'ಸಿದ್ಧ' ಚೌಕಟ್ಟಿನ ಹಂಗು ಮೀರಿದ ಬರಹಗಳು

Date: 28-02-2024

Location: ಬೆಂಗಳೂರು


"ಒಂದು ಪುಸ್ತಕವನ್ನು ಹೀಗೇ ಬರೆಯಬೇಕು ಎನ್ನುವ ಯಾವ ಹಂಗಿಗೂ ಒಳಪಡದ ಪುಸ್ತಕವಾದ್ದರಿಂದ ಈ ಪುಸ್ತಕದ ಕೊನೆಯ ಅಧ್ಯಾಯಮದಿಮ ಪ್ರಾರಂಭಿಸಿ ಮೊದಲ ಅಧ್ಯಾಯವನ್ನೂ ಓದಿಕೊಳ್ಳಬಹುದು, ಬೇಸರವೆನಿಸಿದಾಗ ಯಾವುದೋ ಮಧ್ಯದ ಒಂದು ಅಧ್ಯಾಯವನ್ನು ಓದಿ ಆಹಾ ಕಾಡು ಅದೆಷ್ಟು ಸುಂದರ ಎಂದು ಪುಳುಕಿತರಾಗಲೂ ಇಲ್ಲಿ ಅವಕಾಶವಿದೆ," ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ‘ಸಿರಿ ಕಡಲು’ ಅಂಕಣದಲ್ಲಿ ಸಿದ್ದರಾಜ್ ಕೆ ಎಸ್ ಅವರ ‘ದಿ ಪಿನಾಕಿ ಫ್ಯಾಂಟಮ್’ ಕೃತಿ ಕುರಿತು ಬರೆದ ಕೃತಿ ವಿಮರ್ಶೆ.

ಕಾಡಿನ ಕುರಿತಾಗಿ ತುಸು ಆಸಕ್ತಿ ಹೊಂದಿದವರಾಗಿದ್ದು ಜೀವಜಗತ್ತನ್ನು ಹಾಗೂ ಹುಲಿ ಮತ್ತು ಆನೆಯನ್ನು ಒಂದಿಷ್ಟು ಸನಿಹದಿಂದ ತಿಳಿದುಕೊಳ್ಳಬೇಕೆಂಬ ಆಸಕ್ತಿ ತಮ್ಮಲ್ಲಿದ್ದರೆ ಓದಲೇ ಬೇಕಾದ ಪುಸ್ತಕವೊಂದನ್ನು ಮೂಲತಃ ಪತ್ರಕರ್ತರಾದ ಸಿದ್ದರಾಜ್ ಕೆ ಎಸ್ ದಿ ಪಿನಾಕಿ ಫ್ಯಾಂಟಮ್ ಎಂಬ ಹೆಸರಿನಲ್ಲಿ ನಮ್ಮ ಕೈಗಿಟ್ಟಿದ್ದಾರೆ. ಸಿದ್ಧ ಮಾದರಿಯ, ಒಂದೇ ಅಚ್ಚಿನಲ್ಲಿ ಎರಕ ಹೊಯ್ದಂತಿರುವ ಪುಸ್ತಕಗಳ ಭರಾಟೆಯಲ್ಲಿ ಮನಸ್ಸು ಮುದುಡಿ ಹೋಗಿದ್ದರೆ ಪುಸ್ತಕ ಬರವಣಿಗೆಯ ಈ ವರೆಗಿನ ಯಾವ ಚೌಕಟ್ಟಿನ ಹಂಗಿಗೂ ಒಳಪಡದ ಆದರೆ ಕಾಡಿನ ಕುರಿತು ಅಪಾರ ಜ್ಞಾನ ಹೊಂದಿರುವ ಒಬ್ಬ ಅನುಭವಸ್ಥ ನಮ್ಮ ಪಕ್ಕದಲ್ಲಿ ಕುಳಿತು ಕಾಡಿನ ಕುರಿತು ಹೇಳುತ್ತಿರುವ ಕತೆಯೊಂದನ್ನು ಕೇಳಿಸಿಕೊಳ್ಳುತ್ತಿದ್ದೇವೆ ಎಂಬ ಆತ್ಮೀಯ ಭಾವ ಹುಟ್ಟಿಸುವ ಪುಸ್ತಕ ಇದು. ಕಾಡು ನನ್ನ ಪ್ರಥಮ ಆಧ್ಯತೆಯಾದ ಕಾರಣ ಹಾಗೂ ರಾಜಧಾನಿಯ ನನ್ನ ಸ್ನೇಹಿತರುಗಳಿಂದ ಕಾಡುಪ್ರಾಣಿ, ಸ್ವಲ್ಪ ಮಂದ ಎಂದೆಲ್ಲ ಕಿಚಾಯಿಸಿಕೊಳ್ಳುತ್ತಲೇ ಕಾಡಿನ ನಡುವೆ ಇದ್ದರೂ ಮತ್ತೆ ಮತ್ತೆ ಕಾಡಿಗೆ ಹೋಗಲು ಬಯಸುವ ನನ್ನಂಥವಳಿಗೆ ಈ ಪುಸ್ತಕದ ಓದು ನಿಜಕ್ಕೂ ಕಾಡಿನಲ್ಲಿ ಹರಿಯುವ ತಣ್ಣನೆಯ ಝರಿಯೊಂದರಿಂದ ಹಾರುವ ತುಂತುರು ಹನಿಗೆ ಮುಖಕೊಟ್ಟು ನಿಂತಂತಹ ಭಾವ ಲೋಕವೊಂದನ್ನು ಸೃಷ್ಟಿಸಿಕೊಡುತ್ತದೆ.

