ಸೃಜನಶೀಲರು ದಸರಾ ಕಥಾಸ್ಪರ್ಧೆ 2021 - ಕನ್ನಡದ ಕಥೆಗಾರರಿಗೊಂದು ಸುವರ್ಣ ಅವಕಾಶ 

Date: 13-09-2021

Location: ಸೃಜನಶೀಲರು - ಪೇಸ್ ಬುಕ್ ಪುಟ


ನಾಡಹಬ್ಬ ದಸರಾ ಪ್ರಯುಕ್ತ ಸೃಜನಶೀಲರು ಪೇಸ್ ಬುಕ್ ಪುಟವು ಕಥೆಗಾರರಿಗಾಗಿ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ. ಮೊದಲ ಬಾರಿಗೆ ಬಹುಮಾನವಾಗಿ ನಗದು ಹಣವನ್ನು ನೀಡಲಾಗುತ್ತಿದೆ. ಕನ್ನಡದ ಹೆಸರಾಂತ ಕತೆಗಾರರು ಸ್ಪರ್ಧೆಗೆ ಬಂದ ಕತೆಗಳನ್ನು ಓದಿ ತೀರ್ಪು ನೀಡಲಿದ್ದು, ಭಾರತದ ಯಾವುದೇ ರಾಜ್ಯದಲ್ಲಿರುವ ಕನ್ನಡಿಗರು ಕಥಾಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಕತೆಗಳನ್ನು ಸೆಪ್ಟೆಂಬರ್ 20, 2021ರ ಒಳಗೆ ಕಳುಹಿಸಲು ಅವಕಾಶವಿದ್ದು, ವಿಜಯದಶಮಿಯಂದು ವಿಜೇತರ ಹೆಸರುಗಳನ್ನು ಪ್ರಕಟಿಸಲಾಗುವುದು. ವಿಜೇತರಿಗೆ ಮುದ್ರಿತ ಪ್ರಮಾಣಪತ್ರ ಹಾಗೂ ನಗದು ಬಹುಮಾನ ದೊರೆಯಲಿದೆ.

ಪ್ರಥಮ ಬಹುಮಾನವಾಗಿ 5000 ರೂಪಾಯಿ, ದ್ವಿತೀಯ ಬಹುಮಾನ 3000 ರೂಪಾಯಿ, ತೃತೀಯ ಬಹುಮಾನ 2000 ರೂಪಾಯಿ ಮಾತ್ರವಲ್ಲದೆ ತಲಾ ಇಬ್ಬರಿಗೆ 1000 ರೂಪಾಯಿ ಬಹುಮಾನ ನೀಡಲಾಗುವುದು ಎಂದು ಸೃಜನಶೀಲರು ತಂಡ ಮಾಹಿತಿ ನೀಡಿದೆ.

ಕತೆಗಾರರಿಗಾಗಿ ಸೃಜನಶೀಲರು ತಂಡ ಅನೇಕ ನಿಬಂಧನೆಗಳನ್ನು ಹಾಕಿದ್ದು, ಕಡ್ಡಾಯವಾಗಿ ಸ್ವರಚಿತ , ಸ್ವತಂತ್ಯ್ರ ಕತೆಯಾಗಿರಬೇಕು, ಎಲ್ಲೂ ಪ್ರಕಟವಾಗಿರದ (ಪತ್ರಿಕೆ, ಮಾಸಿಕ, ಪುಸ್ತಕ ಹಾಗೂ ಪೇಸ್ ಬುಕ್) ಬೇರೆ ಯಾವ ಸ್ಫರ್ಧೆಯಲ್ಲೂ ಭಾಗವಹಿಸದ ಕತೆಯಾಗಿರಬೇಕು. ಕತೆಗಳು ಗರಿಷ್ಠ 2000 ಪದಗಳನ್ನು ಮೀರದಂತಿದ್ದು, ಕತೆಯನ್ನು srujanasheelaru@gmail.com ಎಂಬ ಇಮೇಲ್ ವಿಳಾಸಕ್ಕೆ ಕಳುಹಿಸಿ ಕೊಡಬೇಕು. ಕತೆಗೆ ಯಾವ ರೀತಿಯ ಥೀಮ್ ಇಲ್ಲವಾದರೂ, ಒಬ್ಬರಿಗೆ ಒಂದೇ ಕತೆಯನ್ನು ಕಳುಹಿಸಿಕೊಡಲು ಅವಕಾಶವಿದೆ. ತೀರ್ಪುಗಾರರ ನಿರ್ಣಯವೇ ಅಂತಿಮ ಎಂಬುದಾಗಿ ತಿಳಿಸಿದೆ.

ಕತೆಯ ಜೊತೆಯಲ್ಲಿ ನಿಮ್ಮ ಸ್ವವಿವರ (ಪೂರ್ಣ ಹೆಸರು, ಭಾವಚಿತ್ರ, ಅಂಚೆ ವಿಳಾಸ, ಮೊಬೈಲ್ ಸಂಖ್ಯೆಯನ್ನು)ಕಡ್ಡಾಯವಾಗಿ ನಮೂದಿಸತಕ್ಕದ್ದು. ಸ್ವವಿವರವಿಲ್ಲದ ಕತೆಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಂಡ ಪ್ರಕಟಣೆಯಲ್ಲಿ ತಿಳಿಸಿದೆ.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...