ಫಾಸಿಗೆ ಸಾಕ್ಷಿ

Author : ಮಾಲತಿ ಮುದಕವಿ

Pages 316

₹ 320.00
Year of Publication: 2022
Published by: ಶ್ರೀ ಚೂಡ ಪ್ರಕಾಶನ
Address: # 275/F6-1, 5ನೇ ವೆಸ್ಟ್ ಕ್ರಾಸ್, ಉತ್ತರಾಧಿಮಠ ರಸ್ತೆ, ಮೈಸೂರು- -570004
Phone: 9740129274

Synopsys

ಮಾಲತಿ ಮುದಕವಿ ಅವರ ಕಾದಂಬರಿ ಫಾಸಿಗೆ ಸಾಕ್ಷಿ. ಜೀವನದಲ್ಲಿ ಒಮ್ಮೊಮ್ಮೆ ಅತ್ಯಂತ ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೆ ಒಬ್ಬ ಮರಣದಂಡನೆ ಕೊಡುವ ವ್ಯಕ್ತಿಯನ್ನು ಭೆಟ್ಟಿಯಾಗುವ ಯೋಗವು ನನಗೆ ಒದಗಿಬಂದಿತ್ತು. ಅನೇಕ ಕೈದಿಗಳಿಗೆ ಗಲ್ಲಿಗೇರಿಸುವ ವಧೆಕಾರನ ಒಂದು ಸತ್ಯಕಥೆಯನ್ನು ಅವನ ಬಾಯಿಯಿಂದಲೇ ಕೇಳಿದಾಗ ನಾನು ನಿಜಕ್ಕೂ ಅತ್ಯಂತ ನೊಂದೆ. ಮಾನವ ಹತ್ಯೆಯಂಥ ನಿರ್ದಯ ಕಾರ್ಯವನ್ನು ಮಾಡುವಂಥ ತಪ್ಪಿತಸ್ಥರಿಗೆ ನ್ಯಾಯಾಲಯವು ಈ ಗಲ್ಲು ಶಿಕ್ಷೆಯನ್ನು ವಿಧಿಸಿದ ನಂತರ ಆ ಶಿಕ್ಷೆಯನ್ನು ಜಾರಿಗೊಳಿಸುವವನು ಅನುಭವಿಸುವಂಥ ಮಾನಸಿಕ ಯಾತನೆಯ ಬಗ್ಗೆ ಹಾಗೂ ಮಾನವ ಹತ್ಯೆಯು ಎಲ್ಲ ಪಾಪಗಳಲ್ಲೂ ಅತ್ಯಂತ ಹೇಯವಾದದ್ದು ಎಂದು ತಿಳಿಯಲಾಗುತ್ತಿದ್ದು ಆ ಮರಣದಂಡನೆಯನ್ನು ಜಾರಿಗೊಳಿಸುವವನು ಈ ಕಾರ್ಯವನ್ನು ಮಾಡುವಾಗ ತಾನೂ ಅತ್ಯಂತ ದೊಡ್ಡ ಪಾಪವನ್ನೇ ಮಾಡುತ್ತಿರುವೆನೆಂಬ ಅಪರಾಧಿ ಮನೋಭಾವದಿಂದ ಕುದಿಯುತ್ತಿರಬಹುದಲ್ಲವೇ? ಪಾಪ ಪುಣ್ಯಗಳ ಪರಿಕಲ್ಪನೆಯನ್ನು ಪಕ್ಕಕ್ಕಿರಿಸಿದರೂ ಯಾವುದೇ ವೈಯಕ್ತಿಕ ದ್ವೇಷವೇ ಇರದಂಥ ವ್ಯಕ್ತಿಯನ್ನು ಕೊಂದುಹಾಕುವ ಕಾರ್ಯವು ಅವನಿಗೆ ಎಂಥ ಮನೋತುಮುಲವನ್ನು ಉಂಟುಮಾಡಿರಬಹುದು! ನನಗೆ ಭೆಟ್ಟಿಯಾದ ಆ ಮರಣದಂಡನೆಕಾರನು ತನ್ನ ಸೇವೆಯ ಸಮಯದಲ್ಲಿ ತನಗೆ ಉಂಟಾದ ಮನೋವೇಧಕ ಅನುಭವವನ್ನು ಹೇಳಿದ್ದನು. ಆ ಸಾಮಾನ್ಯ ಮನುಷ್ಯನ ಅಸಾಮಾನ್ಯ ಜೀವನವನ್ನು