ಒಂದು ಪುಸ್ತಕವನ್ನು ಹೀಗೇ ಬರೆಯಬೇಕು ಎನ್ನುವ ಯಾವ ಹಂಗಿಗೂ ಒಳಪಡದ ಪುಸ್ತಕವಾದ್ದರಿಂದ ಈ ಪುಸ್ತಕದ ಕೊನೆಯ ಅಧ್ಯಾಯಮದಿಮ ಪ್ರಾರಂಭಿಸಿ ಮೊದಲ ಅಧ್ಯಾಯವನ್ನೂ ಓದಿಕೊಳ್ಳಬಹುದು, ಬೇಸರವೆನಿಸಿದಾಗ ಯಾವುದೋ ಮಧ್ಯದ ಒಂದು ಅಧ್ಯಾಯವನ್ನು ಓದಿ ಆಹಾ ಕಾಡು ಅದೆಷ್ಟು ಸುಂದರ ಎಂದು ಪುಳುಕಿತರಾಗಲೂ ಇಲ್ಲಿ ಅವಕಾಶವಿದೆ.

ಈ ನಿರಾಶ್ರಿತರ ಪುನರ್ವಸತಿ ಕೆಂದ್ರವಾದ ಹಾರವಾಡದಲ್ಲಿ ಕೆಲಸ ಮಾಡುವಾಗ ಬೇಸಿಗೆಯ ರಜೆಯಲ್ಲಿ ಅಪ್ಪನ ಜೊತೆ ಹೊರಗೆ ಅಂಗಳದಲ್ಲಿ ಮಲಗಿದ್ದ ಮೂರನೆ ತರಗತಿಯ ಹುಡುಗನೊಬ್ಬನನ್ನು ಚಿgಚಿve ಕಚ್ಚಿ ಎಳೆದೊಯ್ಯಲು ಪ್ರಯತ್ನಿಸಿದ ಘಟನೆ ನಡೆದಿತ್ತು. ಆತನನ್ನು ಚಿರತೆಯ ಬಾಯಿಂದ ತಪ್ಪಿಸಿಕೊಂಡು ಮಗನನ್ನು ಬುಕಿಸಿಕೊಂಡ ತಂದೆ ಆಗ ಅಲ್ಲಿ ದೊಡ್ಡ ಹೀರೋ ಆಗಿದ್ದರು. ಆತ ಎಂಟನೆ ತರಗತಿಗೆ ಬಂದಾಗ ಚಿರತೆಯ ಜೊತೆ ಹೋರಾಡಿದ ಶೂರ ಎಂದು ನಾನು ತಮಾಷೆ ಮಾಡುತ್ತಿದ್ದೆ. ಐದು ವರ್ಷಗಳ ನಂತರವೂ ಚಿರತೆಯ ಹಲ್ಲಿನ ಗುರುತು ಆತನ ಕುತ್ತಿಗೆಯ ಮೇಲಿತ್ತು. ಇತ್ತೀಚೆಗೆ ಈಗ ಕೆಲಸ ಮಾಡುತ್ತಿರುವ ಸೀ ಬರ್ಡ ನಿರಾಶ್ರಿತರ ಪುನರ್ವಸತಿ ಕೇಂದ್ರದ ಸಮೀಪದ ದೇವಭಾಗ ಕಡಲ ತೀರದ ರೆಸಾರ್ಟ ಒಂದ ಸಿಸಿ ಕ್ಯಾಮರಾದಲ್ಲಿ
