ವಕ್ರಾಸನ ಮತ್ತು ಸೇತುಬಂಧಾಸನ

Date: 22-09-2023

Location: ಬೆಂಗಳೂರು


'ವಕ್ರಾಸನದಲ್ಲಿ, 'ವಕ್ರ' ಎಂದರೆ 'ತಿರುಚಿದ' ಮತ್ತು ಆಸನ ಎಂದರೆ 'ಭಂಗಿ'. ವಕ್ರಾಸನವನ್ನು ಸ್ಪೈನಲ್ ಟ್ವಿಸ್ಟ್ ಸ್ಥಾನ ಎಂದೂ ಕರೆಯುತ್ತಾರೆ. ಈ ಯೋಗದ ಭಂಗಿಯು ಬೆನ್ನುಮೂಳೆಯ ಸ್ನಾಯುಗಳನ್ನು ತಿರುಗಿಸಲು ಕಾರಣವಾಗಿದೆ ಎನ್ನುತ್ತಾರೆ' ಯೋಗಪಟು ಚೈತ್ರಾ ಹಂಪಿನಕಟ್ಟಿ. ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ಈ ಬಾರಿ ವಕ್ರಾಸನ ಹಾಗೂ ಸೇತುಬಂಧಾಸನದ ಕುರಿತು ವಿವರಿಸಿದ್ದಾರೆ.

ವಕ್ರಾಸನದಲ್ಲಿ, 'ವಕ್ರ' ಎಂದರೆ 'ತಿರುಚಿದ' ಮತ್ತು ಆಸನ ಎಂದರೆ 'ಭಂಗಿ'. ವಕ್ರಾಸನವನ್ನು ಸ್ಪೈನಲ್ ಟ್ವಿಸ್ಟ್ ಸ್ಥಾನ ಎಂದೂ ಕರೆಯುತ್ತಾರೆ. ಈ ಯೋಗದ ಭಂಗಿಯು ಬೆನ್ನುಮೂಳೆಯ ಸ್ನಾಯುಗಳನ್ನು ತಿರುಗಿಸಲು ಕಾರಣವಾಗಿದೆ.

ವಕ್ರಾಸನ ಮಾಡುವ ವಿಧಾನ:

1) ಮೊದಲು ದಂಡಾಸನದಲ್ಲಿ( ಎರಡು ಕಾಲುಗಳು ಸಮಸ್ಥಿತಿಲ್ಲಿದ್ದು ಬೆನ್ನು ನೇರವಾಗಿ, ಎರಡು ಕೈ ತೊಡೆಯ ಅಕ್ಕಪಕ್ಕದಲ್ಲಿರಬೇಕು ಇದು ದಂಡಾಸನ)

ಕುಳಿತುಕೊಳ್ಳಿ.

2) ನಂತರ ನಿಮ್ಮ ಎಡಗಾಲು ನೇರವಾಗಿರಬೇಕು, ಬಲಗಾಲನ್ನು ಮಡಿಚಿ ಇಡಬೇಕು ಚಿತ್ರದಲ್ಲಿರುವಂತೆ

3) ನಂತರ ಎಡಗೈಯಿಂದ ಬಲಗಾಲಿನ ಹೆಬ್ಬರಳು ಹಿಡಿಯಿರಿ, ಬಲಗೈಯನ್ನು ಬೆನ್ನ ಹಿಂದಕ್ಕೆ ಹಿಡಿಯಿರಿ, ಕುತ್ತಿಗೆಯನ್ನು ಎಡಭಾಗಕ್ಕೆ ತಿರುಗಿಸಿ. ಈ ಭಂಗಿಯಲ್ಲಿ 10 ಸೆಕೆಂಡ್‌ ಇದ್ದು ದಂಡಾಸನಕ್ಕೆ ಬನ್ನಿ.

4) ಈಗ ಎಡಗಾಲನ್ನು ಮಡಚಿ ಬಲಗೈಯಿಂದ ಕಾಲಿನ ಹೆಬ್ಬರಳನ್ನು ಹಿಡಿಯಿರಿ, ಎಡಗೈ ಬೆನ್ನ ಹಿಂದೆ ಇರಲಿ, ಕುತ್ತಿಗೆ ಬಲಭಾಗದಲ್ಲಿ ಇರಲಿ.

ವಕ್ರಾಸನದ ಪ್ರಯೋಜನೆಗಳು:

1) ಬೆನ್ನು ಮೂಳೆಗಳು ಶಕ್ತಿಯತವಾಗುತ್ತವೆ.

