ಬೋಧಕರ ಲಕ್ಷಣವಲ್ಲವೆ? ಎಂದು .ಪ್ರಶ್ನಿಸಿದರು.

ಶೇಕ್ಸ್ ಪಿಯರ್ ಸಾಹಿತ್ಯದ ಓದು ಸುಲಭವಲ್ಲ: ಶೇಕ್ಸ್ ಪಿಯರ್ ಸಾಹಿತ್ಯದ ಓದು ಸುಲಭವಲ್ಲ. ಸಾಕಷ್ಟು ಶ್ರಮ ಬೇಕು. ಕಾನೂನು ಶಿಸ್ತು ಇಲ್ಲದ ಆ ಹೊತ್ತಿನಲ್ಲಿ ನಾಟಕ ರಚಿಸುವುದು, ಅದನ್ನು ಪ್ರದರ್ಶಿಸುವುದು ಸಣ್ಣ ಸಾಹಸವಲ್ಲ. ತಮ್ಮ ಅಣ್ಣನನ್ನು ಕೊಲೆ ಮಾಡುವ ಮತ್ತು ಸತ್ತವನ ಪತ್ನಿಯನ್ನು ಮದುವೆಯಾಗುವ ಇಂತಹ ಅಂಶಗಳನ್ನು ರಾಜಕೀಯ ಹಾಗೂ ಸಾಮಾಜಿಕ ದುರವಸ್ಥೆ ಹಿನ್ನೆಲೆಯಲ್ಲಿ ಗಮನಿಸಬೇಕು. ಅಂದಿನ ರಾಜಕೀಯ ಹಾಗೂ ಸಾಮಾಜಿಕ ದುರವಸ್ಥೆಯು ಹೇಗೆ ಕೌಟುಂಬಿಕ ಚೌಕಟ್ಟನ್ನೂ ಹಾಳುವ ಮಾಡುತ್ತಿತ್ತು ಎಂಬುದರ ಒಳನೋಟವಿದೆ ಎಂದು ಅಭಿಪ್ರಾಯಪಟ್ಟರು.

ರಾಜಕೀಯ ದುರಾಸೆಯ ಕಥೆ: ಶೇಕ್ಸ್ ಪಿಯರ್ ನ ಬಹುತೇಕ ನಾಟಕಗಳು ರಾಜಕೀಯ ಮಹತ್ವಾಕಾಂಕ್ಷೆಯ ದುರಾಸೆಯ ಕಥೆಗಳಾಗಿವೆ. ಹಿಂಸೆಗಳು ಹೆಚ್ಚಿವೆ. ಮಾನವೀಯ ಸೂಕ್ಷ್ಮತೆಗಳನ್ನು ನಾಟಕೀಕರಿಸುವ ಕಲೆಗಾರಿಕೆ ಕಾಣಬಹುದು. ಕೊಲೆ, ಹಿಂಸೆಯ ಚಿತ್ರಣಗಳ ಕಲೆಗಾರಿಕೆ ಇದೆ. ಹಾಸ್ಯಕ್ಕೆ ಆಸ್ಪದವಿಲ್ಲ ಎಂದು ಮ್ಯಾಕ್ ಬೆತ್ ನಾಟಕದ ವೈಶಿಷ್ಟ್ಯತೆಗಳನ್ನು ವಿವರಿಸಿದರು.

ಉಪನ್ಯಾಸ ಆರಂಭಕ್ಕೂ ಮುನ್ನ ಕವಿ ಡಾ. ಸಿದ್ಧಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ವಿಜಯಲಕ್ಷ್ಮಿ ನಿರೂಪಿಸಿದರು. ಪ್ರೊ. ಬಸವರಾಜ ಡೋಣೂರು, ಡಾ. ಸಿದ್ದು ಯಾಪಲಪರವಿ ಸೇರಿದಂತೆ ನೂರಕ್ಕೂ ಅಧಿಕ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...