Story/Poem

ವೀರಣ್ಣ ಮಡಿವಾಳರ

ವೀರಣ್ಣ ಮಡಿವಾಳ ಅವರು ಸೆಪ್ಟೆಂಬರ್ 01, 1983ರಂದು ಜನಿಸಿದರು. ಕಲಿವಾಳ, ಕಲಕೇರಿ, ಸಿರಿಗೆರೆ, ಮುಂಡರಗಿ, ಕೊಪ್ಪಳ ಮತ್ತು ಗುಲ್ಬರ್ಗದಲ್ಲಿ ವಿದ್ಯಾಭ್ಯಾಸ. 2007 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸವಣೂರು ತಾಲ್ಲೂಕಿನ ಮೆಳ್ಳಾಗಟ್ಟಿ ಪ್ಲಾಟ್ ನಲ್ಲಿ ಸೇವೆ ಆರಂಭ. ಸದ್ಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಾವಡ್ಯಾನವಾಡಿಯಲ್ಲಿ ವೃತ್ತಿ. ಗುಲ್ಬರ್ಗಾದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರಥಮ ರ್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2010ರಲ್ಲಿ 'ನೆಲದ ಕರುಣೆಯ ದನಿ' ಕವನ ಸಂಕಲನ ಮತ್ತು ಆಡಿಯೋ ಬುಕ್ ಪ್ರಕಟವಾಗಿದೆ. ಚಿತ್ರ ಮತ್ತು ಫೊಟೋಗ್ರಫಿಯಲ್ಲೂ ಕವಿತೆಯನ್ನೇ ಹುಡುಕುತ್ತಿರುವ ವೀರಣ್ಣ 2013 ರಲ್ಲಿ ಗುಲ್ಬರ್ಗದಲ್ಲಿ ಸಾಂಗ್ಸ್ ಆಫ್ ಸೈಲೆನ್ಸ್ ಎಂಬ ಛಾಯಾಚಿತ್ರ ಪ್ರದರ್ಶನ ನಡೆಸಿದ್ದಾರೆ. 

More About Author

Story/Poem

ಗಾಯಗೊಂಡ ಪತಂಗವೊಂದರ ಪತ್ರ

ನನ್ನ ಕನಸಿನ ಓಣಿಯ ಆ ತಿರುವಿನಲ್ಲಿ ನೀನು ನನಗಾಗಿ ಕಾಯುತ್ತಾ ನಿಂತಿರುತ್ತಿ ನಾನು ಬಣ್ಣ ಬಣ್ಣದ ಗಾಯಗಳ ಹೆಜ್ಜೆಯೂರುತ್ತಾ ನೀನಿರುವಲ್ಲಿಗೆ ಬಂದರೆ ಅಲ್ಲಿ ನೀನಿರುವುದಿಲ್ಲ ನಿನ್ನ ಬಿಸಿ ಬಿಸಿಯಾದ ನೆನಪುಗಳಿರುತ್ತವೆ ಚಂದಿರ ಲೋಕದ ತಾರೆಯರು ನಾನು ಬರೆದ ವಿರಹಗೀತೆಯ ರಾಗವಾಗಿ ಹ...

Read More...

ವಲಸೆ ಬಂದ ಹಕ್ಕಿಗಳ ಹಾಡು

ಒಂದು ಚೂರು ರೊಟ್ಟಿಗಾಗಿ ಊರ ಮರವ ತೊರೆದು ವಲಸೆ ಬಂದ ಹಕ್ಕಿಗಳಿಗೆ ಇಂದು ಮರಳಿ ಗೂಡು ಸೇರುವ ದಾರಿ ಕಾಣಿಸುತಿಲ್ಲ ಹಿಡಿ ಕಾಳು ಕಡಿ ನಂಬಿ ಬಂದ ಪಕ್ಷಿಗಳಿಂದು ನಡುಬೀದಿಯ ಬಯಲಲ್ಲಿ ಬಂಧಿಯಾಗಿವೆ ರೆಕ್ಕೆಯ ಮೇಲೆ ಮರಿಗಳ ಹೊತ್ತು ಹಾರಿ ಹೊರಡೋಣವೆಂದರೆ ಗಡಿಗಡಿಗಳ ತುಂಬಾ ಗೋಡೆಗಳೆದ್ದಿವೆ...

Read More...