Book Watchers

ಶಿ.ಜು ಪಾಶ

ಶಿ.ಜು.ಪಾಶ ಎಂಬ ಕಾವ್ಯನಾಮದಿಂದ ಸಾಹಿತ್ಯ ಕೃಷಿಯಲ್ಲಿ ಪರಿಚಿತರಾದವರು ಕವಿ ಜುಬೇರ್ ಪಾಷ. ಎರಡು ಕವನ ಸಂಕಲನಗಳು, ಹಾಗೂ ಒಂದು ಕಥಾ ಸಂಕಲನವನ್ನು ಹೊರತಂದಿದ್ದಾರೆ. ಕವಿತೆ, ಕಥೆ, ಪ್ರಬಂಧ ಬರೆಯುವುದರಲ್ಲಿ ನಿರತರಾದ ಪಾಶ ಅವರು ಪತ್ರಕರ್ತರೂ ಆಗಿದ್ದಾರೆ.

Articles

ಈಚನೂರು ಇಸ್ಮಾಯಿಲರ ‘ಕಳೆದುಹೋದ ಜೀವ’ದ ಭಾವ ಹುಡುಕುತ್ತಾ...

`ಬಿಸಿಲು ಸೀಮೆಯ ನೆಲದಲ್ಲಿ ಸೂರ್ಯನ ಬೆಂಕಿ ಸುಡುತ್ತಿದೆ’ ಎಂದು ಆರಂಭವಾಗುವ ಈ ಖಂಡಕಾವ್ಯದಲ್ಲಿ ಅಲ್ಲಲ್ಲಿ ಉತ್ತಮ ಹೊಳಹುಗಳು ಕಾಣುತ್ತವೆ. ಹಸಿದ ಹೊಟ್ಟೆಗೆ ಅನ್ನ ಬೀಳುತ್ತಿಲ್ಲ ಎಂಬ ಕಣ ್ಣೀರಿನೊಂದಿಗೆ ಸ್ವಾತಂತ್ರ್ಯದ ದಿನದಿಂದ ಹೆಜ್ಜೆ ಇಡುತ್ತಾ ಸಾಗುವ ಕವಿ ನಂತರ ನೇರವಾಗಿ ಗುಳೆಯ ವಿಚಾರಕ್ಕೆ ಬಂದು ತಲುಪುತ್ತಾರೆ.

Read More...

‘ಕಾಫಿ’ ಕನ್ನಡದ ಹೊಸ ಕಾವ್ಯರುಚಿ- ಕೋಶಿ’ಸ್

ಕಾವ್ಯದ ಸಿದ್ಧ ಮಾದರಿಗಳನ್ನೆಲ್ಲ ಆಚೆಗೆ ತೂರಿ, ಸಾಂಪ್ರದಾಯಿಕ ಭಾವನೆಗಳನ್ನೆಲ್ಲ ಮೂಸೂ ನೋಡದೇ ಹೊಸದೇ ಆದ ಹಾದಿ   ಸೃಷ್ಟಿಸಿಕೊಂಡು ಕೆ.ನಲ್ಲತಂಬಿ ಇಲ್ಲಿ ಹೊರಟು ಬಿಟ್ಟಿದ್ದಾರೆ. ಕಾಫಿ ಕಪ್ಪಿನೊಳಗೆ ಈಗ ಜಗತ್ತೇ ಇದೆ.

Read More...