ಅಹಲ್ಯಾ ಬಿಡಿ

Author : ಎಸ್. ಸುರೇಂದ್ರನಾಥ್

Pages 100




Year of Publication: 2020
Published by: ನಾಕುತಂತಿ ಪ್ರಕಾಶನ
Address: #1162, 22ನೇ ಮುಖ್ಯ ರಸ್ತೆ, 23ನೇ ಮೈನ್, ಬಿ.ಎಸ್.ಕೆ 2ನೇ ಹಂತ, ಬೆಂಗಳೂರು-560070,
Phone: 8026713782

Synopsys

ನಾರ್ವೇಜಿಯನ್ ನಾಟಕಕಾರ, ನಿರ್ದೇಶಕ, ಲೇಖಕ ಹೆನ್ರಿಕ್‌ ಇಬ್ಸೆನ್‌ ಅವರ ಹೆಸರಾಂತ ನಾಟಕ ʻಹೆಡ್ಡಾ ಗ್ಯಾಬ್ಲರ್‌ʼ ನ ಕನ್ನಡ ಅನುವಾದ ʻಅಹಲ್ಯಾ ಬಿ.ಡಿ.ʼ. ಲೇಖಕ ಎಸ್. ಸುರೇಂದ್ರನಾಥ್‌ ಅವರು ರೂಪಾಂತರಿಸಿದ್ದಾರೆ. ನಾಟಕವು ಮನೋವಿಜ್ಞಾನದ ಮೇಲೆ ಹೆಚ್ಚು ಕೇಂದ್ರೀಕರಿಸಲಾಗಿದೆ. ಸೇನಾಪತಿಯ ಮಗಳು ಹೆಡ್ಡಾ ತನಗೆ ಇಷ್ಟವಿಲ್ಲದ ಮದುವೆ ಮಾಡಿಕೊಂಡು ಇಷ್ಟವಿಲ್ಲದ ಜೀವನ ನಡೆಸಿಕೊಂಡು ಹೋಗುವ ಹಾಗೂ ವಿಕೃತ ಸ್ತ್ರೀತ್ವಕ್ಕೆ ಒಂದು ಉದಾಹರಣೆಯಾಗಿ ಚಿತ್ರಿಸಲ್ಪಟ್ಟ ಪಾತ್ರವಾಗಿದೆ. ಇಡೀ ನಾಟಕ ಪತಿ ಜುರ್ಗೆನ್ ಟೆಸ್‌ಮನ್‌ನ ಲಿವಿಂಗ್ ರೂಮ್‌ನಲ್ಲಿ ಮತ್ತು ಅದರ ಬದಿಯಲ್ಲಿರುವ ಚಿಕ್ಕ ಕೋಣೆಯಲ್ಲಿ ಈ ಇಬ್ಬರು ನವವಿವಾಹಿತರ ಮಧ್ಯೆ ನಡೆಯುತ್ತದೆ.

About the Author

ಎಸ್. ಸುರೇಂದ್ರನಾಥ್

ಸುರೇಂದ್ರನಾಥ್ ಅವರು ಹುಟ್ಟಿದ್ದು ಮೂಡಬಿದರೆಯ ಸಮೀಪದ ಒಂದು ಹಳ್ಳಿಯಲ್ಲಿ. ಓದಿದ್ದು ಬೆಳೆದಿದ್ದು ದಾವಣಗೆರೆಯಲ್ಲಿ. ಓದಿನ ಸಮಯದಲ್ಲೇ ಸಾಹಿತ್ಯ, ನಾಟಕದ ಗೀಳು ಹತ್ತಿಸಿಕೊಂಡ ಅವರು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಾಟಕದ ತರಬೇತಿ ಪಡೆದರು. ಹೊಟ್ಟೆಪಾಡಿಗಾಗಿ ಒಂದಿಷ್ಟು ವರ್ಷಗಳು ಹಲವಾರು ಪತ್ರಿಕೆಗಳಲ್ಲಿ, ಜಾಹೀರಾತು ಕಂಪೆನಿಗಳಲ್ಲಿ ದುಡಿದಿದ್ದಾರೆ. ಬೆಂಗಳೂರಿನ ಸಂಕೇತ್ ತಂಡದಲ್ಲಿ ಸೇರಿ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಆನಂತರ ಈಟಿವಿ ಸಂಸ್ಥೆಯನ್ನು ಸೇರಿದ ಅವರು ಹದಿಮೂರು ವರ್ಷಗಳ ಕಾಲ ಹೈದರಾಬಾದಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ವೃತ್ತಿ, ರಂಗಭೂಮಿ ಒಡನಾಟಗಳೊಂದಿಗೆ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಸುರೇಂದ್ರನಾಥ್ ಎರಡು ಕಥಾಸಂಕಲನಗಳು - ಕಟ್ಟು ...

READ MORE

Related Books