ಕೋವಿಡ್ ಕರಿಡಬ್ಬಿ

Author : ರಾಜಾರಾಂ ತಲ್ಲೂರು

Pages 496

₹ 600.00




Year of Publication: 2022
Published by: ಸಂಕಥನ
Address: #72 , ಭೂಮಿಗೀತ, 6 ನೇ ತಿರುವು, ಉದಯಗಿರಿ, ಮಂಡ್ಯ – 571401
Phone: 9019529494

Synopsys

‘ಕೋವಿಡ್ ಕರಿಡಬ್ಬಿ’ ರಾಜಾರಾಂ ತಲ್ಲೂರು ಅವರ ಲೇಖನ ಸಂಕಲನ. ಕೋವಿಡ್ ಕಾಲದಲ್ಲಿ ನಡೆದ ದುರ್ಘಟನೆಗಳು ಹಾಗೂ ಆ ಎರಡು ವರ್ಷಗಳನ್ನು ನಾವು ಒಂದು ಸಮಾಜವಾಗಿ ಹೇಗೆ ನಿಭಾಯಿಸಿದೆವು ಎನ್ನುವುದರ ಕುರಿತ ಲೇಖನಗಳು ಇಲ್ಲಿ ಸಂಕಲನಗೊಂಡಿವೆ. ಕೃತಿ ರಚನೆಯ ಹಿನ್ನೆಲೆಯನ್ನು ವಿವರಿಸುತ್ತಾ ಕಣ್ಣೆದುರೇ ‘ನಮ್ಮ ಅಳತೆಗೆ ಮೀರಿದ್ದೇನೋ ನಡೆಯತೊಡಗಿದೆ ಎಂದು ಅನ್ನಿಸತೊಡಗಿದಾಗ, ವೃತ್ತಿ ತೊರೆದ ಪತ್ರಕರ್ತನಾಗಿ ನಾನು ಮಾಡತೊಡಗಿದ ಮೊದಲ ಕೆಲಸ ಎಂದರೆ. ಪ್ರತಿದಿನದ ಕೋವಿಡ್ ಮಾಹಿತಿಗಳನ್ನು ಕಲೆಹಾಕತೊಡಗಿದ್ದು, ನಾನು ಓದಿ ಸಂಗ್ರಹಿಸಿದ್ದು, ಗೆಳೆಯರು ಒದಗಿಸಿದ್ದು ಸೇರಿದಂತೆ ಸುಮಾರು ಮೂರು ಸಾವಿರಕ್ಕೂ ಮಿಕ್ಕಿ ಕೋವಿಡ್ ಸಂಬಂಧಿ ದಾಖಲೆಗಳು. ಈ ಎರಡು ವರ್ಷಗಳಲ್ಲಿ ನನ್ನ ಬಳಿ ಸಂಗ್ರಹವಾಗಿದೆ. ಹೀಗೆ ರಾಶಿ ಹಾಕಿಕೊಳ್ಳುವುದು ನನಗೆ ಚಟ ಆದ ಕಾರಣ, ಅದರಲ್ಲಿ ನನಗೂ ವಿಶೇಷವೇನೂ ಅನ್ನಿಸಿರಲಿಲ್ಲ. ಹೇಳಲೇಬೇಕೆಂಬ ಬಾಯಿ ತುರಿಕೆ ಬಂದಾಗಲೆಲ್ಲಾ ನಾನೇನು ಹೇಳಬೇಕೋ ಅದನ್ನು, ನನ್ನ ಬರವಣಿಗೆ ಕಲಿಯುವ, ಮಸೆದುಕೊಳ್ಳುವ ಜಾಗ ಎಂದು ನಾನು ಪರಿಗಣಿಸಿಕೊಂಡಿರುವ ಸೋಷಿಯಲ್ ಮೀಡಿಯಾದ ಗೋಡೆಗಳಲ್ಲಿ ಬರೆದು ಅಂಟಿಸುತ್ತಾ ಬರುತ್ತಿದ್ದೆ. ಇದೂ ಹೊಸದೇನಲ್ಲ. ಕಳೆದ ಹನ್ನೆರಡು ವರ್ಷಗಳಿಂದ ಇದನ್ನು ಮಾಡುತ್ತಿದ್ದೇನೆ. ಇದೆಲ್ಲ ಹಿಸ್ಟರಿಯೋಗ್ರಾಫಿಕ್ ಬರಹಗಳಾಗಿ ಒಂದು ಪುಸ್ತಕ ರೂಪದಲ್ಲಿ ಬಂದೀತೆಂಬ ಯೋಚನೆಯೂ ಇರಲಿಲ್ಲ. ಏಕೆಂದರೆ ನಾನು ಕಳೆದೆರಡು ವರ್ಷಗಳಿಂದ ವೈದ್ಯವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕವೊಂದರ ತಯಾರಿಯಲ್ಲಿ ವ್ಯಸ್ತನಾಗಿದ್ದೆ. ಈ ಕೋವಿಡ್ ಕುರಿತ ಪುಸ್ತಕ ರೂಪುಗೊಳ್ಳುವುದಕ್ಕೆ ಕಾರಣರೆಂದು ನಾನು ಇಲ್ಲಿ ಹೆಸರಿಸಲೇಬೇಕಾದ ಇಬ್ಬರೆಂದರೆ. ಒಬ್ಬರು ಚಿತ್ರನಿರ್ದೇಶಕ ಗೆಳೆಯರಾದ ಕೇಸರಿ ಹರವೂ ಮತ್ತು ಇನ್ನೊಬ್ಬರು ವೈದ್ಯ ಗೆಳೆಯರಾದ ಡಾ. ಕಿರಣ್ ಆಚಾರ್ಯ ಎಂದಿದ್ದಾರೆ ಲೇಖಕ ರಾಜಾರಾಂ ತಲ್ಲೂರು.

