ಪ್ರೇಮ ಸಾಫಲ್ಯ ಹಾಗೂ ಇತರ ಕಥೆಗಳು

Author : ಮಾಲತಿ ಮುದಕವಿ

Pages 232

₹ 210.00




Year of Publication: 2021
Published by: ದಾಕ್ಷಾಯಿಣಿ ಪ್ರಕಾಶನ
Address: # 418/1, ವೀಣೆ ಶ್ಯಾಮಣ್ಣ ರಸ್ತೆ, ಅಗ್ರಹಾರ, ಮೈಸೂರು-570004
Phone: 9740129274

Synopsys

ಲೇಖಕಿ ಮಾಲತಿ ಮುದಕವಿ ಅವರ ಸಣ್ಣ ಕಥೆಗಳ ಸಂಕಲನ-ಪ್ರೇಮ ಸಾಫಲ್ಯ ಹಾಗೂ ಇತರ ಕಥೆಗಳು. ಪ್ರೇಮ ಸಾಫಲ್ಯ, ಕಥೆಯು ದೇವಯಾನಿ-ಉದಯ್ ಮಧ್ಯೆ ಇರುವ ಪ್ರೇಮ ಸಂಬಂಧ ಸುತ್ತ ಹೆಣೆದ ಕಥೆ. ಒಂದು ಹೆಣ್ಣಿನ ಆತ್ಮಕಥೆ ಎಂಬುದು ಮತ್ತೊಂದು ಕಥೆ. ಬಡ ಹುಡುಗಿ ಸುಲೋಚನಾ ಸಾಹುಕಾರನ ಮಗ ಸುಮತೀಂದ್ರನೊಂದಿಗೆ ಮದುವೆಯಾಗುತ್ತಾಳೆ. ಆದರೆ, ಆತ ಚಪಲಗಾರ, ಮದ್ಯವ್ಯಸನಿ. ಗಿರಿಜೆಯೊಂದಿಗೆ ಸಂಪರ್ಕವಿರುತ್ತದೆ. ಅವಳಿಗೆ ಮಗನಿರುತ್ತಾನೆ. ಸುಮತೀಂದ್ರನ ತಂದೆಯು ಸುಲೋಚನಾ ಹೆಸರಿಗೆ ಹೆಸರಿಗೆ ಎಲ್ಲ ಆಸ್ತಿ ಬರೆದಿಡುತ್ತಾನೆ. ಮುಂದೆ, ಗಿರಿಜೆ ಮಗ ಗಿರಿಧರ ಮುಂದೆ ವೈದ್ಯನಾಗುತ್ತಾನೆ. ಗಿರಿಜೆಯ ಒಳ್ಳೆಯತನಕ್ಕೆ ಸುಲೋಚನಾ ಮಾರುಹೋಗಿ ಗಿರಿಧರನನ್ನು ದತ್ತು ಪಡೆಯುತ್ತಾಳೆ. ಇದು ಆ ಕಥೆಯ ಸಾರಾಂಶ.