agave ಓಡಾಟ ಸೆರೆಯಾಗಿತ್ತು. ಒಂದಿಷ್ಟು agave, ಒಂದಿಷ್ಟು ಗುರ್ಕಾ ಎಂದು ಕರೆಯುವ ಚಿರತೆಯ ಜಾತಿಗೆ ಸೇರಿದ ಪ್ರಾಣಿಗಳಷ್ಟೇ ನಮ್ಮಲ್ಲಿ ಭಯ ಹುಟ್ಟಿಸುವಾಗ ಪುಟ್ಟ ಮಗುವನ್ನು ಕಚ್ಚಿ ಅರ್ಧ ಮುಖವನ್ನೇ ಹರಿದು ತಿಂದ ಘಟನೆಯ ಸುತ್ತಮತ್ತಲಿನ ಭೀಕರತೆಯ ಲೇಖನದೊಂದಿಗೆ ಪ್ರಾರಂಭವಾಗುವ ಈ ಪುಸ್ತಕ ಇಂತಹ ಹಲವಾರು ವಿಷಯಗಳನ್ನು ತೆರೆದಿಡುತ್ತ ಹೋಗುತ್ತದೆ.

ನಮ್ಮ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಸ್ಥಳ ಹಾಗೂ ಜೊಯ್ಡಾದ ನ್ಯಾಷನಲ್ ಪಾರ್ಕನ ವಿಸ್ತಾರವನ್ನು ಕಡಿಮೆ ಮಾಡಬೇಕೆಂಬ ಕೂಗು ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಕಬಿನಿ ಮತ್ತು ಅದರ ಸುತ್ತ ಮುತ್ತಲಿನ ಜನರ ಬದುಕು ಹೇಗಿದೆ ಎಂಬ ಸಮಗ್ರ ಚಿತ್ರಣವನ್ನು ಈ ಪುಸ್ತಕ ನೀಡುತ್ತದೆ. ನರಭಕ್ಷಕ ಹುಲಿಯ ಚಲನವಲನಗಳು, ಒಂದು ಬಲಿಯನ್ನು ಪಡೆದ ನಂತರ ಮತ್ತೆ ವಾರಗಟ್ಟಲೇ ಸುಮ್ಮನಿದ್ದು ಪುನಃ ಹೊಂಚು ಹಾಕಿ ಮನುಷ್ಯರನ್ನು ಬೇಟೆ ಆಡುವ ಹುಲಿಗಳ ಬುದ್ಧಿವಂತಿಕೆಯನ್ನು ಇಲ್ಲಿ ಇಂಚಿಂಚಾಗಿ ವಿವರಿಸಲಾಗಿದೆ. ಸಾಮಾನ್ಯವಾಗಿ ಒಮ್ಮೆ ಮನುಷ್ಯನ ರಕ್ತದ ರುಚಿ ನೋಇದ ಪ್ರಾಣಿಗಳಿಗೆ ಅದು ತುಂಬ ಇಷ್ಟವಾಗಿ ಮತ್ತೆ ಮತ್ತೆ ಮನುಷ್ಯನ ಮೇಲೆ ದಾಳಿ ಮಾಡುತ್ತದೆ ಎಂಬ ಮಾತು ಪ್ರಚಲಿತದಲ್ಲಿದೆ. ಇಂತಹ ನರಭಕ್ಷಕ ಹುಲಿಗಳನ್ನು ಸಾಯಿಸಿ ಬಿಡುವುದೇ ಅಚಿತಿಮ ಎಂದು ನಾಗರಿಕ ಸಮಾಜ ತೀರ್ಮಾನಿಸಿ ಬಿಡುತ್ತದೆ. ಆದರೆ ಅಂತಹ ನರಭಕ್ಷಕನನ್ನೂ ಜೀವಂತ ಹಿಡಿಯಲು ಮುಂದಾಗುವ ಹಲವಾರು ಅರಣ್ಯಾಧಿಕಾರಿಗಳ ಮಾಹಿತಿ ಇಲ್ಲಿ ಧ್ವನಿಪೂರ್ಣವಾಗಿದೆ.

