Story/Poem

ಅಜಯ್ ಅಂಗಡಿ

ಕವಿ ಅಜಯ್ ಅಂಗಡಿ ಮೂಲತಃ ದಾವಣಗೆರೆಯವರು. ಬರವಣಿಗೆ, ಓದು, ಕವನ ಅವರ ಆಸಕ್ತಿ ಕ್ಷೇತ್ರವಾಗಿದ್ದು ಪ್ರಸ್ತುತ ಕರಾಮುವಿಯಲ್ಲಿ ಎಂ.ಎ ಕನ್ನಡವನ್ನು ವ್ಯಾಸಂಗ ಮಾಡುತ್ತಿದ್ದಾರೆ.

More About Author

Story/Poem

ಮನದಿಂಗಿತ

ಹೊಂಗನಸೊಂದು ಬಿದ್ದಂತೆ ಹಸಿರ ಹಾದಿಯಲಿ ಹೂಮಳೆಯೇ ಸುರಿದಂತೆ ಹೃದಯದ ಬೀಡಿನಲಿ ಕಾಣದ ಊರಿನ ನೆನಪಿನ ಪಯಣ ಕಾಡುವುದೇಕೆ ಅನುಕ್ಷಣ ಕಾಣುವ ವಾಸ್ತವ ಭಾವಗಳೆಲ್ಲ ಮರೆವುದೇಕೋ ಅರೆಕ್ಷಣ ನೀಲಗಗನದಿ ಮೇಘದೂತ ವಿಹರಿಸುವ ಏಕಾಂತದಿ ಮನದ ತುಂಬಾ ಕನಸಿನೋಟ ಓಡುವುದು ಆವೇಗದಿ - ಅಜಯ್ ಅ...

Read More...

ಸಾಂಗತ್ಯ

ಹೇಳಲಾಗದಿರೋ ಹಳೆ ಸೆಳೆತ ಈಗಂತೂ ಕಾಡುತಿದೆ ಖಂಡಿತ ಕೆಲವೊಮ್ಮೆ ಹಾಗಾಗೋದು ಖಚಿತ ಕೈಗೆಟುಕದ ಆಕಾಶದೀಪ ಕೊಡುವ ಸಂತಸವಿದು ವಿರಹವೂ ಸಹ ಇದೇ...! ಅದೆಷ್ಟೇ ಬೇಡವೆಂದರೂ ಬಿಡದಂಥ ಬಯಕೆಯದು ಮನದ ಆಳದಲ್ಲೆಲ್ಲೋ ನೆನಪ ಹೊದಿಕೆ ಹೊದ್ದು ಮಲಗಿದ್ದರೂ ಆ ಸೆಳೆತದ ಸುವಾಸನೆ ತುಸುವೇ ಸೋಕಲು ...

Read More...

 ಪಕ್ಷಿನೋಟ

ಮುಸ್ಸಂಜೆ ಸುರಿದ ಆ ಮುಂಗಾರುಮಳೆ ತಂದಿತು ಭುವಿಗೆ ಹೊಸದೊಂದು ಕಳೆ ಮೋಡ ಕರಗಿ ನೀರಾದ ಮೇಲೆ ಹಸಿರನುಟ್ಟು ಕಂಗೊಳಿಸುತಿದೆ ಇಳೆ ಆಗಷ್ಟೇ ಚಿಗುರಿರುವ ಕನಸುಗಳು ಬೆಳೆದು ಬೃಹದಾಕಾರ ತಾಳುವ ಹುಮ್ಮಸ್ಸಿನಲ್ಲಿ ತೇಲುತ್ತಿವೆ. ದಿಗಂತದತ್ತ ಹಾರಿದ ಚಿತ್ತ ಹೊಸ ಕವಿತೆಗಾಗಿ ಸರಕು ಹುಡುಕುತಾ...

Read More...

ನೆನಪಿಗೆ ಬೀಳ್ಕೊಡುಗೆ

ಹೀಗೇಕೆ ನೀ ಕಾಡುವೆ ಎಡಬಿಡದೆ ಸುರಿವ ಮಳೆಯಂತೆ ಮಳೆಯಾದರೂ ನಿಲ್ಲಬಹುದಂತೆ ನಿಲ್ಲದೇ ಈ ನಿನ್ನ ಸಂತೆ.... ನಾ ದೂರವಿಟ್ಟರೂ ನೀ ಇರುವೆ ಹತ್ತಿರ ನಿನ್ನ ನೂರು ದಾಳಿಗೆ ನಾನಾದೆ ತತ್ತರ ಹೋಗಿಬಿಡು ನೀ ಬರದಿರು ಇನ್ನೆಂದೂ ಹೇಳದೇ ಕೇಳದೇ ಸತಾಯಿಸದೇ ಪದೇ ಪದೇ -ಅಜಯ್ ಅಂಗಡಿ

Read More...

ಕವಿತಾ ತೀರ ವಿಹಾರ

ಕಡಲ ತೀರದ ಮೇಲೆ ಕವಿತೆಗಳು ಸಾಲಾಗಿ ಮಲಗಿವೆ ನಿರಾತಂಕವಾಗಿ ಅಲೆಗಳ ದಾಳಿಗೆ ಭಯಪಡದೆ ತಂಗಾಳಿಯ ಆಲಿಂಗನವ ಅನುಭವಿಸುವ ಹುಚ್ಚು ಹಂಬಲವೇನೋ ಅವುಗಳಿಗೆ ಒಮ್ಮೆಯಾದರೂ ಸಹ.... ಭಾವನೆಗಳ ಬಣ್ಣದೊಡನೆ ಬೆಸೆದಿರುವ ಬಂಧಕೆ ತುಸು ತಂಗಾಳಿಯ ಹಸಿ ಸ್ಪರ್ಶ ಸೋಕಿಸಿ ಬಿಡುವ ಬಯಕೆ ಯಥೇಚ್ಛವಾಗಿ ...

Read More...