ವೈಜ್ಞಾನಿಕ ಚೌಕಟ್ಟಿನ 'ಕರಿಡಬ್ಬಿ'


ಕೊರೋನಾ ಮತ್ತು ಕೊರೋನಾದ ಸುತ್ತ ಇರುವ ವಿಷಯಗಳ ಅಗಾಧವಾದ ವಿವರಗಳು ಮತ್ತು ಮಾಹಿತಿಗಳ ಸಂಗ್ರಹ ಈ ಕೃತಿಯಲ್ಲಿದೆ. ಇಷ್ಟನ್ನೂ ಸಂಗ್ರಹಿಸುವ, ಅಧ್ಯಯನಕ್ಕೊಳಪಡಿಸುವ ಮತ್ತು ಅದನ್ನು ಚಿಂತಿಸಿ ಕ್ರೋಢೀಕರಿಸಿ ವ್ಯವಸ್ಥಿತವಾಗಿ ಸಂಘಟಿಸಿ ನಿರೂಪಿಸುವ ಕ್ರಮದಿಂದಾಗಿ ಕೃತಿಯು ಮಹತ್ವವನ್ನು ಪಡೆದಿದೆ ಎನ್ನುತ್ತಾರೆ ಲೇಖಕ ಅರವಿಂದ ಚೊಕ್ಕಾಡಿ. ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ 'ಕರಿ ಡಬ್ಬಿ' ಕೃತಿಯ ಕುರಿತ ಟಿಪ್ಪಣಿ ನಿಮ್ಮ ಓದಿಗಾಗಿ..

ರಾಜಾರಾಮ್ ತಲ್ಲೂರು ಅವರ 'ಕರಿ ಡಬ್ಬಿ' ಕೊರೋನಾ ಕಾಲವನ್ನು ಇಡಿಯಾಗಿ ವೈಜ್ಞಾನಿಕ ವಿನ್ಯಾಸದಲ್ಲಿ ಹಿಡಿದಿಡುವ ಕೃತಿಯಾಗಿದೆ.‌ ಈ ಕೃತಿಯಲ್ಲಿರುವ ಮಹತ್ವ ಪೂರ್ಣವಾದ ಎರಡು ಸಂಗತಿಗಳು ಸಾಹಿತ್ಯಕ ಪ್ರಾಮುಖ್ಯತೆಯನ್ನು ಪಡೆದಿವೆ. ಮೊದಲನೆಯದು ಇದರ ಸಮಗ್ರತೆ. ಸಾಮಾನ್ಯವಾಗಿ ಕೊರೋನಾ ಸಂಬಂಧಿ ಕೃತಿ ಎಂದರೆ ಆರೋಗ್ಯ ವಿಜ್ಞಾನದ ಕೃತಿಯಾಗಿ ಕಾಣಿಸುತ್ತದೆ. ಅಥವಾ ಕೊರೋನಾದ ಪರಿಣಾಮಗಳು ಎಂದಾಗ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಪರಿಣಾಮಗಳೆಂದು ಪ್ರತ್ಯೇಕವಾಗಿಯೇ ವಿಮರ್ಶಿಸಲ್ಪಡುತ್ತದೆ. ಆದರೆ ವಾಸ್ತವದಲ್ಲಿ ಯಾವುದೂ ಪ್ರತ್ಯೇಕವಾಗಿರುವುದಿಲ್ಲ.‌ ಪ್ರತಿಯೊಂದು ವಿಚಾರವೂ ಆರೋಗ್ಯ, ಮನೋವೈಜ್ಞಾನಿಕ, ರಾಜಕೀಯಾತ್ಮಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಮತ್ತಿತರೇ ಸಮಗ್ರವಾದ ರೂಪವನ್ನೆ ಹೊಂದಿದ್ದು ರಕ್ತ, ಮಾಂಸ, ಚರ್ಮಗಳ ಹಾಗೆ ಬೆಸೆದಿರುತ್ತವೆ. ಒಂದು ನೈಜ ಚಿತ್ರಣ ಎಂದು ಸಿಗಬೇಕಾದರೆ, ಯಾವುದೆ ಸಂಗತಿಯನ್ನು ಇಡಿಯಾಗಿಯೇ ನೋಡಬೇಕು. 'ಕರಿಡಬ್ಬಿ' ಕೊರೋನಾದ ಸಂಗತಿಯನ್ನು ಅದರ ಎಲ್ಲ ಆಯಾಮಗಳಲ್ಲಿ ಸಮಗ್ರವಾಗಿಯೇ ನೋಡುತ್ತದೆ ಎನ್ನುವುದು ಕೃತಿಯ ಮಹತ್ವವಾಗಿದೆ.

ಎರಡನೆಯದಾಗಿ, ಟೀಕಿಸುವವನಿಗೆ ಪರಿಹಾರದ ಸಾಧ್ಯತೆಗಳನ್ನು ಸೂಚಿಸುವ ಜವಾಬ್ದಾರಿ ಇರಬೇಕೆಂಬುದು ನನ್ನ ನಂಬಿಕೆ. ಹಾಗೆ ಸೂಚಿಸಿದ ಪರಿಹಾರಗಳು ಸರಿಯಲ್ಲದೆ ಇರಬಹುದು. ಆದರೆ ಪರಿಹಾರದ ಸಾಧ್ಯತೆಗಳನ್ನಂತೂ ಸೂಚಿಸಬೇಕು. ಏಕೆಂದರೆ, ಪರಿಹಾರವನ್ನು ಸೂಚಿಸಬೇಕಾದರೆ ಸಮಸ್ಯೆಯನ್ನು ಬಹುಮುಖಿಯಾಗಿ ಚಿಂತಿಸಬೇಕಾಗುತ್ತದೆ. ತಾನು ಹೇಳುವ ವಿಷಯದ ಕುರಿತ ಜ್ಞಾನ ಪಡೆಯಬೇಕಾಗುತ್ತದೆ. 'ಕರಿ ಡಬ್ಬಿ'ಯ ಬರೆಹಗಳು ಈ ವಿನ್ಯಾಸವನ್ನು ಹೊಂದಿದ್ದು ಚಿಂತನಶೀಲ ಗುಣವನ್ನು‌ ಪಡೆದಿದೆ.

