ತಳ ಸಮುದಾಯದ ಸಮಸ್ಯೆಗಳು, ಅವರ ಜೀವನ ಮತ್ತು ಪರಿಸರವನ್ನು ಬಿಂಬಿಸುವ ಕೃತಿ ‘ಮೌನ ಮುರಿದಾಗ’ : ಬಾಬು ಭಂಡಾರಿಗಲ್

Date: 27-11-2022

Location: ರಾಯಚೂರು


ಕವಿ ನರಸಿಂಹಲು ವಡವಾಟಿ ಅವರು ತಳ ಸಮುದಾಯದ ಸಮಸ್ಯೆಗಳು ಅವರ ಜೀವನ ಮತ್ತು ಪರಿಸರವನ್ನು ಇಟ್ಟುಕೊಂಡು ಮೌನ ಮುರಿದಾಗ ಕವನ ಸಂಕಲನದಲ್ಲಿ ವ್ಯಕ್ತಪಡಿಸುವ ಮೂಲಕ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ ಎಂದು ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ಅವರು ಹೇಳಿದರು.

ರಾಯಚೂರು ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ನರಸಿಂಹಲು ವಡವಾಟಿ ಅವರ ರಚನೆಯ ಮೌನ ಮುರಿದಾಗ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಎಂ.ಬಿ ನರಸಿಂಹಲು ವಡವಾಟಿ ರಚಿಸಿರುವ ಮೌನ ಮುರಿದಾಗ ಕವನ ಸಂಕಲನವನ್ನು ಒಂದು ಅರ್ಥಪೂರ್ಣ ಕೆಳ ಸಮುದಾಯ ಅಸ್ಪೃಶ್ಯರ ಮತ್ತು ಅವರ ಸಮಸ್ಯೆಗಳನ್ನು ಇಟ್ಟುಕೊಂಡು ಜೀವನದ ಕುರಿತು ಕವನ ಸಂಕಲನದಲ್ಲಿ ಪ್ರಸ್ತುತಪಡಿಸಿದ್ದಾರೆ. ಯುವಕವಿ ನರಸಿಂಹಲು ಅವರ ಎರಡನೇ ಕವನ ಸಂಕಲನಕ್ಕೆ ವೀರ ಹನುಮಾನ್ ಅವರು ಮುನ್ನುಡಿ ಬರೆಯುವ ಮೂಲಕ ಯುವಕವಿ ಬೆಳೆಯಲು ಪ್ರೋತ್ಸಾಹಿಸಿದ್ದಾರೆ. ಡಾ. ದಸ್ತಿಗಿರಿ ಸಾಬ್ ದಿನ್ನಿ ಅವರು ಹಿನ್ನುಡಿ ಬರೆದು ಯುವಕವಿಗಳಿಗೆ ಬೆಳೆಯಲು ಸ್ಪೂರ್ತಿ ನೀಡಿದ್ದಾರೆ ಎಂದರು.

ಮೌನ ಮುರಿದಾಗ ಕವನ ಸಂಕಲನದಲ್ಲಿ ತಂದೆ, ತಾಯಿ, ಮಗು, ಮತದಾನ, ರಾಮ ಮಂದಿರ, ಅಂಬಾನಿ ಅದಾನಿ ಹೀಗೆ ದಿನನಿತ್ಯದ ಚಟವಟಿಕೆಗಳ ಕುರಿತು ಮನ ಮುಟ್ಟುವಂತೆ ವರ್ಣಿಸಿದ್ದಾರೆ ಎಂದು ತಿಳಿಸಿದರು, ಯುವಕವಿ ನರಸಿಂಹಲು ವಡವಾಟಿ ಅವರು ಅಂಬೇಡ್ಕರ್ ಅವರ ಜೀವನ ಚರಿತ್ರೆ ಆಳವಾಗಿ ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಂಬಣ್ಣ ಅಮರಚಿಂತ, ಶಾಂತರಸ ಹೆಂಬೆರಾಳ, ಡಾಕ್ಟರ್ ಸಿದ್ದಲಿಂಗಯ್ಯ ಅವರ ಕವನಗಳನ್ನು ಅಧ್ಯಯನ ಮಾಡಬೇಕೆಂದು ಹೇಳಿದರು.

ಮೌನ ಮುರಿದಾಗ ಕವನ ಸಂಕಲನವು ಉತ್ತಮವಾಗಿ ಮನಃಪೂರ್ವಕವಾಗಿ ರಚನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಸಂಕಲನಗಳನ್ನು ಹೊರ ತರಬೇಕು ಎಂದು ಶುಭ ಹಾರೈಸಿದರು. ಯುವ ಸಾಹಿತಿ ಕೋರೆನಲ್ ಅವರು ಪುಸ್ತಕ ಕುರಿತು ಮಾತನಾಡಿ ಕಾವ್ಯ ರಚನೆಯ ಒಂದು ಹೆರಿಗೆ ಇದ್ದಂತೆ, ಇಂದು ಕಾವ್ಯ ರಚನೆ ಮಾಡಲು ಕವಿ, ಹಲವು ವಿಚಾರ ಭಾವನೆ ಸಾಮಾನ್ಯ ಜನರ ಜೀವನ, ಕನಸುಗಳನ್ನು ಇಟ್ಟುಕೊಂಡು, ಕವನಗಳ ಮೂಲಕ ವ್ಯಕ್ತಪಡಿಸುತ್ತಾನೆ. ಯುವ ಕವಿ ನರಸಿಂಹಲು ಒಡವಾಟಿ ಅವರು ಮೌನ ಮುರಿದು ಕವನ ಸಂಕಲನವನ್ನು ಹೊರತಂದಿದ್ದಾರೆ ಎಂದರು.

ಯುವ ಕವಿಗಳು ಹೆಚ್ಚಾಗಿ ಸಾಹಿತ್ಯದ ಕಡೆಗೆ ಬರುತ್ತಿದ್ದು ಅವರುಗಳಿಗೆ ಇವರ ಕವನ ಸಂಕಲನ ಒಂದು ಮಾದರಿಯಾಗಲಿ, ಇನ್ನು ಹೆಚ್ಚಾಗಿ ಕವನಗಳನ್ನ ರಚನೆ ಮಾಡಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಗತರಾಜ್ ನಿಜಾಂಕಾರಿ, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತಾಯರಾಜ್ ಮರ್ಚೆಟಾಳ್, ಕನ್ನಡ ಕ್ರಿಯ ಸಮಿತಿ ಅಧ್ಯಕ್ಷ ಬಶೀರ್ ಅಹ್ಮದ್ , ಯುವ ಸಾಹಿತಿಗಳಾದ ಈರಣ್ಣ ಬೆಂಗಾಲಿ, ಯಲ್ಲಪ್ಪ ಎಮ್ ಮರ್ಚೇಡ್, ಕೃತಿಕಾರ ನರಸಿಂಹಲು ಒಡವಾಟಿ ಸೇರಿದಂತೆ ನಗರದ ಹಿರಿಯ ಕಿರಿಯ ಸಾಹಿತಿಗಳೆಲ್ಲರೂ ಭಾಗವಹಿಸಿದ್ದರು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...