‘ಮೊದಲ ಸ್ಥಾನ’ ಎಂಬುದು ಮತ್ತೊಂದು ಕಥೆ.  ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಅಂಕಗಳ ಮೇಲಾಟದಲ್ಲಿ ಕಿರುಕುಳ ನೀಡುವ ಪಾಲಕರ ಒತ್ತಡದಿಂದಾಗಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಇಂತಹ ಒತ್ತಡದಿಂದ ಒಂದು ಪುಟ್ಟ ಮಗುವಿನ ಮನದ ಮೇಲಾದ ಪರಿಣಾಮದ ಕಥೆಯಿದು. ‘ಕೊನೆಯ ಅಂಕ’ ಕಾಲೇಜಿನಲ್ಲಿ ಹುಡುಗರು ನಾಟಕ ಮಾಡುತ್ತಿರುತ್ತಾರೆ. ಕೊನೆಯ ಅಂಕದಲ್ಲಿ ಹಿರೋನ ಮೇಲೆ ಹೀರೋಯಿನ್ ಗುಂಡು ಹಾರಿಸುವ ಪ್ರಸಂಗವಿರುತ್ತದೆ. ನಕಲಿ ಗುಂಡುಗಳು ಇರಬೇಕಾದ ಜಾಗದಲ್ಲಿ ಯಾರೋ ಅಸಲಿ ಗುಂಡುಗಳನ್ನು ಹಾಕಿರುವದರಿಂದ ನಾಯಕ ನಿಜಕ್ಕೂ ಸತ್ತು ಹೋಗುತ್ತಾನೆ. ನಂತರ ಪತ್ತೆದಾರನ ಪ್ರವೇಶವಾಗಿ ಯಾವ ರೀತಿ ಕೊಲೆಗಾರನನ್ನು ಕಂಡುಹಿಡಿಯುತ್ತಾನೆ ಎಂಬುದು ಕಥಾ ವಸ್ತು. ‘ಇವರ ಬಿಟ್ಟು ಇವರ್‍ಯಾರು?’ ಚಂದಮಾಮದ ಕಥೆಯೊಂದರಿಂದ ಸ್ಫೂರ್ತಿ ಪಡೆದ ದಿಟ್ಟೆ ನಾಯಕಿ ತನ್ನ ಸಮಸ್ಯೆಯನ್ನು ತಾನೇ ಬಗೆಹರಿಸಿಕೊಳ್ಳುತ್ತಾಳೆ. ಕಥೆಯ ಕೊನೆಗೆ ಬರುವ "ಹೆಣ್ಣಿನ ಜೀವನಕ್ಕೆ ಮದುವೆ ಒಂದೇ ಗುರಿಯೇ? ಆಕೆಗೂ ಬೇಕಾದಷ್ಟು ಆಸೆ ಆಕಾಂಕ್ಷೆಗಳಿರುತ್ತವೆ, ಧ್ಯೇಯಗಳಿರುತ್ತವೆ" ಎಂಬ ಮಾತು ಈ ಕಥೆಯ ವಸ್ತು. ‘ಎಲ್ಲವೂ ಅರ್ಧ ಗ್ಲಾಸ್’  ಚಹಾಕ್ಕಾಗಿ ಮನೆ ಕೆಲಸ ಮಾಡುವ ಹೆಣ್ಣು ಮಗಳ ಒಳತುಮುಲಗಳ ಕಥೆ ಇದು. ಹೀಗೆ ‘ಕಾಲ ಬದಲಾಗಿದೆ’,  ‘ಬದಲಾವಣೆ ಜಗದ ನಿಯಮ’ ‘ಫಿರ್ ವೊಹೀ ಶಾಮ್’ , ‘ಓ ಗೆಳತಿ, ನೀನೆಷ್ಟು ಸುಖಿ’ ‘ಋಣ ಋಣ’ ‘ಬದುಕ ಬದಲಿಸಲಾರೆವು’ ‘ತಾರಿಯ ಮೈ ಮ್ಯಾಲೇ ದೇವರು’ ‘ನಕ್ಷತ್ರ ನಕ್ಕಾಗ ’ ‘ಪ್ರಥಮ ಭೇಟಿಯ ಪ್ರೀತಿ’ ‘ಭರವಸೆಯ ಬೆಳಕು’ ‘ಸ್ವಾಮೀಜಿಯವರ ಸೇವೆ’ ‘ಹ್ಯಾಪಿ ವ್ಯಾಲೆಂಟೈನ್ಸ್ ಡೇ’ ‘ಒಂದು ವರೋಪಚಾರದ ಪ್ರಸಂಗ’ ‘ಗಾಳಿಮಾತು’ ‘ವಶೀಲಿ’ ‘ಅಮ್ಮ ನೀನು ಸುಖವಾಗಿರಮ್ಮ’  ‘ಸಂಬಂಧಗಳು’  ಹೀಗೆ ಒಟ್ಟು 24 ಕಥೆಗಳನ್ನು ಒಳಗೊಂಡಿವೆ. 

About the Author

ಮಾಲತಿ ಮುದಕವಿ
(10 April 1950)

ಲೇಖಕಿ ಮಾಲತಿ ಮುದಕವಿ ಅವರು ಎಂ ಎ., ಬಿ ಎಡ್ ಪದವೀಧರರು. ನಿವೃತ್ತ ಕನ್ನಡ ಉಪನ್ಯಾಸಕಿ. ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿಕೆ.  ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ...

READ MORE

Related Books