ಕರ್ನಾಟಕ ಸರ್ಕಾರ 2006-07ರಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದೆ. ಪ್ರಾಧಿಕಾರ ಕ್ಷೇತ್ರಗಳ ಅಭಿವೃದ್ಧಿ, ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುವುದೇ ಈ ಸಂಸ್ಥೆಯ ಮುಖ್ಯ ಉದ್ದೇಶ. ಈಗಾಗಲೇ ಕನಕದಾಸರ ಕುರಿತ ಧಾರ್ಮಿಕ, ಸಾಮಾಜಿಕ, ವೈಚಾರಿಕ ಹಾಗೂ ತೌಲನಿಕ ಅಧ್ಯಯನಗಳನ್ನು ನಡೆಸಿ ಕನಕದಾಸರ ಕುರಿತ ಹಲವಾರು ಕೃತಿಗಳನ್ನು ಹೊರತಂದಿರುತ್ತದೆ. ಅಂಬಿಗರ ಚೌಡಯ್ಯ, ಸರ್ವಜ್ಞ, ಶಿಶುನಾಳ ಶರೀಫರ ತತ್ವದರ್ಶನಗಳನ್ನು ಪ್ರವಾಸಿಗರಿಗೆ ತಿಳಿಸಿಕೊಡಬೇಕೆಂಬ ಹಿನ್ನೆಲೆಯಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ತೌಲನಿಕ ಕೃತಿಗಳನ್ನು ಪ್ರಕಟಿಸುತ್ತಿದೆ.
©2023 Book Brahma Private Limited.