Book Watchers

ಬೈರಮಂಗಲ ರಾಮೇಗೌಡ

ಬೈರಮಂಗಲ ರಾಮೇಗೌಡರು ಪ್ರಗತಿಪರ ಚಿಂತಕ, ಲೇಖಕ, ಸಂಶೋಧಕ, ಸಂಘಟಕ, ಹೋರಾಟಗಾರ. ತಮ್ಮ ಮಾನವೀಯ ನಡವಳಿಕೆ, ಸಾಮಾಜಿಕ ಕಳಕಳಿ ರಾಮೇಗೌಡರನ್ನು ಬಂಡಾಯ ಲೇಖಕರನ್ನಾಗಿ ರೂಪಿಸಿದೆ. ಕನ್ನಡ ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾದ ರಾಮೇಗೌಡರು ನಮ್ಮ ನಡುವಿನ ಜಾನಪದ ತಜ್ಞ , ಸಂಸ್ಕೃತಿ ಚಿಂತಕ. ಡಾ. ರಾಮೇಗೌಡರು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿ ಛಾಪು ಮೂಡಿಸಿದ್ದಾರೆ. ಗ್ರಾಮಸಮಾಜ ಮತ್ತು ಗ್ರಾಮಸಂಸ್ಕೃತಿಯ ಬಗ್ಗೆ ವಿಶೇಷ ಪರಿಜ್ಞಾನವುಳ್ಳ ರಾಮೇಗೌಡರು ಈ ಬಗ್ಗೆ ತಮ್ಮ ಭಾಷಣ ಮತ್ತು ಬರವಣಿಗೆಯಿಂದ ಸಮಾಜದ ಕಣ್ತೆರೆಸುವ ಕೆಲಸ ಮಾಡುತ್ತಿದ್ದಾರೆ. ಕುವೆಂಪು ಕಾವ್ಯವನ್ನು ಸೂಕ್ಷ್ಮಗ್ರಾಹಿ ನೆಲೆಯಲ್ಲಿ ವಿವೇಚಿಸಿ ’ರಸಸಿದ್ಧಿ’ ಎಂಬ ಕುವೆಂಪುರವರ ಕಾವ್ಯ ವಿಮರ್ಶಾ ಕೃತಿಯನ್ನು ಹೊರತಂದಿದ್ದಾರೆ.

Articles

ಹನುಮಗನ್ನಡಿಯಲ್ಲಿ ರಾಮಾಯಣ ದರ್ಶನ

ಹನುಮಗನ್ನಡಿಯಲ್ಲಿ ಕುವೆಂಪು ರಾಮಾಯಣ ದರ್ಶನ ಮಾಡಿ ಪುಳಕಿತರಾದವರಿಗೆ ಇದೇ ರೀತಿ ಕಾವ್ಯದ ಸಮಗ್ರ ದರ್ಶನವನ್ನೇ ಮಾಡಬೇಕೆನ್ನುವ ಆಸೆ ಸಹಜವಾಗಿ ಹುಟ್ಟುತ್ತದೆ. ಅದಕ್ಕೆ ಬೇಕಾದ ಸಾಮರ್ಥ್ಯ ಕೃಷ್ಣಪ್ಪನವರಿಗೆ ಸಿದ್ಧಿಸಿದೆ ಎನ್ನುವುದಕ್ಕೆ ಈ ‘ಕುವೆಂಪು ಹನುಮದ್ದರ್ಶನ’ವೇ ನಿದರ್ಶನ.

Read More...

’ಕಾಯಕಾವ್ಯ’ದ ವಿಶಿಷ್ಟ ಧ್ವನಿ

ಕಾತ್ಯಾಯಿನಿಯವರ ಕವಿತೆಗಳ ಚರ್ಚೆಗೆ ಹೋಗುವ ಮುನ್ನ ಕಾವ್ಯದತ್ತ ಅವರ ಒಲವು ಮೂಡಿದ ಬಗೆ, ತಮ್ಮ ಕಾವ್ಯಸೃಷ್ಟಿ ಕುರಿತಂತೆ ತಮಗೇ ಅನಿಸಿದ್ದು, ಕಾವ್ಯಸೃಷ್ಟಿಯ ಬಗೆಗಿನ ಅಭಿಪ್ರಾಯ ಇತ್ಯಾದಿಗಳನ್ನು ಗಮನಿಸುವುದು ಸೂಕ್ತ.

Read More...