ಯುವಕರಿಗೆ ರಾಮಾಯಣ - ಮಹಾಭಾರತ - ದೊಡ್ಡರಂಗೇಗೌಡರ ಪ್ರತಿಪಾದನೆ 

Date: 14-09-2021

Location: ಬೆಂಗಳೂರು ನಗರ ಕೇಂದ್ರ ಗ್ರಂಥಾಲಯ


ರಾಮಾಯಣ ಹಾಗೂ ಮಹಾಭಾರತ ಕಥೆಗಳು ನಮ್ಮ ದೇಶದ ಹೆಗ್ಗುರುತು..ಅವು ಕೇವಲ ಕತೆಯಲ್ಲ,ಸಂಸ್ಕೃತಿಯ ಮೆರವಣಿಗೆ, ಮೌಲ್ಯಗಳ ಪ್ರತಿಪಾದನೆಯಾಗಿವೆ. ಅವುಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇರಬೇಕು ಎಂಬುದಾಗಿ ಕವಿ ಡಾ. ದೊಡ್ಡರಂಗೇಗೌಡರು ಹೇಳಿದ್ದಾರೆ.

ಬೆಂಗಳೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಲೇಖಕಿ ಮಾಲತಿ ಶೆಟ್ಟಿ ಎಸ್.ಜಿ ಅವರ ‘ಬಾಲ ರಾಮಾಯಣ ದರ್ಶನ’ ಹಾಗೂ ‘ಹೊನ್ನುಡಿ ಕನ್ನಡ’ ಎಂಬ ಎರಡು ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಥನ ಗುಣವನ್ನು ಮೈಗೂಡಿಸಿಕೊಂಡಿರುವ ಲೇಖಕಿ ಮಾಲತಿ ಶೆಟ್ಟಿ ಅವರ, ‘ಬಾಲ ರಾಮಾಯಣ ದರ್ಶನ’ ನಲ್ಲಿ ಚಿಕ್ಕ ಮಕ್ಕಳಿಗೆ ರಾಮಾಯಣ ಕಟ್ಟಿಕೊಡುವ ಪ್ರಯತ್ನ ಮಾಡಿದ್ದು, ಹೆಸರಿಕೆ ತಕ್ಕಂತೆ ವೈವಿಧ್ಯಪೂರ್ಣವಾಗಿವೆ. ಆರ್ದ್ರ ಸನ್ನಿವೇಶ, ಸುಲಭವಾದ ಶೈಲಿ, ಸರಳವಾದ ಅಭಿವ್ಯಕ್ತಿಯ ಚೌಪದಿ ಛಂದಸ್ಸಿನ ಕಾವ್ಯ ಇದಾಗಿದ್ದು, ಲಾವಣಿಯ ಶೈಲಿಯಲ್ಲಿ ಹಾಡಲು ಸಾಧ್ಯವಾಗುವಂತಿದೆ ಎಂದ ದೊಡ್ಡರಂಗೇಗೌಡರು, ಪಠ್ಯ ಪುಸ್ತಕದಲ್ಲಿ ಸೇರಿದಬಹುದಾದ ರಾಮಾಯಣದ ಕಥೆಗಳಿವು ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.

‘ಹೊನ್ನುಡಿ ಕನ್ನಡ’ ಕೃತಿಯ ಬಗ್ಗೆ ಮಾತನಾಡಿದ ಅವರು, ಕರ್ನಾಟಕ, ಕನ್ನಡ, ಕನ್ನಡಿಗನ ಬಗ್ಗೆ ಕವಿತೆಗಳನ್ನು ಹೊತ್ತಿರುವ ಈ ಸಂಕಲನ, ಚಿಣ್ಣರ ಲೋಕದಲ್ಲಿ ಕೌತುಕ ಮೂಡಿಸಲಿದೆ..ದೇಶಪ್ರೇಮವನ್ನು ತಿಳಿಹೇಳುವಂತಿದೆ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಗ್ರಂಥಾಲಯದ ನಿರ್ದೇಶಕರು ಸತೀಶ್ ಹೊಸಮನಿ, ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ, ಸಂವಹನಾ ಪ್ರಕಾಶನದ ಲೋಕಪ್ಪನವರು ರ.ನಂ ಚಂದ್ರಶೇಕರ್ ಹಾಗೂ ಮಾಜಿ ಎಂಎಲ್ ಸಿ ಶ್ರೀಮತಿ ಲೀಲಾ ಅವರು ಉಪಸ್ಥಿತರಿದ್ದರು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...