ಕೊರೋನಾ ಮತ್ತು ಕೊರೋನಾದ ಸುತ್ತ ಇರುವ ವಿಷಯಗಳ ಅಗಾಧವಾದ ವಿವರಗಳು ಮತ್ತು ಮಾಹಿತಿಗಳ ಸಂಗ್ರಹ ಈ ಕೃತಿಯಲ್ಲಿದೆ. ಇಷ್ಟನ್ನೂ ಸಂಗ್ರಹಿಸುವ, ಅಧ್ಯಯನಕ್ಕೊಳಪಡಿಸುವ ಮತ್ತು ಅದನ್ನು ಚಿಂತಿಸಿ ಕ್ರೋಢೀಕರಿಸಿ ವ್ಯವಸ್ಥಿತವಾಗಿ ಸಂಘಟಿಸಿ ನಿರೂಪಿಸುವ ಕ್ರಮದಿಂದಾಗಿ ಕೃತಿಯು ಮಹತ್ವವನ್ನು ಪಡೆದಿದೆ.

'ಕರಿ ಡಬ್ಬಿ' ವೈಜ್ಞಾನಿಕ ಚೌಕಟ್ಟಿನ ಒಳಗೆಯೇ ಬರೆಯಲ್ಪಟ್ಟಿದ್ದು ಆ ಚೌಕಟ್ಟಿನ ಒಳಗೆ ಸ್ಪಷ್ಟತೆಯನ್ನು ಹೊಂದಿದೆ. ವೈಜ್ಞಾನಿಕ ಎಂದರೇನೆ ತನ್ನ ನಿಲುವನ್ನು ಬದಲುಸಿಕೊಳ್ಳಲು ಸಿದ್ಧವಿರುವ ಪ್ರಾಮಾಣಿಕತೆಯಾಗಿದೆ. ತನ್ನದೇ ಅಂತಿಮ ಎನ್ನುವುದು ಮತಧರ್ಮಗಳ ಧೋರಣೆ. ತನ್ನ ಧೋರಣೆಯನ್ನು ಸಾಕ್ಷಿ, ಪ್ರಯೋಗ, ಅನುಭವಗಳ ಆಧಾರದಲ್ಲಿ ನಿರಾಕರಿಸಿದಾಗ ನಿರಾಕರಣೆಯನ್ನು ಸ್ವೀಕರಿಸುವ ಮಾನಸಿಕ ಸಿದ್ಧತೆಯೇ ವೈಜ್ಞಾನಿಕ ಮನೋಧರ್ಮ.‌ ಆ ಮನೋಧರ್ಮದ ಚೌಕಟ್ಟಿನಲ್ಲೆ ಕೃತಿಯು ಇರುವುದರಿಂದ ಕೃತಿಯು ಹೇಳುವ ಸತ್ಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಅರವಿಂದ ಚೊಕ್ಕಾಡಿ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ..

MORE FEATURES

ಮೆಲುಕು ಹಾಕಿದಷ್ಟೂ ಹೊಸ ರುಚಿ`ಬಿಂಗ...

01-07-2022 ಬೆಂಗಳೂರು.

ವರ್ಷಗಳ ಹಿಂದೆ ಬರೆದ ಈ ಕೃಷಿಕಥನಗಳು ಬೇಗನೆ ಸುವಾಸನೆ ಕಳೆದುಕೊಳ್ಳುವಂಥದ್ದೇ ಅಲ್ಲ. ಮತ್ತು ಫಿಲಿಪ್ಪೈನ್ಸಿಗೆ ಹೋಗಿರುವಾಗ...

ಪ್ರೀತಿ ಪ್ರಣಯ ಪುಕಾರು ಸುತ್ತಲೂ ಹೆ...

01-07-2022 ಬೆಂಗಳೂರು

ಲೇಖಕಿ ವೈಶಾಲಿ ಹೆಗಡೆ ಅವರು ಬರೆದಿರುವ ಪ್ರೀತಿ ಪ್ರಣಯ ಪುಕಾರು ಸಣ್ಣ ಕತೆಗಳ ಸಂಕಲದ ಬಗ್ಗೆ ಲೇಖಕಿ ಸಂಗೀತಾ ಚಚಡಿ ಅವರು ಬ...

ನನ್ನ ಕೆಲವು ಸ್ತ್ರೀ ಪಾತ್ರಗಳು : ಸ...

30-06-2022 ಬೆಂಗಳೂರು

"ನನ್ನ ಸ್ತ್ರೀಪಾತ್ರಗಳು ಸಮಾಜವನ್ನು ಪ್ರಶ್ನಿಸಬೇಕು; ಅರ್ಥವಿಲ್ಲದ ನಿಯಮಗಳನ್ನು ತಲೆ ತಗ್ಗಿಸಿ ಒಪ್ಪಿಕೊಳ್ಳದೆ ಅವು...