2) ಬೆನ್ನಹಿಂದಿನ ಭಾಗದ ನಮ್ಯತೆ(ಒಗ್ಗುವ ಗುಣ)ಯನ್ನು ಹೆಚ್ಚಿಸುತ್ತದೆ.

3) ಜೀರ್ಣ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ.

4) ಭುಜಗಳನ್ನು ಶಕ್ತಿಯುಕ್ತವಾಗಿಸುತ್ತದೆ.

5) ಕತ್ತಿನ ಮಾಂಸಖಂಡಗಳಿಗೆ ವ್ಯಾಯಾಮ ದೊರೆಯುತ್ತದೆ.

ಸೇತುಬಂಧಾಸನ

ಸೇತುಬಂಧಾಸನ ಎಂಬ ಹೆಸರು ಸಂಸ್ಕೃತ ಭಾಷೆಯದ್ದಾಗಿದೆ. “ಸೇತು” ಎಂದರೆ ಸೇತುವೆ ಎಂದರ್ಥ. “ಬಂಧ” ಎಂದರೆ ಬೀಗ ಎಂದರ್ಥ ಹಾಗೂ “ಆಸನ” ಎಂದರೆ ಭಂಗಿ ಎಂದರ್ಥ.

ಮಾಡುವ ವಿಧಾನ:

1) ಶವಾಸನದಲ್ಲಿ ಬೆನ್ನಮೇಲೆ ಮಲಗಿ.

2) ಎರಡು ಮಂಡಿಗಳನ್ನು ಮಡಚಿ ಪಾದಗಳನ್ನು ಪ್ರಷ್ಠದ ಮುಂಭಾಗದಲ್ಲಿ ಇರಿಸಿ ಎರಡು ಕೈಗಳನ್ನು ಪ್ರಷ್ಠದ ಪಕ್ಕದಲ್ಲಿ ಇರಿಸಿ ಹಸ್ತ ಕೆಳಮುಖವಾಗಿ ಇರಲಿ.

3) ಆಳವಾಗಿ ಉಸಿರು ತೆಗೆದುಕೊಳ್ಳುತ್ತಾ (ಪೂರಕ) ನಿಧಾನವಾಗಿ ಸೊಂಟದ ಭಾಗವನ್ನು ಮೇಲೆತ್ತಿ. ಉಸಿರನ್ನು ಹೊರ ಹಾಕುತ್ತಾ (ರೇಚಕ) ಸೊಂಟದ ಭಾಗ ಕೆಳಕ್ಕೆ ತನ್ನಿ. ಇದೇ ರೀತಿ ಐದು ಬಾರಿ ಪುನರಾವರ್ತಿಸಿ.

4) ನಂತರ ಮತ್ತೆ ಆಳವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಸೊಂಟದ ಭಾಗವನ್ನು ಮೇಲೆತ್ತಿ. 30 ಸೆಕೆಂಡುಗಳ ಕಾಲ ಸರಳವಾಗಿ ಉಸಿರಾಟ ನಡೆಸಿ.

5) ನಂತರ ಉಸಿರನ್ನು ಹೊರಕ್ಕೆ ಹಾಕುತ್ತಾ (ರೇಚಕ) ಸೊಂಟದ ಭಾಗವನ್ನು ಕೆಳಗಡೆ ತಂದು ಕಾಲನ್ನು ನೇರ ಮಾಡಿ ಶವಾಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.

ಪ್ರಯೋಜನೆಗಳು

1) ರಕ್ತ ಪರಿಚಲನೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ.

2) ನರಮಂಡಲವನ್ನು ಶಾಂತಗೊಳಸಲು ಉತ್ತಮವಾದ ಆಸನವಾಗಿದೆ.

3) ಒತ್ತಡ ಮತ್ತು ಖಿನ್ನತೆ ನಿವಾರಿಸುತ್ತದೆ.

4) ಥೈರಾಯಿಡ್ ಮತ್ತು ಪ್ಯಾರಾಥೈರಾಯ್ಡ್ ಅನ್ನು ನಿಯಂತ್ರಿಸುತ್ತದೆ.

5) ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದವರಿಗೆ ಉತ್ತಮವಾದ ಆಸನವಾಗಿದೆ.

6) ಅಸ್ತಮಾ ನಿವಾರಿಸುತ್ತದೆ.

7) ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ. ದಣಿದ ಬೆನ್ನನ್ನು ತ್ವರಿತವಾಗಿ ನಿವಾರಿಸುತ್ತದೆ. ಎದೆ, ಕುತ್ತಿಗೆ ಮತ್ತು ಬೆನ್ನು ಹುರಿಗೆ ಉತ್ತಮ ವಿಸ್ತರಣೆಯನ್ನು ನೀಡುತ್ತದೆ.

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...