ನಾನು ಬೆಳ್ತಂಗಡಿಯಲ್ಲಿ ಇರುವಾಗ ದೂರದ ಕುದುರೇಮುಖ ಅರಣ್ಯದ ಸಾಲುಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಇಲ್ಲಿನ ಹಳ್ಳಿಗಳು ಕೊರೆಯುವ ಚಳಿಯಿಂದ ನಡುಗುತ್ತಿದ್ದವು. ಬಹುಶಃ ವಾಯುಭಾರದ ಏರಿಳಿತ ಇದಕ್ಕೆ ಕಾರಣವಿರಬಹುದು. ಹಾಗೆ ಕಾಣಿಸಿಕೊಂಡ ಬೆಂಕಿ ಎರಡು ದಿನಗಳಲ್ಲಿ ಆರಿಹೋಗುತ್ತಿತ್ತಾದರೂ ಕೆಲವೊಮ್ಮೆ ವಾರಗಟ್ಟಲೆ ಉರಿದು ಭಯ ಹುಟ್ಟಿಸುವುದೂ ಇತ್ತು. ಅಂತಹ ಕಾಳ್ಗಿಚ್ಚಿನ ಸಂದರ್ಭದಲ್ಲಿ ಅರಣ್ಯ ಸಂರಕ್ಷಕ ಸಿಬ್ಬಂದಿಗಳು ಪಡುವ ಪಾಡನ್ನು ಇಲ್ಲಿ ಮನಮುಟ್ಟುವಂತೆ ವಿವರಿಸಲಾಗಿದೆ. ಹಾಗೆ ಕಾಳ್ಗಿಚ್ಚಿನಲ್ಲಿ ಸುಟ್ಟು ಹೋದ ಒಬ್ಬ ವಾಚರ್‌ನ ಹೃದಯವಿದ್ರವಾಕ ಕಥೆ ಮನಕಲಕುವಂತೆ ಮಾಡುತ್ತದೆ. ಐ ಎಫ್ ಎಸ್ ಅಧಿಕಾರಿ ಮಣಿಕಂಠನ್ ರವರನ್ನು ಸೀಳಿ ಹಾಕಿದ ಒಂಟಿ ಸಲಗದ ಭಯ ಹುಟ್ಟಿಸುವ ಕಥೆ ಓದುಗರ ಮೈ ಒಮ್ಮೆ ನಡುಗುವಂತೆ ಮಾಡುತ್ತದೆ.

