Book Watchers

ಮೌನೇಶ ಕನಸುಗಾರ

ಮೌನೇಶ ಕನಸುಗಾರ- ಮೂಲತಃ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ವಸ್ತಾರಿಯವರು. ಸಧ್ಯ ಬೆಂಗಳೂರಿನಲ್ಲಿ ವಾಸವಿದ್ದು ಗ್ರಾಫಿಕ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲಸದ ಜೊತೆ ಜೊತೆಗೆ ಫೋಟೋಗ್ರಫಿ ಮಾಡುತ್ತಾರೆ. ಚಾರಣ - ಪ್ರವಾಸದ ಹವ್ಯಾಸಗಳಿದ್ದು ಚಾರಣದ ಅನುಭವಗಳನ್ನು ಬರೆಯುತ್ತಾರೆ. ಒಂದಿಷ್ಟು ಅನುಭವದ ಲೇಖನಗಳನ್ನು ಬರೆದ ಇವರು ಕನ್ನಡ ಸಾಹಿತ್ಯಕೃಷಿ ಬಳಗವನ್ನು ಹುಟ್ಟು ಹಾಕಿ 100 ಕ್ಕೂ ಹೆಚ್ಚಿನ ಲೇಖಕರು ಸಕ್ರಿಯರಾಗಿರುವಂತೆ ದಿನವೂ ಹಳೆಯ ಲೇಖಕರ ಬರಹಗಳನ್ನು ಮೆಲುಕು ಹಾಕುತ್ತಾರೆ.

Articles

ಹಾಣಾದಿಯ ಅಂತರಂಗ

"ಅವಶ್ಯಕತೆಗಿಂತ ಹೆಚ್ಚು ಮಾತಾಡಿದವನಲ್ಲ. ಆದರೂ ಅವನ ಕಣ್ಣುಗಳು ಲೆಕ್ಕವಿಲ್ಲದಷ್ಟು ಮಾತುಗಳು ಪಟಪಟನೆ ಆಡುತ್ತಿದ್ದವು, ಓದಬೇಕಿತ್ತಷ್ಟೆ. ಕೆಲವು ಸಲ ಕಾದಂಬರಿಗಳು ಸಹ ಅವನ ಕಣ್ಣೆದುರು ಬೋರು ಹೊಡೆಸುತ್ತಿದ್ದವು. ಅವನಿಗೆ ನನ್ನ ಬಗ್ಗೆ ಹಲವು ಕಾರಣಕ್ಕೆ ಅಸಮಾಧಾನವಂತೂ ಇತ್ತು. ಆದರೆ ಪ್ರೀತಿ ಕಮ್ಮಿಯಾಗಿರಲಿಲ್ಲ.

Read More...

ರಾಗ ವಿರಾಗದ ಭಾವ ತರಂಗದ ನಾದ ವಿಶಾರದ ತಂಬೂರಿ...

ಥಟ್ ಅಂತ ನಿಬ್ಬೆರಗಾಗಿಸುವ ಸಾಲುಗಳಿಂದ ಎದೆಗಿಳಿಯುತ್ತಾರೆ ಬೋರಗಿ. ಸಮಾಜದಲ್ಲಿಯ ಅಳಲನ್ನು ಅತಿ ಸೂಕ್ಷ್ಮವಾಗಿ ಎಳೆ ಎಳೆಯಾಗಿ ಬಿಚ್ಚಿಡುವ ಅವರ ಕವಿತೆಯ ಒಂದೆರಡು ಸಾಲುಗಳು ಹೀಗಿವೆ

Read More...