ಸುವರ್ಣ ಕರ್ನಾಟಕ- ಶಾಲಾ ಮಕ್ಕಳ ನಾಟಕಗಳು

Author : ಬಿ.ವಿ. ರಾಜಾರಾಂ

Pages 1900

₹ 80.00




Year of Publication: 2008
Published by: 'ಸಂಸ'
Address: 12ನೇ 'ಎ' ಮುಖ್ಯರಸ್ತೆ, 6ನೇ ಬಡಾವಣೆ, ರಾಜಾಜಿನಗರ, ಬೆಂಗಳೂರು - 560010

Synopsys

‘ಸುವರ್ಣ ಕರ್ನಾಟಕ- ಶಾಲಾ ಮಕ್ಕಳ ನಾಟಕಗಳು’ (ಎಂಟು ಸಂಪುಟಗಳು) ಕೃತಿಯನ್ನು ಹಿರಿಯ ಲೇಖಕ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಬಿ.ವಿ. ರಾಜಾರಾಂ ಅವರು ಸಂಪಾದಿಸಿದ್ದಾರೆ. ಶಾಲಾ ಮಕ್ಕಳಿಗಾಗಿ ಬರೆದ 50 ನಾಟಕಗಳು ಎಂಟು ಸಂಪುಟಗಳಲ್ಲಿ ಸಂಗ್ರಹಿಸಲ್ಪಟ್ಟಿವೆ. ಸಮಕಾಲೀನ ವಿಚಾರಗಳನ್ನಿಟ್ಟುಕೊಂಡೇ ಮಕ್ಕಳ ಮನಸ್ಸಿನಲ್ಲಿ ಉತ್ತಮ ಮೌಲ್ಯಗಳನ್ನು ತುಂಬುವಂತೆ ಈ ನಾಟಕಗಳನ್ನು ರಚಿಸಿದ್ದಾರೆ.

About the Author

ಬಿ.ವಿ. ರಾಜಾರಾಂ

ನಟ, ರಂಗಕರ್ಮಿ ಬಿ.ವಿ. ರಾಜಾರಾಂ ಅವರು ಕನ್ನಡ ರಂಗಭೂಮಿಯ ಅದ್ಭುತ ನಟರು. ಕಿರುತೆರೆ ಹಿರಿತೆರೆಗಳಲ್ಲಿಯೂ ನಡಿಸಿರುವ ಇವರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಮೈಸೂರಿನ ರಂಗಾಯಣದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿರುವ ಇವರಿಗೆ ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದ ಇವರು ಮಕ್ಕಳಿಗಾಗ ‘ಶಾಲಾ ಅಂಗಳಕ್ಕೆ ಮಕ್ಕಳ ನಾಟಕಗಳು; ಕೃತಿಯನ್ನು ರಚಿಸಿದ್ದಾರೆ.  ...

READ MORE

Reviews

ಪುಸ್ತಕ ಪರಿಚಯ: ಹೊಸತು-2009 ಮೇ 

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಬಿ. ವಿ. ರಾಜಾರಾಂ ಸಂಪಾದಕತ್ವದಲ್ಲಿ ಪುಟ್ಟ ಮಕ್ಕಳಿಗಾಗಿ ಅಭಿನಯಿಸಲು ಐವತ್ತು ನಾಟಕಗಳು ಎಂಟು ಸಂಪುಟಗಳಲ್ಲಿ ಸಂಗ್ರಹಿಸಲ್ಪಟ್ಟಿವೆ. ಉತ್ತಮ ಮೌಲ್ಯಗಳು ಎಳೆಯರ ಮನಸ್ಸಿನಲ್ಲಿ ಬೇರೂರಬಹುದಾದಂಥ ನೀತಿಪ್ರಧಾನವಾದ ಈ ನಾಟಕಗಳನ್ನು ನಾಡಿನ ಪ್ರಸಿದ್ಧ ಲೇಖಕರು ಬರೆದುಕೊಟ್ಟಿದ್ದಾರೆ. ಮನರಂಜನೆಯ ದೃಷ್ಟಿಯಿಂದಲೂ, ಬೌದ್ಧಿಕ ಬೆಳವಣಿಗೆಯ ಕಾರಣಕ್ಕೂ ಇವನ್ನು ಮಕ್ಕಳಿಂದಲೇ ಅಭಿನಯಿಸಿ ಪ್ರಯೋಗಿಸಿದರೆ ಪರಿಣಾಮ ತುಂಬ ಚೆನ್ನಾಗಿರಬಹುದು. ಸಮಕಾಲೀನ ವಸ್ತು ವೈವಿಧ್ಯವಿದ್ದು ವಿಚಾರಪ್ರಚೋದಕ ವಿಷಯಗಳಿವೆ.

Related Books