ಈ ಸಂಕಲನದ ಬಹು ಮುಖ್ಯ ಭಾಗವನ್ನು ಅರ್ಜುನ ಆಕ್ರಮಿಸಿಕೊಂಡಿದ್ದಾನೆ. ಅರ್ಜುನ ಎಂದರೆ ಮೈಸೂರಿನ ದಸರಾ ಅಂಬಾರಿಯನ್ನು ಹೊರುವ ಆನೆ. ಲೇಖಕರು ಹೇಳುವಂತೆ ಅವರು ಯಾವುದೇ ಹೊಸ , ಮಹತ್ವದ ಕೆಲಸವನ್ನು ಆರಂಭಿಸುವ ಮುನ್ನ ಅರ್ಜುನ ಇದ್ದಲ್ಲಿ ಬಂದು ಅದಕ್ಕೆ ಅನ್ನ ಬೆಲ್ಲ ಬಾಳೆಹಣ್ಣು ಕೊಟ್ಟು ಅಪ್ಪಿ ಮುದ್ದಾಡಿ ಹೋಗುವ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ನಂಬಿಕೆ ಇದ್ದಲ್ಲಿ ದೇವರು ಇರುತ್ತಾನೆ ಎಂಬುದನ್ನು ಅರಿತುಕೊಂಡಿರುವ ಕೃತಿಕಾರರು ಅದು ಮೂಢನಂಬಿಕೆಯಲ್ಲ, ಮನದ ನಂಬಿಕೆ ಎಂದು ಹೇಳಿಕೊಂಡಿದ್ದಾರೆ. ಅರ್ಜುನನ ಕುರಿತು ತಮ್ಮ ಇಡೀ ಕುಟುಂಬ ಬೆಳೆಸಿಕೊಂಡಿರುವ ಅದಮ್ಯ ಪ್ರೀತಿಯ ಕುರಿತು ಮತ್ತೆ ಮತ್ತೆ ಬೇರೆ ಬೇರೆ ಹಲವಾರು ಲೇಖನಗಳಲ್ಲಿ ಪ್ರಸ್ತಾಪಿಸಿರುವ ಅವರಿಗೆ ಆ ಕುರಿತು ಹೆಮ್ಮೆಯಿದೆ. ಇದರ ಜೊತೆಗೆ ಇಡೀ ಪುಸ್ತಕ ಕಬನಿ ಹಾಗೂ ಸುತ್ತಮುತ್ತಲಿನ ಅರಣ್ಯಗಳ ಮಾಹಿತಿಯನ್ನು ನೀಡುವ ಪರಿಯೂ ವೈಶಿಷ್ಟ್ಯಪೂರ್ಣವಾಗಿದೆ. ಕರ್ನಾಟಕ ಹಾಗೂ ಉಳಿದ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಗಡಿಯ ನಿರ್ವಹಣೆಯನ್ನು ಹೆಮ್ಮೆಯಿಂದ ಹೇಳಿಕೊಂಡಿರುವ ರೀತಿ, ಅಂಬರೀಷ್ ಅವರನ್ನು ನೆನಪಿಸಿಕೊಂಡಿರುವ ಆಪ್ತ ಬರಹಗಳು ಮನಮುಟ್ಟುತ್ತವೆ. ಅದರಂತೆ ಕಾಡಿನ ಬುಡಕಟ್ಟು ಜನಾಂಗಗಳ ಕುರಿತಾಗಿಯೂ ಲೇಖಕರಲ್ಲಿ ಅದಮ್ಯ ಪ್ರೀತಿಯಿದೆ. ಹನುಮಂತಯ್ಯ ಎಂಬ ಹಳ್ಳಿಯವನಿಂದ ಕಾಡುಪ್ರಾಣಿಯ ಮೂತ್ರದ ವಾಸನೆಯನ್ನು ಗ್ರಹಿಸಿ ಅದು ಯಾವಾಗ ಆ ಸ್ಥಳಕ್ಕೆ ಬಂದಿತ್ತು ಎಂಬುದನ್ನು ಖಚಿತವಾಗಿ ಹೇಳುವ ಕೌಶಲ್ಯ ಅವರಿಗೆ ಸಿದ್ದಿಸಿದೆ. ಅರಣ್ಯ ಇಲಾಖೆಯ ಕೆಳಸ್ತರದ ಕೆಲಸಗಾರರ ಪ್ರೀತಿಯನ್ನು ತುಂಬು ಹೃದಯದಿಂದ ಶ್ಲಾಘಿಸಿದ್ದಾರೆ.

