‘ಯುದ್ಧಕ್ಕೆ ಸಿದ್ಧನಾಗು ಸಾರಥಿ’ ಒಂದು ರೋಚಕ ಕಾದಂಬರಿ: ಪ್ರಸಾದ ಅಸೋಡು


"ಈ ಕಾದಂಬರಿಯ ಕತೆಯ ಎಳೆಯ ಬಗ್ಗೆ ಹೇಳಬೇಕು ಅಂದ್ರೆ ಪ್ರೀತಿ, ಪ್ರೇಮ, ದೇಶ, ಯುದ್ಧ, ದ್ವೇಷ, ಭಯೋತ್ಪಾದನೆ, ಆಡಳಿತ ಹೀಗೆ ಎಲ್ಲಾ ಕಡೆ ಹರಿಯುತ್ತೆ. ಹೊಂದಿಸಿ ಹೇಳೋದಾದ್ರೆ ನಿವೋದಿರುವ ಕತೆಯ ಗಾತ್ರ ಕರ್ನಾಟಕ, ಆದ್ರೆ ಇದ್ರದ್ದು ಭಾರತ. ಎಷ್ಟು ಚೆನ್ನಾಗಿ ಎಲ್ಲಾ ಕಡೆ ಹರವಿಕೊಳ್ಳಬೇಕೊ ಅಲ್ಲೆಲ್ಲ ಹರಿದು ಸಾಗುತ್ತೆ" ಎನ್ನುತ್ತಾರೆ ಪ್ರಸಾದ ಅಸೋಡು. ಅವರು ಲೇಖಕ ಗೌತಮ್ ಬೆಂಗಳೆ ಅವರ ‘ಯುದ್ಧಕ್ಕೆ ಸಿದ್ಧನಾಗು ಸಾರಥಿ’ ಕಾದಂಬರಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ಕೊನೆಗೂ ಈ ಕಾದಂಬರಿಯ ಬಗ್ಗೆ ಬರೆಯೋ ಸಮಯ ಬಂತು. ಒಂದ್ ಮಾತಲ್ಲಿ ಹೇಳ್ಬೇಕು ಅಂದ್ರೆ ನಾಲ್ಕೈದು ದಿನ ದಿನಕ್ಕೆ 2 ಗಂಟೆ ಲೆಕ್ಕ ಉಸಿರು ಕಟ್ಟಿಸಿಕೊಂಡು ಓದಿಸಿಕೊಂಡಿತ್ತು.

ಕೃತಿಯ ಬಗ್ಗೆ ಇದು ಒಂದು ರೋಚಕ ಕಾದಂಬರಿ. ಗಾತ್ರ ದೊಡ್ಡದು ಆದ್ರೂ ಗಾತ್ರ ದೊಡ್ಡದಾಗಿ ಅನಿಸದು. ಇನ್ನು ಈ ಕಾದಂಬರಿಯ ಕತೆಯ ಎಳೆಯ ಬಗ್ಗೆ ಹೇಳಬೇಕು ಅಂದ್ರೆ ಪ್ರೀತಿ, ಪ್ರೇಮ, ದೇಶ, ಯುದ್ಧ, ದ್ವೇಷ, ಭಯೋತ್ಪಾದನೆ, ಆಡಳಿತ ಹೀಗೆ ಎಲ್ಲಾ ಕಡೆ ಹರಿಯುತ್ತೆ. ಹೊಂದಿಸಿ ಹೇಳೋದಾದ್ರೆ ನಿವೋದಿರುವ ಕತೆಯ ಗಾತ್ರ ಕರ್ನಾಟಕ ಆದ್ರೆ, ಇದ್ರದ್ದು ಭಾರತ. ಎಷ್ಟು ಚೆನ್ನಾಗಿ ಎಲ್ಲಾ ಕಡೆ ಹರವಿಕೊಳ್ಳಬೇಕೊ ಅಲ್ಲೆಲ್ಲ ಹರಿದು ಸಾಗುತ್ತೆ. ಈ ಕಾದಂಬರಿಯ ಅಧ್ಯಾಯಗಳು ಹಿಂದೆ ಮುಂದೆ ಕಾಲಘಟ್ಟದಲ್ಲಿ ಸಾಗುತ್ತೆ. ಅದ್ರ ಜೊತೆ ಇನ್ನೊಂದು ವಿಶೇಷ ಅಂದ್ರೆ ನೀವು ಈ ಅಧ್ಯಾಯಗಳನ್ನ ಹಿಂದು ಮುಂದು ಓದಿದ್ರು ಒಂತರಾ ಮಜಾ ಕೊಡುತ್ತೆ. 30-35 ನಿಮಿಷದ ಎಪಿಸೋಡ್ ಗಳ ವೆಬ್ ಸೀರೀಸ್ ತೆಗಿಯೋದಾದ್ರೆ ಆರೇಳು ಎಪಿಸೋಡ್ ಗಳು ಖಂಡಿತ ಮಾಡಬಹುದು.

