ಕತೆಗಾರ್ತಿ ಮಾಲತಿ ಮುದಕವಿ ಮೂರನೆಯ ಕಥಾಸಂಕಲನ- 'ಜೀವನ ಸಂಧ್ಯಾರಾಗ' ಈ ಸಂಕಲನದಲ್ಲಿ 25ಕ್ಕೂ ಮಿಕ್ಕಿ ಕಥೆಗಳಿವೆ. ಕಥನ ಶೈಲಿ, ವೈವಿಧ್ಯಮಯ ಕಥಾ ವಸ್ತು, ಅದರ ನಿರ್ವಹಣೆ, ಅವುಗಳಿಗೆ ಕೊಡುವ ತಿರುವಿನಿಂದಾಗಿ ಕಥೆಗಳು ಪರಿಣಾಮಕಾರಿಯಾಗಿವೆ.
ಈ ಸಂಕಲನದ ಒಂದು ಕತೆ 'ತೇಜಸ್ವಿನಿ' ಯಲ್ಲಿ ಇಂದಿನ ಆಧುನಿಕ ಸಮಾಜದಲ್ಲಿ ವೃದ್ಧಾಪ್ಯದಲ್ಲಿ ಹಿರಿಯರು ಅನುಭವಿಸುವ ಏಕಾಕಿತನ, ಅನಾಥಪ್ರಜ್ಞೆ ಸಹಜನಾಗಿದೆ. ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಇಲ್ಲದೆ ಹೋದರೂ ಅವರು ಮಕ್ಕಳ ಮನೆಯಲ್ಲಿ ಎಷ್ಟೇ ಐಷಾರಾಮಿ ಸುಖ ಸೌಲಭ್ಯಗಳಲ್ಲಿ ಇದ್ದರೂ ಅವರನ್ನು ಒಂದು ರೀತಿಯಲ್ಲಿ ಪ್ರಾಚ್ಯ ವಸ್ತುಗಳಂತೆಯೇ ಭಾವಿಸಲಾಗುತ್ತದೆ ಎಂಬುದು ವಾಸ್ತವಾಂಶ.
'ನಾಕೋಶಿ' ಯಂತಹ ಕತೆ (ನಾಕೋಶಿ ಎಂದರೆ ಬೇಡದ ಮಗು) ಪುರುಷ ಪ್ರಾಧಾನ್ಯತೆಯನ್ನು ಒಪ್ಪಿಕೊಂಡಿರುವ ಸಮಾಜದಲ್ಲಿ ದಂಪತಿಗಳ ಚಿತ್ರಣವಿದೆ. 'ಸಾಫ್ಟ್‍ವೇರ್ ಅಮಲು' ಕತೆಯ ನಿರೂಪಣೆಯಲ್ಲಿ ಸಫಲರಾಗಿದ್ದಾರೆ. 'ಬರಲಿವೆ ಮಾನವರೂಪಿ ಪ್ರಾಣಿಗಳು' ವೈದ್ಯಕೀಯ ಕ್ಷೇತ್ರದ ಸಂಶೋಧನೆಯನ್ನು ಚಿತ್ರಿಸುವ ವೈಜ್ಞಾನಿಕ ಕತೆ. 'ವೇನಿ ನಾ ಬಂದೆ', 'ನಮ್ಮಮ್ಮ ಸುಂದರಿ' ಕತೆಗಳು ಮಾನವೀಯ ಅಂತಃಕರಣವನ್ನು ಮಿಡಿಯುತ್ತವೆ.
