About the Author

ವಿಜಯಪುರದ ಪಿಯು ಕಾಲೇಜಿನಲ್ಲಿ ಕನ್ನಡ ಅರೆಕಾಲಿಕ ಉಪನ್ಯಾಸಕಿ ಆಗಿರುವ ಮಾಲತಿ ಮುದಕವಿ ಮೂರು ಕಥಾ ಸಂಕಲನ ಪ್ರಕಟಿಸಿದ್ದಾರೆ. ಮೂರು ಕಥಾಸಂಕಲನಗಳು: ಚಿತ್ತ ಚಿತ್ತಾರ ಗಂಧವತೀ ಪೃಥ್ವಿ ಜೀವನ ಸಂಧ್ಯಾ ರಾಗ ಒಂದು ಹಾಸ್ಯ ಸಂಕಲನ: ಹಾಸ್ಯ ರಂಗೋಲಿ(ಅಚ್ಚಿನಲ್ಲಿ) ಎರಡು ಸಂಭಾವನಾ ಗ್ರಂಥಗಳು: ಶುಭದಾ: ನೆನಪಿನ ಭಾವತರಂಗ ಮಂದಾಕಿನಿ ಪ್ರಕಟಿತ ಕೃತಿಗಳು. ಎಂ ಎ., ಬಿ ಎಡ್. ಪದವಿ ಪಡೆದಿರುವ ಅವರು ಸದ್ಯ ವಾರಪತ್ರಿಕೆ, ದಿನಪತ್ರಿಕೆ, ಮಾಸಪತ್ರಿಕೆಗಳಲ್ಲಿ ಲೇಖನ, ಕಥೆ , ಹಾಸ್ಯ ಲೇಖನ ಪ್ರಕಟಗೊಂಡಿವೆ.

ಮರಾಠಿಯಿಂದ ಅನೇಕ ಕಥೆಗಳನ್ನು ಅನುವಾದ ಕೂಡ ಮಾಡಿದ್ದು, ಪ್ರಿಯಾಂಕಾ ಪತ್ರಿಕೆಯು ಪ್ರತಿ ವರ್ಷ ಏರ್ಪಡಿಸುವ ಬೆನಕ ಅನುವಾದಿತ ಕಥಾಸ್ಪರ್ಧೆಯಲ್ಲಿ ಮೂರು ಬಾರಿ ಮೊದಲ, ಎರಡು ಬಾರಿ ದ್ವಿತೀಯ, ಒಂದು ಬಾರಿ ತೃತೀಯ ಹಾಗೂ ಸಮಾಧಾನಕರ ಬಹುಮಾನ ಪಡೆದಿವೆ. ಮೇನಕಾ ಬೃಹತ್ ಅನುವಾದಿತ ಕಾದಂಬರಿ ಅಶೋಕ, ಅಲೆಕ್ಸಾಂಡರ್ ಕಾದಂಬರಿಗಳೂ ಅಚ್ಚಿನಲ್ಲಿವೆ. ಕರ್ನಾಟಕ ರಾಜ್ಯ ಮಟ್ಟದ ನಗೆಮುಗುಳು ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಮಾಲತಿ ಮುದಕವಿ

(10 Apr 1950)