ಇನ್ನು ಬರಹ ಶೈಲಿ, ತಂತ್ರಗಾರಿಕೆ ಬಗ್ಗೆ. ಇಡೀ ಕಾದಂಬರಿ ಓದೋವಾಗ ಕೊಡುತ್ತಿದ್ದ ಹಿಮಾಲಯದ ವಿವರಣೆ ನನಗೆ ಕುವೆಂಪು ಅವರನ್ನ ನೆನಪಿಸುತಿತ್ತು. ಪ್ರೀತಿ ಪ್ರೇಮದ ಸಂದರ್ಭಗಳು ಬಂದಾಗ ಥೇಟ್ ಬೆಳಗೆರೆಯವರ ತರಹ ಅನುಭವ ಸಿಗೋದು. ಆ ವಿವರಣೆ, ಅಲಂಕಾರ, ಆಕಾಶದ ನಕ್ಷತ್ರ ಮತ್ತು ಬೆಟ್ಟ ಗುಡ್ಡಗಳಿಂದ ಪ್ರೀತಿಗೆ ಇಳಿಸೋದು ಪಕ್ಕಾ ಬೆಳಗೆರೆ ನೆನಪಾಗೋರು. ಇನ್ನು ರೋಚಕತೆ ಮತ್ತು ತಂತ್ರಗಾರಿಕೆ ವಿಷಯಕ್ಕೆ ಬಂದ್ರೆ ನಮ್ಮಲ್ಲೊಬ್ರು ಯಂಡಮೂರಿ ತರದೋರು ಸಿಗ್ತಾರೆ, ಕತೆ ಸಾಗಿಸೋದರ ಜೊತೆ ಮನೋವಿಜ್ಞಾನದ ಟಚ್ ಕೊಡೋದು. ನೀವು ಓದ್ತಾ ಓದ್ತಾ ಹೋದಂತೆ ಕತೆಯನ್ನ ಊಹಿಸೋಕೆ ಶುರು ಮಾಡ್ತೀರ. ಆದ್ರೆ ಸಂಪೂರ್ಣವಾಗಿ ನಿಮ್ಮ ಊಹೆಗೂ ಮೀರಿ ಆಶ್ಚರ್ಯ ಪಡಿಸುತ್ತೆ ಈ ಕಾದಂಬರಿ.

ನನ್ನನುಭವ ಕಾದಂಬರಿಯ ಆರಂಭದಲ್ಲಿ ಜೆಟ್ ಪಾಕಿಸ್ತಾನದಲ್ಲಿ ಬಿದ್ದಾಗ ಇನ್ನು ಇದೆ ಕತೆ ಅಂತ ಅಂದುಕೊಂಡಿದ್ದೆ. ಮುಂದೆ ಮುಂದೆ ಹೋಗ್ತಾ ಆಯ್ಯಬ್ಯ ಅನಿಸ್ತು. ಈ ತರಹ ಒಂದು ಸಂಪೂರ್ಣ ಅನ್ನೋ ಹಾಗೆ ಕತೆ ಹೇಣಿಬೇಕು ಅಂದ್ರೆ ಎಷ್ಟೊಂದು ತಾಳ್ಮೆ ಬೇಕು ಅನಿಸ್ತು. ಇನ್ನು ನೈಜವಾಗಿ ನಡೆದ ಘಟನೆಗಳು, ವ್ಯಕ್ತಿಗಳು, ವಿಷಯಗಳು ಹತ್ತಿರತ್ತಿರ ನೇರವಾಗಿ ಕಾದಂಬರಿಯ ಮುಖ್ಯ ಭೂಮಿಕೆಗೆ ಬರೋದು ಕಾದಂಬರಿಯ ಭಾರಾನ ತುಂಬಾ ಹೆಚ್ಚಿಸ್ತು. ಜೊತೆಗೆ ಯಾವ ಪಾತ್ರ ನನಗೆ ಇಷ್ಟ ಅಂತ ನಿರ್ಧಾರ ಮಾಡೋಕೆ ಕಷ್ಟ ಆಗ್ತಾ ಇತ್ತು. ಕೆಲೋ ಕಡೆ ನನ್ನ ಈಗೋ ಗೆ ಸರಿಯಾಗಿ ಪೆಟ್ಟೂನು ಬಿತ್ತು. ಸುಳ್ಳು ಹೇಳಲ್ಲ, ಕಾದಂಬರಿ ಮೇಲೆ ಲವ್ ಆಯ್ತು.

ಇದೊಂದು perfect ಥ್ರಿಲ್ಲರ್ ಕಾದಂಬರಿ ಅನಿಸ್ತು..

MORE FEATURES

ಜೀವಂತಿಕೆ ತುಂಬಿದ ಬರಹಗಳು

08-05-2024 ಬೆಂಗಳೂರು

"ಶಶಿಧರ ಹಾಲಾಡಿ ಅವರು ಬಾಲ್ಯ ಕಳೆದದ್ದು ಅವರ ಹಳ್ಳಿಯ ಪರಿಸರದ ನಿಸರ್ಗದ ಮಡಿಲಲ್ಲಿ. ಹಾಗಾಗಿ ಆ ಪರಿಸರ ಅವರ ಮೇಲೆ ಗ...

ಜನಸಾಮಾನ್ಯರಿಗಷ್ಟೇ ಅಲ್ಲ; ಪತ್ರಕರ್ತರಿಗೂ ಪಠ್ಯದಂತೆ ಇಲ್ಲಿನ ಬರಹಗಳು ರೂಪುಗೊಂಡಿವೆ..

08-05-2024 ಬೆಂಗಳೂರು

"ಕಾಡಿಗೆ ನಾವು ಮನುಷ್ಯರಾಗಿ ಹೋಗಬಾರದು. ನಾವು ಕೂಡ ಒಂದು ಪ್ರಾಣಿಯಾಗಿರಬೇಕು. ಯಾವ ಪ್ರಾಣಿ, ಪಕ್ಷಿಯನ್ನು ವೀಕ್ಷಿಸ...

ಅಪಾರ ಅನುಭವ ಮತ್ತು ಅಧ್ಯಯನದ ಸಂಗಮ ಈ ಕೃತಿ

07-05-2024 ಬೆಂಗಳೂರು

"ಅಪಾರ ಅನುಭವ ಮತ್ತು ಅಧ್ಯಯನದ ಸಂಗಮವಾದ ಈ ಕೃತಿ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಅದರಲ್ಲೂ ಪ್ರಮುಖವಾಗಿ...