ಹಾಗೇ ರೈತ ಚಳುವಳಿಯ ಚಿತ್ರನಿರ್ಮಾಣದಲ್ಲಿ ನಿರತರಾಗಿದ್ದ ಕೇಸರಿ ಅವರು ಅದಕ್ಕೆ ಸಂಬಂಧಿಸಿದ ಯಾವುದನ್ನೋ ಚರ್ಚಿಸುತ್ತಿದ್ದಾಗ, ನಾನು ಕೋವಿಡ್ ಕುರಿತು ದಾಖಲೆಗಳನ್ನು ಸಂಗ್ರಹಿಸಿರವುದನ್ನು ಕೇಳಿ, ಯಾಕೆ ಅದನ್ನು ಒಂದು ಪುಸ್ತಕ ರೂಪದಲ್ಲಿ ತರಬಾರದೆಂದು ಹೇಳಿದ್ದು ಬಹಳ ಹಿಂದೆಯೇ, ನನಗೆ ಖಚಿತವಿಲ್ಲದಿದ್ದುದರಿಂದ ಬರೇ “ಹುಂ” ಎಂದು ಹೇಳಿ ಸುಮ್ಮನಿದ್ದೆ. ಇತ್ತ ಗೆಳೆಯರಾದ ಡಾ. ಕಿರಣ್ ಆಚಾರ್ಯ, ನನ್ನ ಬರಹಗಳನ್ನ ಯಾಕೆ ಪುಸ್ತಕ ರೂಪದಲ್ಲಿ ದಾಖಲಿಸಬಾರದು ಎಂದು ಕೇಳಿದ್ದಲ್ಲದೇ, ನಾನು ದಾಖಲೆಗಳನ್ನು ಸಂಗ್ರಹಿಸುತ್ತಿರುವುದು ಅವರ ಗಮನಕ್ಕೆ ಬಂದ ಮೇಲೆ ಅವರ ಗಮನಕ್ಕೆ ಬಂದ ಮೇಲೆ, ಅವರ ಗಮನಕ್ಕೆ ಬಂದ ಹಲವು ಸಂಗತಿಗಳನ್ನು ನನ್ನ ಜೊತೆ ಸತತವಾಗಿ ಹಂಚಿಕೊಂಡರು ಮತ್ತು ವೈದ್ಯರಾಗಿ ಹಲವು ಒಳನೋಟಗಳನ್ನು ಒದಗಿಸಿದರು ಎಂದು ತಿಳಿಸಿದ್ದಾರೆ ಲೇಖಕ ರಾಜಾರಾಂ ತಲ್ಲೂರು.

About the Author

ರಾಜಾರಾಂ ತಲ್ಲೂರು

ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಅಲ್ಲೇ ಪ್ರಾಥಮಿಕ ಶಿಕ್ಷಣ, ಸುರತ್ಕಲ್ಲಿನಲ್ಲಿ ಮಾಧ್ಯಮಿಕ ಮತ್ತು ಪದವಿ ಶಿಕ್ಷಣ ಪೂರ್ಣಗೊಳಿಸಿದ ಅವರು ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದ ಅವರು 2000 ಇಸವಿಯಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿ ಪ್ರಾರಂಭಿಸಿದಾಗ ಅದರ ಸುದ್ದಿ ಸಂಪಾದಕರಾಗಿ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸಿದರು. 2001ರಲ್ಲಿ ಉದಯವಾಣಿ ಆರೋಗ್ಯ ಪುರವಣಿಯಲ್ಲಿ ಆರಂಭಗೊಂಡಾಗ ಅದರ ಸಂಪಾದಕರಾಗಿ ಸೇವೆಸಲ್ಲಿಸಿದ ಅವರು 2017ರ ತನಕವೂ ಆರೋಗ್ಯವಾಣಿಯ ಸಂಪಾದಕೀಯ ಉಸ್ತುವಾರಿ ನೋಡಿಕೊಂಡರು. ಈ ...

READ MORE

Related Books