ಸುರಪುರದ ರಾಣಿ ಈಶ್ವರಮ್ಮ ವ್ಯಕ್ತಿತ್ವ,ಸಂಶೋಧನೆ ಅಗತ್ಯ: ಅಮರೇಶ ಯತಗಲ್

Date: 07-03-2021

Location: ಶಹಾಪುರ (ಜಿ: ಯಾದಗಿರಿ)


ಬ್ರಿಟಿಷರ ವಿರುದ್ಧ ಹೋರಾಡಿದ ಸುರಪುರದ ರಾಣಿ ಈಶ್ವರಮ್ಮನವರ ವ್ಯಕ್ತಿತ್ವ ಹಾಗೂ ಹೋರಾಟದ ಕುರಿತು ಇತಿಹಾಸದಲ್ಲಿ ಹೆಚ್ಚಿನ ವಿವರಗಳಿಲ್ಲ. ಈ ಬಗ್ಗೆ ಸಂಶೋಧನೆ ಅಗತ್ಯ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಶಾಸನ ವಿಭಾಗದ ಡಾ. ಅಮರೇಶ ಯತಗಲ್ ಹೇಳಿದರು.

ಭೀಮರಾಯನಗುಡಿಯ ಸುರಪುರ ಇತಿಹಾಸ ಸಂಶೋಧನಾ ಕೇಂದ್ರ ಹಾಗೂ ಸುರಪುರದ ಓಕುಳಿ ಪ್ರಕಾಶನ ಸಂಯುಕ್ತವಾಗಿ ನಗರದ ಲಕ್ಷ್ಮಿನಗರದಲ್ಲಿಯ ದಿ. ಚಂದ್ರಕಾಂತ ಕರದಳ್ಳಿ ಅವರ ಮನೆಯಲ್ಲಿ ಭಾನುವಾರ ಖ್ಯಾತ ನಾಟಕಕಾರ ಎಲ್.ಬಿ.ಕೆ. ಆಲ್ದಾಳ್ ಅವರ ‘ಸುರಪುರದ ವೀರವನಿತೆ ರಾಣಿ ಈಶ್ವರಮ್ಮ’ ನಾಟಕ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸುರಪುರದ ರಾಣಿ ಈಶ್ವರಮ್ಮ ಅವರ ಕುರಿತು ಮೆಡೋಸ್ ಟೇಲರ್ ಅವರು ತಮ್ಮ ಆತ್ಮಕತೆಯಲ್ಲಿ ಅತ್ಯಂತ ಕೆಟ್ಟದಾಗಿ ಬಿಂಬಿಸಿದ್ದಾರೆ. ರಾಣಿ ಈಶ್ವರಮ್ಮ ಅವರು ಮೆಡೋಸ್ ಟೇಲರನ್ನು ವಿರೋಧಿಸುತ್ತಿದ್ದಳು, ಬ್ರಿಟಿಷ್ ಸರ್ಕಾರದ ವಿರುದ್ಧವೇ ಹೋರಾಡಿದ್ದಳು. ಆದ್ದರಿಂದ, ಟೇಲರ್ ಅವರು ಈಶ್ವರಮ್ಮ ಅವರ ವ್ಯಕ್ತಿತ್ವವನ್ನು ಕೆಟ್ಟದ್ದಾಗಿ ಬಿಂಬಿಸಲು ಕಾರಣವಿರಬಹುದು. ಆದರೆ, ಈಶ್ವರಮ್ಮ ಸ್ವಾಭಿಮಾನಿ ರಾಣಿ. ಉತ್ತಮ ಆಡಳಿತಗಾರ್ತಿ. ಮೆಡೋಸ್ ಟೇಲರ್ ಹೀಗೆ ಬರೆದಿದ್ದಾರೆ ಎಂಬುದೇ ಅಂತಿಮವಲ್ಲ. ರಾಣಿ ಈಶ್ವರಮ್ಮ ಅವರ ಕುರಿತು ಸಂಶೋಧನೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಬ್ರಿಟಿಷರ ವಿರುದ್ಧ ದಿಟ್ಟವಾಗಿ ಹೋರಾಡಿದ ಸಂಸ್ಥಾನಗಳ ಪೈಕಿ ಸುರಪುರವೂ ಒಂದು. ರಾಣಿ ಈಶ್ವರಮ್ಮ ಅವರ ವ್ಯಕ್ತಿತ್ವವನ್ನು ಮರೆ ಮಾಚುವ ಕುತಂತ್ರ ಬ್ರಿಟಿಷ್ ಅಧಿಕಾರಿಗಳದ್ದಾಗಿರಲೂಬಹುದು. ಯಾವುದಕ್ಕೂ ಸಂಶೋಧನೆ ಅಗತ್ಯ ಎಂದು ಪ್ರತಿಪಾದಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಾಗೂ ಸುರಪುರ ಇತಿಹಾಸ ಸಂಶೋಧನಾ ಕೇಂದ್ರ ಮುಖ್ಯಸ್ಥರಾದ ಭಾಸ್ಕರರಾವ್ ಮುಡಬೂಳ ಮಾತನಾಡಿ ‘ಸ್ಥಳೀಯ ಇತಿಹಾಸವನ್ನು ಸಂಶೋಧಿಸಿ ಗೌರವಿಸಬೇಕು. ದೊಡ್ಡ ದೊಡ್ಡ ಸಂಸ್ಥಾನಗಳದ್ದೇ ಇತಿಹಾಸವಲ್ಲ. ಸುರಪುರದ ಐತಿಹಾಸಿಕ ಸಂಗತಿಗಳ ಮೇಲೆ ಸಂಶೋಧನೆ ಬೆಳಕು ಚೆಲ್ಲಬೇಕು ಎಂದು ಸಂಶೋಧಕರಿಗೆ ಸಲಹೆ ನೀಡಿದರು.

ಖ್ಯಾತ ನಾಟಕಕಾರ ಎಲ್ .ಬಿ.ಕೆ. ಆಲ್ದಾಳ್, ನಿಂಗನಗೌಡ ದೇಸಾಯಿ ಕೆಂಭಾವಿ, ಸಂಶೋಧಕ ಡಾ. ಎಂ.ಎಸ್. ಶಿರವಾಳ, ಕೃಷ್ಣ ಸುಬೇದಾರ ಸೇರಿದಂತೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...