Story/Poem

ಹೆಚ್.ಆರ್. ಸುಜಾತಾ

ಸಾಹಿತ್ಯ ಲೋಕದ ಪ್ರವೇಶದ ಸಂದರ್ಭದಲ್ಲೇ ಗಮನಸೆಳೆದವರು ಹೆಚ್.ಆರ್.ಸುಜಾತ. ಲೇಖಕಿ, ಅಂಕಣಗಾರ್ತಿ, ಕವಯತ್ರಿ, ಕಥೆಗಾರ್ತಿಯಾಗಿ ಅವರದ್ದು ಹೊಚ್ಚ ಹೊಸ ಹೆಜ್ಜೆ ಗುರುತು. ಹಾಸನ ಜಿಲ್ಲೆ ಆಲೂರು ತಾಲೂಕಿನ ಮರಸುಹೊಸಹಳ್ಳಿ ಸುಜಾತರ ಹುಟ್ಟೂರು. ಓದಿದ್ದು ಬಿಎಸ್ಸಿ, ಆದರೆ ಆಸಕ್ತಿ ಮಾತ್ರ ಅಪ್ಪಟ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ. ಮಕ್ಕಳ ರಂಗಭೂಮಿ, ಪತ್ರಿಕೋದ್ಯಮ ಅನುಭವ, ಮಲೆನಾಡ ಬದುಕಿನ ಗಾಢ ಅನುಭವಗಳೇ ಬರಹಕ್ಕೆ ಸ್ಪೂರ್ತಿ. ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಅಂಕಣಬರಹಗಳ ಆಯ್ದ ಸಂಗ್ರಹ, ‘ನೀಲಿ ಮೂಗಿನ ನತ್ತು’ ಸುಜಾತ ಅವರ ಚೊಚ್ಚಲ ಕೃತಿ. ಮೊದಲ ಕೃತಿಗೆ ಅಮ್ಮ ಪ್ರಶಸ್ತಿ ಪುರಸ್ಕೃತರು. ಮಂಗಳೂರು ವಿವಿ ಪಠ್ಯಪುಸ್ತಕದಲ್ಲೂ ಸೇರ್ಪಡೆ. ‘ಕಾಡುಜೇಡ ಹಾಗೂ ಬಾತುಕೋಳಿ ಹೂ’ ಕವನ ಸಂಕಲನ. ಪ್ರಸ್ತುತ ಕೆಂಡಸಂಪಿಗೆ ಡಾಟ್ ಕಾಮ್ ನಲ್ಲಿ ‘ಸುಜಾತಾ ತಿರುಗಾಟದ ಕಥನ’. ಅಂಕಣ ಬರಹದಲ್ಲಿ ನಿರತರಾಗಿದ್ದಾರೆ. ಕೃಷಿಸಂತ ಎಲ್.ನಾರಾಯಣರೆಡ್ಡಿ ಅವರ ಬದುಕಿನ ಕುರಿತ ಸಾಕ್ಷ್ಯಚಿತ್ರದ ನಿರ್ದೇಶಕರೂ ಆಗಿರುವ ಸುಜಾತಾ ಅವರ ಚೊಚ್ಚಲ ಕೃತಿಗೆ ಸಾಹಿತ್ಯ ಅಕಾಡೆಮಿಯ ದತ್ತಿನಿಧಿ ಬಹುಮಾನ ಲಭಿಸಿದೆ. 

More About Author

Story/Poem

ಹುಟ್ಟಿಸಿದ ದೇವರು

ಸಾಹಿತ್ಯ ಲೋಕದ ಪ್ರವೇಶದ ಸಂದರ್ಭದಲ್ಲೇ ಗಮನಸೆಳೆದವರು ಹೆಚ್.ಆರ್.ಸುಜಾತ. ಲೇಖಕಿ, ಅಂಕಣಗಾರ್ತಿ, ಕವಯತ್ರಿ, ಕಥೆಗಾರ್ತಿಯಾಗಿ ಅವರದ್ದು ಹೊಚ್ಚ ಹೊಸ ಹೆಜ್ಜೆ ಗುರುತು. ಅವರ ‘ಹುಟ್ಟಿಸಿದ ದೇವರು’ ಕತೆ ನಿಮ್ಮ ಓದಿಗಾಗಿ "ನಾವು ಬಂದಿದ್ದು ರಾತ್ರಿ ಲೇಟಾಗಿತ್ತು ವಚನ. ಅರೆ...

Read More...

ಮಾಗಿದ ಬೆಳಗಿನ ನಡಿಗೆ 

  ದುರಿತ ಕಾಲದಲ್ಲೊಂದು ಮಾಗಿದ ಬೆಳಕಿನ ನಡಿಗೆ..... ನೆಲಕೆ ನಸುಬೆಳಕಿಳಿಯುವ ಹೊತ್ತಿನಲ್ಲಿ ಕಾವಳ ಕವುಚಿಬಿದ್ದ ಒಡಲೊಳಗೆ ಕಾವಲಿಲ್ಲದೆ ಹರಯವೊಲಿದ ಕನ್ನೆಯ ಕಾಲುಗಳು ಟಪಟಪನೆ ಸದ್ದುಗುಟ್ಟುತ್ತ ಹರಯವನೇ ಹುರಿಗೊಳಿಸಿ ಬದುಕಿನೊಂದು ದಾರಿ ತೆರೆಯುತ್ತಾ ನಸುಬೆವರ ಮೊಗ...

Read More...