ಈ ಪುಸ್ತಕದ ಪ್ಲಸ್ ಪಾಯಿಂಟ್ ಎಂದರೆ ಇದು ಎಲ್ಲ ಪುಸ್ತಕಗಳಂತೆ ಸಿದ್ದ ಚೌಕಟ್ಟಿನ ಸಂಪ್ರದಾಯಿಕ ಮಾದರಿಯಲ್ಲಿ ಇಲ್ಲದೆ ಇರುವುದು. ಎಲ್ಲಿಯೂ ಸುಮ್ಮನೆ ವಿಷಯದ ಎಳೆದಾಟ ಮಾಡದೆ ಏನನ್ನು ಹೇಳಬೇಕು ಅಷ್ಟನ್ನು ನೇರವಾಗಿ ಹಾಗೂ ಸಂಕ್ಷಿಪ್ತವಾಗಿ ಹೇಳಿರುವುದು. ಇದರ ಜೊತೆ ಅಲ್ಲಲ್ಲಿ ಆಡು ಭಾಷೆ, ಅನುಕರಣಾವ್ಯಯಗನ್ನು ಬಳಸಿ ಆಪ್ತವಾಗಿಸಿರುವುದು. ಆದರೆ ಲೇಖಕರು ಒಬ್ಬ ಪತ್ರಿಕಾ ವಲಯದ ಮುಖ್ಯ ಹುದ್ದೆಯಲ್ಲಿರುವುದರಿಂದ ಭಾಷೆಯ ಕುರಿತಾಗಿ ಮತ್ತಿಷ್ಟು ಗಮನ ವಹಿಸಬಹುದಿತ್ತು ಎಂದು ಕೆಲವೆಡೆ ಅನಿಸುತ್ತದೆಯಾದರೂ ಪಕ್ಕದಲ್ಲಿ ಕುಳಿತು ಕಥೆ ಹೇಳುವಂತಿರುವ ಈ ಮಾದರಿಯೇ ಸರಿ ಇರಬಹುದು ಎಂದೂ ಮರುಕ್ಷಣ ಭಾಸವಾಗುತ್ತದೆ. ಕೆಲವು ಲೇಖನಗಳನ್ನು ಬಿಟ್ಟಿದ್ದರೆ ಇದೊಂದು ಅದ್ಭುತ ಪುಸ್ತಕವಾಗುತ್ತಿತ್ತು ಎಂದು ಎರಡು ಸಲ ಓದಿದಾಗಲೂ ನನಗನ್ನಿಸಿದೆ. ಆದರೆ ಎಲ್ಲಿಯೂ ಬೋರೆನಿಸದೇ ಸರಾಗವಾಗಿ ಓದಿಸಿಕೊಂಡು ಹೋಗುವುದರಲ್ಲಿ ಮತ್ತು ಅಂತಹ ಲಘು ಬರಹದಲ್ಲಿಯೇ ಕಾಡಿನ ಕುರಿತಾಗಿ ಹೇಳಬೇಕಾದ ಮಾಹಿತಿ ನಿರ್ದಿಷ್ಟವಾಗಿ ಹೇಳುವ ಕಾರಣಕ್ಕಾಗಿ ಇದು ಕಾಡನ್ನು ಪ್ರೀತಿಸುವ, ಮುಂದಿನ ಜನಾಂಗಕ್ಕಾಗಿ ಏನನ್ನಾದರೂ ಬಿಟ್ಟುಹೋಗಬೇಕು ಎಂಬ ತುಡಿತವಿರುವ ಪ್ರಜ್ಞಾವಂತ ನಾಗರಿಕರಿಗೆ ಮುಖ್ಯವೆನಿಸುತ್ತದೆ.

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...