ಕನಕದಾಸ ಹಾಗೂ ಏಕನಾಥ

Author : ಮೇಧಾ ಎಂ. ಕುಲಕರ್ಣಿ

Pages 112

₹ 70.00




Year of Publication: 2017
Published by: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ
Address: ಕಾಗಿನೆಲೆ, ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆ

Synopsys

ಲೇಖಕಿ ಮೇಧಾ ಎಮ್.‌ ಕುಲಕರ್ಣಿ ಅವರ ಅಧ್ಯಯನ ಕೃತಿ ʻಕನಕದಾಸ ಹಾಗೂ ಏಕನಾಥ ತೌಲನಿಕ ಅಧ್ಯಯನʼ. ಅಪಾರ ಪಾಂಡಿತ್ಯದಿಂದ, ಅಸಾಧಾರಣ ಪ್ರತಿಭೆಯಿಂದ ಹರಿದಾಸ ಸಾಹಿತ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಕನಕದಾಸರು ದಾಸರಲ್ಲಿ ವಿಶಿಷ್ಟರೆನಿಸಿದ್ದಾರೆ. ಭಕ್ತಿಪಾರಮ್ಯದಿಂದ, ತತ್ವವಿವೇಚನೆಯಿಂದ, ಸರಳ ಸುಂದರ ಮಾರಾಠಿ ಭಾಷೆಯಲ್ಲಿ ಕೃತಿಗಳನ್ನು ರಚಿಸಿ ಏಕನಾಥರು ಸಂತ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಇವರಿಬ್ಬರ ಸಮಕಾಲೀನ ಸಮಾಜದ ಸ್ಥಿತಿಗತಿಗಳನ್ನು ಸೂಕ್ಷ್ಮದೃಷ್ಟಿಯಿಂದ ಅಧ್ಯಯನ ಮಾಡುತ್ತಾ ಲೇಖಕರು ಇಬ್ಬರ ಸಾಮಾಜಿಕ ಕಳಕಳಿಯನ್ನು ಹೊರಹಾಕಿದ್ದಾರೆ. ಪುಸ್ತಕದಲ್ಲಿ ದಾಸಸಾಹಿತ್ಯ ಹಾಗೂ ಸಂತಸಾಹಿತ್ಯದ ಉಗಮ ಮತ್ತು ವಿಕಾಸ, ಕನಕದಾಸರ ಜೀವನ ಮತ್ತು ಸಾಧನೆ, ಏಕನಾಥರ ಜೀವನ ಮತ್ತು ಸಾಧನೆ, ಕನಕದಾಸ ಹಾಗೂ ಏಕನಾಥರ ರಚನಗಳಲ್ಲಿ ಸಾಮ್ಯ ಮತ್ತು ವ್ಯತ್ಯಾಸ ಸೇರಿ ನಾಲ್ಕು ಅಧ್ಯಾಯಗಳಲ್ಲಿ ಮಾಹಿತಿಗಳನ್ನು ನೀಡಿದ್ದಾರೆ.

About the Author

ಮೇಧಾ ಎಂ. ಕುಲಕರ್ಣಿ
(28 August 1949)

ಮೇಧಾ ಎಂ ಕುಲಕರ್ಣಿ ಅವರು 28-08-1949 ರಲ್ಲಿ ರಾಮದುರ್ಗದಲ್ಲಿ ಜನಿಸಿದರು. ತಂದೆ ಸುಬ್ರಾವ ಎಂ. ಹಲಗೇರಿ, ತಾಯಿ ಲೀಲಾಬಾಯಿ. ಮುಂಬೈ ವಾಸಿಯಾಗಿರುವ ಮೇಧಾ ಅವರು  ಎಂ.ಎ , ಎಂ.ಫಿಲ್ ಪದವೀಧರೆ. ಕನಕದಾಸ ಹಾಗೂ ಏಕನಾಥ ಒಂದು ತೌಲನಿಕ ಅಧ್ಯಯನ ೨೦೦೭ ರಲ್ಲಿ ಪ್ರಕಟವಾಯಿತು.ಇವರ ಈ ಸಂಶೋಧನಾ ಕೃತಿಗೆ ಕೋಡಗುಂಟೆ ಪ್ರಶಸ್ತಿ, ಮತ್ತು ಡಾ. ಪಂ.ಪುಟ್ಟರಾಜ ಸಾಹಿತ್ಯ ಪುರಸ್ಕಾರ ಲಭಿಸಿದೆ. ...

READ MORE

Related Books