ವಿಜಯಪುರದ ಪಿಯು ಕಾಲೇಜಿನಲ್ಲಿ ಕನ್ನಡ ಅರೆಕಾಲಿಕ ಉಪನ್ಯಾಸಕಿ ಆಗಿರುವ ಮಾಲತಿ ಮುದಕವಿ ಮೂರು ಕಥಾ ಸಂಕಲನ ಪ್ರಕಟಿಸಿದ್ದಾರೆ. ಮೂರು ಕಥಾಸಂಕಲನಗಳು: ಚಿತ್ತ ಚಿತ್ತಾರ ಗಂಧವತೀ ಪೃಥ್ವಿ ಜೀವನ ಸಂಧ್ಯಾ ರಾಗ ಒಂದು ಹಾಸ್ಯ ಸಂಕಲನ: ಹಾಸ್ಯ ರಂಗೋಲಿ(ಅಚ್ಚಿನಲ್ಲಿ) ಎರಡು ಸಂಭಾವನಾ ಗ್ರಂಥಗಳು: ಶುಭದಾ: ನೆನಪಿನ ಭಾವತರಂಗ ಮಂದಾಕಿನಿ ಪ್ರಕಟಿತ ಕೃತಿಗಳು. ಎಂ ಎ., ಬಿ ಎಡ್. ಪದವಿ ಪಡೆದಿರುವ ಅವರು ಸದ್ಯ ವಾರಪತ್ರಿಕೆ, ದಿನಪತ್ರಿಕೆ, ಮಾಸಪತ್ರಿಕೆಗಳಲ್ಲಿ ಲೇಖನ, ಕಥೆ , ಹಾಸ್ಯ ಲೇಖನ ಪ್ರಕಟಗೊಂಡಿವೆ. ಮರಾಠಿಯಿಂದ ಅನೇಕ ಕಥೆಗಳನ್ನು ಅನುವಾದ ಕೂಡ ಮಾಡಿದ್ದು, ಪ್ರಿಯಾಂಕಾ ಪತ್ರಿಕೆಯು ಪ್ರತಿ ವರ್ಷ ಏರ್ಪಡಿಸುವ ಬೆನಕ ...
READ MORE"ಜೀವನದ ರಕ್ಷಕಗೋಡೆ ಇದ್ದು ಬಯಲಾದ ಅನುಭವ ಬರುವವರೆಗೂ ನಾವು ಆಶಾವಾದಿಗಳೇ ಆಗಿರುತ್ತೇವೆ. ಹುಟ್ಟಿನ ಬೆನ್ನಿಗೇ ಬಂದಿರುವ ಸಾವಿನ ಗಡಿಯಾರ ತನ್ನ ಕ್ಷಣಗಣನೆಯನ್ನು ಕರಾರುವಾಕ್ಕಾಗಿ ನಡೆಸುತ್ತಿರುವ ಅರಿವಿದ್ದೂ ಅದನ್ನು ಮರೆತವರಂತೆ ಬದುಕುತ್ತೇವೆ. ಹಳೆಯ ಸಂಬಂಧಗಳ ಕೊಂಡಿ ಕಳಚುತ್ತಿರುವಂತೆಯೇ ಹೊಸ ಸಂಬಂಧಗಳಿಗೆ ಹಾತೊರೆಯುತ್ತೇವೆ. ವಯಸ್ಸಾದಂತೆ ಹಳೆಯ ಸಂಬಂಧಗಳು ಯಾವ್ಯಾವುದೋ ಕಾರಣಕ್ಕಾಗಿ ಕಳಚಿಕೊಳ್ಳುತ್ತವೆ. ಆದರೆ ಈ ವಯಸ್ಸಿನಲ್ಲಿ ಸಂಬಂಧಗಳು ಹುಟ್ಟುವುದಿಲ್ಲ.. ಖಾಲಿತನ ಎದೆಯನ್ನು ಚುಚ್ಚತೊಡಗುತ್ತದೆ. ಆಗ ನಮ್ಮ ಸಂಗಾತಿಗಳೆಂದರೆ ಹಳೆಯ ನೆನಪುಗಳು ಮಾತ್ರ..."
-(ತೇಜಸ್ವಿನಿ ಕತೆಯಿಂದ ಆಯ್ದ ಭಾಗ)