ಎಲ್ಲರಿಗೂ ಹೇಳುವ ಸಂಕಲ್ಪದಿಂದ ಈ ಮರಣದಂಡನೆ ಕೊಡುವವನ ಜೀವನದ ಬಗ್ಗೆ ಒಂದು ಕಾದಂಬರಿಯನ್ನೇ ಬರೆಯಬೇಕೆಂದು ಮನಸ್ಸು ಮಾಡಿದೆ. ಅವನು ಹೇಳಿದ ಅನುಭವಗಳಷ್ಟೇ ಸಾಲದೆನ್ನಿಸಿದಾಗ ಈ ವಿಷಯವನ್ನು ಚೆನ್ನಾಗಿ ತಿಳಿದುಕೊಳ್ಳುವುದಕ್ಕಾಗಿ ಅದಕ್ಕೆ ಸಂಬಂಧಿತವಾದ ಇತರ ವಿಷಯಗಳ ಬಗ್ಗೆಯೂ ನಾನು ವಿಚಾರ ಮಾಡಬೇಕಾಗಿದ್ದುದು ಅವಶ್ಯಕವೆನ್ನಿಸಿತು. ಮಗ, ಗಂಡ, ತಂದೆ ಹಾಗೂ ಇತರ ಸಂಬಂಧಗಳ ಜವಾಬ್ದಾರಿಯನ್ನು ನಿಭಾಯಿಸುವುದಕ್ಕಾಗಿ ಜೈಲಿನಲ್ಲಿ ಹ್ಯಾಂಗ್‌ಮನ್ನನ ಪಾತ್ರವನ್ನು ವಹಿಸುವ ಆ ಗಲ್ಲಿಗೇರಿಸುವವನು ಅನುಭವಿಸುವ ಮಾನಸಿಕ ಸಂಘರ್ಷಗಳು, ಇದು ಅವನ ಜೀವನದ ಒಂದು ಭಾಗವಾದರೆ, ಇನ್ನೊಂದೆಡೆ ಅವನ ಬಂಧುಗಳು ಅವನಿಂದ ತಮ್ಮ ಮನಸ್ಸಿನ ಇಚ್ಛೆಗಳು ಪೂರ್ಣಗೊಳ್ಳದಾಗ ಅನುಭವಿಸುವ ಹತಾಶೆಯು ಇನ್ನೊಂದು ಭಾಗ. ಅವನ ಜೀವನದ ಈ ಇನ್ನೊಂದು ಮುಖವನ್ನೂ ನಾವು ಗಮನಿಸಲೇಬೇಕಾಗುತ್ತದೆ. ಅದರೊಂದಿಗೇ ಅವನ ಜೈಲಿನ ಕರ್ತವ್ಯಗಳು, ಅನೇಕ ರೀತಿಯ ಕೈದಿಗಳನ್ನು ಎದುರಿಸುವ ಅನಿವಾರ್ಯತೆ, ಕೈದಿಗಳ ಬರಾಕುಗಳು, ಜೇಲರು, ಜೈಲಿನ ವಾತಾವರಣ, ಅಲ್ಲಿಯ ನಿಯಮಗಳು, ಫಾಶಿ ಶಿಕ್ಷೆ ವಿಧಿಸುವುದಕ್ಕೂ ಮೊದಲಿನ ಪೂರ್ವಸಿದ್ಧತೆ, ಅದಕ್ಕೆ ಸಹಕರಿಸುವ ಅಧಿಕಾರಿಗಳು, ಜೈಲಿನಲ್ಲಿ ನಡೆಯುವಂಥ ಸಂಗತಿಗಳು ಹೀಗೆ ಅನೇಕ ಘಟನೆಗಳ ಬಗ್ಗೆ ಈ ಕಾದಂಬರಿಯು ಎರಡು ಸ್ತರಗಳಲ್ಲಿ ಮುನ್ನಡೆಯುತ್ತದೆ. 

About the Author

ಮಾಲತಿ ಮುದಕವಿ
(10 April 1950)

ಲೇಖಕಿ ಮಾಲತಿ ಮುದಕವಿ ಅವರು ಎಂ ಎ., ಬಿ ಎಡ್ ಪದವೀಧರರು. ನಿವೃತ್ತ ಕನ್ನಡ ಉಪನ್ಯಾಸಕಿ. ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿಕೆ.  ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ...

READ MORE

Related Books